ಕಿರ್ಗಿಸ್ತಾನ್ ಆತ್ಮಹತ್ಯಾ ದಾಳಿ (ಸಂಗ್ರಹ ಚಿತ್ರ)
ಕಿರ್ಗಿಸ್ತಾನ್ ಆತ್ಮಹತ್ಯಾ ದಾಳಿ (ಸಂಗ್ರಹ ಚಿತ್ರ)

ಕಿರ್ಗಿಸ್ತಾನ್ ಚೀನಾ ರಾಯಭಾರ ಕಚೇರಿ ಮೇಲೆ ಬಾಂಬ್ ದಾಳಿ: 1 ಸಾವು, ಮೂವರಿಗೆ ಗಾಯ

ಕಿರ್ಗಿಸ್ತಾನದಲ್ಲಿ ಮತ್ತೆ ಉಗ್ರರು ಭಾರಿ ಕುಕೃತ್ಯಕ್ಕೆ ಸಂಚು ರೂಪಿಸಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಿಶ್ಕೆಕ್: ಕಿರ್ಗಿಸ್ತಾನದಲ್ಲಿ ಮತ್ತೆ ಉಗ್ರರು ಭಾರಿ ಕುಕೃತ್ಯಕ್ಕೆ ಸಂಚು ರೂಪಿಸಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ  ಎಂದು ತಿಳಿದುಬಂದಿದೆ.

ಅಂದಿನ ಸೋವಿಯತ್ ಉಕ್ಕೂಟದ ರಾಜಧಾನಿಯಾಗಿದ್ದ ಕಿರ್ಗಿಸ್ತಾನದ ಬಿಶ್ಕೆಕ್ ನಲ್ಲಿರುವ ಚೀನಾ ರಾಯಭಾರ ಕಚೇರಿ ಮೇಲೆ ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ  ಓರ್ವ ಸಾವನ್ನಪ್ಪಿ ಮೂವರು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಆತ್ಮಹತ್ಯಾ ಬಾಂಬರ್ ಉಗ್ರ ಎಂದು ತಿಳಿದುಬಂದಿದ್ದು, ಗಾಯಗೊಂಡ ಮೂವರು ರಾಯಭಾರ ಕಚೇರಿ ಭದ್ರತಾ  ಸಿಬ್ಬಂದಿಗಳು ಎಂದು ತಿಳಿದುಬಂದಿದೆ.

ಆತ್ಮಹತ್ಯಾ ಬಾಂಬ್ ದಾಳಿ ಕುರಿತಂತೆ ಮಾಹಿತಿ ನೀಡಿರುವ ಕಿರ್ಗಿಸ್ತಾನ್ ಉಪ ಪ್ರಧಾನಿ ಜೆನಿಶ್ ರಝಕೋವ್ ಅವರು, ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಓರ್ವ ಉಗ್ರ ಸಾವನ್ನಪ್ಪಿ, ಮೂವರು  ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡಿರುವ ಬಿಶ್ಕೆಕ್ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು, ಮಿತ್ಶುಬಿಶಿ ಡೆಲಿಕಾ ಕಾರಿನಲ್ಲಿ  ವೇಗವಾಗಿ ಅಗಮಿಸಿದ ಆಗಂತುಕನೋರ್ವ ರಾಯಭಾರ ಕಚೇರಿಯ ಗೇಟ್ ಗೆ ಗುದ್ದಿದ್ದು, ಭದ್ರತಾ ಅಧಿಕಾರಿಗಳು ಸಮೀಪಕ್ಕೆ ಆಗಮಿಸುತ್ತಿದ್ದಂತೆಯೇ ಬಾಂಬ್ ಸ್ಫೋಟಗೊಳಿಸಿದ್ದಾನೆ. ಈ ವೇಳೆ  ಆತ ಮೃತನಾಗಿದ್ದು, ಸ್ಥಳದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಕಾರಿನಲ್ಲೇ ಬಾಂಬ್ ಅಳವಡಿಸಿ ಬಳಿಕ ಗೇಟ್ ಬಳಿ ಸ್ಫೋಟಿಸಲಾಗಿದೆ ಎಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com