ಪಾಕ್ ಏರ್ ಲೈನ್ಸ್ ವಿಮಾನ ಪತನ: ಸಾವಿನ ಸಂಖ್ಯೆ 48ಕ್ಕೆ ಏರಿಕೆ

ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್(ಪಿಐಎ)ಗೆ ಸೇರಿದ ವಿಮಾನವೊಂದು ಬುಧವಾರ ಅಬಟೋಬಾದ್ ನ ಹವೇಲಿಯನ್ ಬಳಿ ಪತನವಾಗಿದ್ದು, ಸಿಬ್ಬಂದಿಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 48 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪತನವಾದ ಪಿಐಎ ವಿಮಾನ
ಪತನವಾದ ಪಿಐಎ ವಿಮಾನ

ಕರಾಚಿ: ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್(ಪಿಐಎ)ಗೆ ಸೇರಿದ ವಿಮಾನವೊಂದು ಬುಧವಾರ ಅಬಟೋಬಾದ್ ನ ಹವೇಲಿಯನ್ ಬಳಿ ಪತನವಾಗಿದ್ದು, ಸಿಬ್ಬಂದಿಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 48 ಮಂದಿ  ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವಿಮಾನವು ಪಾಕಿಸ್ತಾನದ ಚಿತ್ರಾಲ್ ನಿಂದ ಇಸ್ಲಾಮಾಬಾದ್ ಗೆ ತೆರಳುತ್ತಿತ್ತು ಎಂದು ತಿಳಿದುಬಂದಿದ್ದು, ನಿನ್ನೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಚಿತ್ರಾಲ್ ನಿಂದ ಟೇಕಾಫ್ ಆದ  ವಿಮಾನ ಸಂಖ್ಯೆ ಪಿಕೆ-661 ATR-42 (AP- BHO) ವಿಮಾನ 4.30ರ ಸಂದರ್ಭದಲ್ಲಿ ರಾಡಾರ್ ನಿಂದ ಸಂಪರ್ಕ ಕಳೆದುಕೊಂಡಿತು. ಸಂಪರ್ಕ ಕಡಿತವಾದ ಕೆಲವೇ ನಿಮಿಷಗಳಲ್ಲಿ ವಿಮಾನ ಹವೇಲಿಯನ್ ಬಳಿ ಪತನವಾಗಿದೆ ಎಂದು  ಎಂದು ತಿಳಿದುಬಂದಿದೆ. ವಿಮಾನ  ಅಫಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಐವರು ಸಿಬ್ಬಂದಿಗಳು ಹಾಗೂ ಓರ್ವ ಎಂಜಿನಿಯರ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 48 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ವಿಮಾನದಲ್ಲಿದ್ದ ಪಾಕಿಸ್ತಾನದ ಖ್ಯಾತ ಗಾಯಕ ಜುನೈದ್ ಜೆಮ್ ಶೇಡ್  ಹಾಗೂ ಅವರ ಪತ್ನಿ ಕೂಡ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com