ಪಾಕಿಸ್ತಾನ ಭಯೋತ್ಪಾದಕರಿಗೆ ರಕ್ಷಣೆ ನೀಡುವುದನ್ನು ನಿಲ್ಲಿಸಬೇಕು: ಅಮೆರಿಕ

ಭಯೋತ್ಪಾದಕರಿಗೆ ರಕ್ಷಣೆ ನೀಡುವುದನ್ನು ಬಿಡಲು ಅಮೆರಿಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮನವಿ ಮಾಡಿದ್ದು, ಭಯೋತ್ಪಾದನೆ ವಿಷಯದಲ್ಲಿ ತಾರತಮ್ಯ ಮಾಡದಂತೆ ಎಚ್ಚರಿಸಿದೆ.
ಅಮೆರಿಕ
ಅಮೆರಿಕ

ವಾಷಿಂಗ್ ಟನ್: ಭಯೋತ್ಪಾದಕರಿಗೆ ರಕ್ಷಣೆ ನೀಡುವುದನ್ನು ಬಿಡಲು ಅಮೆರಿಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮನವಿ ಮಾಡಿದ್ದು, ಭಯೋತ್ಪಾದನೆ ವಿಷಯದಲ್ಲಿ ತಾರತಮ್ಯ ಮಾಡದಂತೆ ಎಚ್ಚರಿಸಿದೆ.

ಅಮೆರಿಕದ ಪತ್ರಿಕಾ ನಿರ್ದೇಶಕರ ಕಚೇರಿಯಿಂದ ಅಧಿಕೃತವಾದ ಹೇಳಿಕೆ ಬಿಡುಗಡೆಯಾಗಿದ್ದು, ಪಾಕಿಸ್ತಾನ ಭಯೋತ್ಪಾದಕರಿಗೆ ಅನುಕೂಲಕರವಾದ ವಾತಾವರಣ ನೀಡುತ್ತಿರುವುದರ ಬಗ್ಗೆ ಅಮೆರಿಕ ನಿರಂತರವಾಗಿ ಆತಂಕ ವ್ಯಕ್ತಪಡಿಸುತ್ತಿದೆ.

ಅಂತೆಯೇ ಭಯೋತ್ಪಾದನೆ ನಿರ್ಮೂಲನೆಗೆ ಪಾಕಿಸ್ತಾನ ಬದ್ಧತೆ ಪ್ರದರ್ಶಿಸಬೇಕೆಂದು ಎಚ್ಚರಿಕೆ ನೀಡುತ್ತಿದೆ ಎಂದು ಪತ್ರಿಕಾ ನಿರ್ದೇಶಕಿ ಎಲಿಜಬೆತ್ ಟ್ರುಡೆಯೊ ಹೇಳಿದ್ದಾರೆ.ಅಫ್ಘಾನಿಸ್ಥಾನದಲ್ಲಿರುವ ಅಮೆರಿಕನ್ ವಿವಿ ಮೇಲೆ ಭಯೋತ್ಪಾದಕ ದಾಳಿ ನಡೆದ ಬೆನ್ನಲ್ಲೇ ಅಮೆರಿಕದಿಂದ ಈ ಹೇಳಿಕೆ ಬಿಡುಗಡೆಯಾಗಿದೆ. ದಾಳಿ ಕುರಿತು ಪ್ರತಿಕ್ರಿಯೆ ನೀಡಿದ್ದ ಅಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ, ಈ ದಾಳಿಯನ್ನು ಪಾಕಿಸ್ತಾನದ ಉಗ್ರ ಸಂಘಟನೆಗಳು ನಡೆಸಿವೆ ಎಂದು ಹೇಳಿದ್ದರು.

ಅಮೆರಿಕನ್ ವಿವಿ ಮೇಲೆ ದಾಳಿ ನಡೆಸಿದ್ದ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಘನಿ ಪಾಕಿಸ್ಥಾನದ ಸೇನಾ ಮುಖ್ಯಸ್ಥ ರಹೀಲ್ ಷರೀಫ್ ಅವರನ್ನು ಒತ್ತಾಯಿಸಿದ್ದರು. ಆದರೆ ಪಾಕಿಸ್ತಾನ ಮಾತ್ರ ಎಂದಿನಂತೆ ಈ ಬಗ್ಗೆ ಹೆಚ್ಚಿನ ಸಾಕ್ಷ್ಯಾಧಾರಗಳಿಗಾಗಿ ಬೇಡಿಕೆ ಇಟ್ಟಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com