ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಥಾಮಸ್ ಶೆಲ್ಲಿಂಗ್ ನಿಧನ

ಖ್ಯಾತ ಅರ್ಥಶಾಸ್ತ್ರಜ್ಞ ಥಾಮಸ್ ಶೆಲ್ಲಿಂಗ್ ಅವರು ಮಂಗಳವಾರ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಖ್ಯಾತ ಅರ್ಥಶಾಸ್ತ್ರಜ್ಞ ಥಾಮಸ್ ಶೆಲ್ಲಿಂಗ್ ಅವರು ಮಂಗಳವಾರ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

2005ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ರಾಬರ್ಟ್ ಔಮನ್ನ್ ರೊಂದಿಗೆ ಜಂಟಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದ ಥಾಮಸ್ ಶೆಲ್ಲಿಂಗ್ ಅವರು ಮಂಗಳವಾರ ರಾತ್ರಿ ಅವರ ಮೇರಿಲ್ಯಾಂಡ್ ನಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದಾರೆ. 95  ವರ್ಷದ ಥಾಮಸ್ ಶೆಲ್ಲಿಂಗ್ ಅವರು, ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಹಾರ್ವರ್ಡ್ ವಿಶ್ವವಿದ್ಯಾಲಯ ಹಾಗೂ ಮೆರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಆಗಿದ್ದ ಥಾಮಸ್ ಶೆಲ್ಲಿಂಗ್ ಅವರು, ಪರಮಾಣು ತಂತ್ರಗಾರಿಕೆಯನ್ನು ಗೇಮ್ ಥಿಯರಿ ಮೂಲಕ ವಿವರಿಸಿದ್ದರು. ಥಾಮಸ್ ಶೆಲ್ಲಿಂಗ್ ಅವರ  ಗೇಮ್ ಥಿಯರಿ ಗಣಿತಶಾಸ್ತ್ರದ ಅಧ್ಯಯನವಾಗಿದ್ದು, ಸ್ಪರ್ಧಾತ್ಮಕ ಸಂದರ್ಭಗಳ ತಂತ್ರಗಾರಿಕೆಯಾಗಿವೆ. ಇವರ ಸಾಧನೆಯನ್ನು ಪುರಸ್ಕರಿಸಿ ಅವರಿಗೆ 2005ರಲ್ಲಿ ನೊಬೆಲ್ ಪಾರಿತೋಷಕ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com