ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯಲು ಜರ್ಮನಿಯಲ್ಲಿ ಬಲೂಚ್ ರಾಷ್ಟ್ರೀಯವಾದಿಗಳಿಂದ ಪ್ರತಿಭಟನೆ

ಬಲೂಚಿಸ್ಥಾನದ ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಿದ್ದು, ಬಲೂಚ್ ರಾಷ್ಟ್ರೀಯ ಚಳುವಳಿ(ಬಿಎನ್ಎಂ) ಸಂಘಟನೆ ಜರ್ಮನಿಯ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ...
ಬಲೂಚ್ ರಾಷ್ಟ್ರೀಯ ಚಳುವಳಿ
ಬಲೂಚ್ ರಾಷ್ಟ್ರೀಯ ಚಳುವಳಿ

ಮ್ಯೂನಿಚ್: ಬಲೂಚಿಸ್ಥಾನದ ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಿದ್ದು, ಬಲೂಚ್ ರಾಷ್ಟ್ರೀಯ ಚಳುವಳಿ(ಬಿಎನ್ಎಂ) ಸಂಘಟನೆ ಜರ್ಮನಿಯ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯಲು ಯತ್ನಿಸಿದೆ.

ಜರ್ಮನಿಯ ಮ್ಯೂನಿಚ್, ಬರ್ಲಿನ್ ನಲ್ಲಿ ಬಲೂಚಿಸ್ಥಾನ ರಾಷ್ಟ್ರೀಯ ಚಳುವಳಿ ಸಂಘಟನೆ ಕಾರ್ಯಕ್ರತರು ಪಾಕಿಸ್ತಾನದಿಂದ ನಡೆಯುತ್ತಿರುವ ಬಲೂಚಿಸ್ಥಾನದ ಜನತೆಯ ಹತ್ಯೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕಣ್ಮರೆಯನ್ನು ಖಂಡಿಸಿದ್ದು, ನರಮೇಧ ಹಾಗು ರಾಷ್ಟ್ರೀಯವಾದಿಗಳ ನಿಗೂಢ ಕಣ್ಮರೆಗೆ ಪಾಕಿಸ್ತಾನವೇ ನೇರ ಹೊಣೆ ಎಂದು ಆರೋಪಿಸಿದೆ.

ಆ.30 ರಂದು ನಾಪತ್ತೆಯಾಗಿರುವ ಬಲೂಚಿಸ್ಥಾನ ಸಂತ್ರಸ್ತರ ದಿನವನ್ನಾಗಿ ಆಚರಣೆ ಮಾಡಿರುವ ಬಲೂಚಿಸ್ಥಾನ ರಾಷ್ಟ್ರೀಯ ಚಳುವಳಿ ಸಂಘಟನೆ ಕಾರ್ಯಕರ್ತರು, ಕೈಗೆ ಸರಪಳಿ ಹಾಕಿಕೊಂಡು, ರಕ್ತದ ಕಲೆ ಇರುವ ಅಂಗಿಗಳನ್ನು ಧರಿಸುವ ಮೂಲಕ  ಪಾಕಿಸ್ತಾನ ಬಲೂಚಿಸ್ಥಾನದಲ್ಲಿ ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆಯನ್ನು ಅಂತಾರಾಷ್ಟ್ರೀಯ ಸಮುದಾಯದ ಗಮನಕ್ಕೆ ತರಲು ಯತ್ನಿಸಿದ್ದಾರೆ.

ಬಲೂಚಿಸ್ಥಾನದಿಂದ ನಾಪತ್ತೆಯಾಗಿರುವವರನ್ನು ವಾಪಸ್ ಕರೆತರಲು ಪ್ರತಿಭಟನಾ ನಿರತರು ಅಮೆರಿಕ, ಯುರೋಪ್, ವಿಶ್ವಸಂಸ್ಥೆ ಸಹಕಾರ ಕೋರಿದ್ದು, ಪಾಕಿಸ್ತಾನ ತನ್ನದಲ್ಲದ ಬಲೂಚಿಸ್ಥಾನವನ್ನು 1948 ರಲ್ಲಿ ಕಾನೂನಿಗೆ ವಿರುದ್ಧವಾಗಿ ಬಲೂಚಿಸ್ಥಾನದ ಜನತೆಯ ಇಚ್ಛೆಗೆ ವಿರುದ್ಧವಾಗಿ ಆಕ್ರಮಿಸಿಕೊಂಡಿದೆ ಎಂದು ಬಲೂಚಿಸ್ಥಾನ ರಾಷ್ಟ್ರೀಯ ಚಳುವಳಿ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com