ಸೋಲಿಗೆ ರಷ್ಯಾ ಸೈಬರ್ ದಾಳಿ ಕಾರಣ: ಹಿಲರಿ ಕ್ಲಿಂಟನ್

ಕಳೆದ ತಿಂಗಳು ಮುಕ್ತಾಯಗೊಂಡ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬ ಆರೋಪ ಈಗಾಗಲೇ ಕೇಳಿಬಂದಿದ್ದು, ಪರಾಜಯಗೊಂಡ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸಹ ಆರೋಪಗಳಿಗೆ ಪೂರಕವಾಗಿ ಹೇಳಿಕೆ ನೀಡಿದ್ದಾರೆ.
ಹಿಲರಿ ಕ್ಲಿಂಟನ್
ಹಿಲರಿ ಕ್ಲಿಂಟನ್
ವಾಷಿಂಗ್ ಟನ್: ಕಳೆದ ತಿಂಗಳು ಮುಕ್ತಾಯಗೊಂಡ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬ ಆರೋಪ ಈಗಾಗಲೇ ಕೇಳಿಬಂದಿದ್ದು, ಪರಾಜಯಗೊಂಡ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸಹ ಆರೋಪಗಳಿಗೆ ಪೂರಕವಾಗಿ ಹೇಳಿಕೆ ನೀಡಿದ್ದಾರೆ. 
ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುವುದಕ್ಕೆ ನನ್ನ ವಿರುದ್ಧ ರಷ್ಯಾ ನಡೆಸಿದ ಸೈಬರ್ ದಾಳಿ(ಇ-ಮೇಲ್ ಹ್ಯಾಕ್) ಕಾರಣ ಎಂದು ಹಿಲರಿ ಕ್ಲಿಂಟನ್ ಗಂಭೀರ ಆರೋಪ ಮಾಡಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿರುವ ಆಡಿಯೋ ಒಂದರಲ್ಲಿ ಹಿಲರಿ ಕ್ಲಿಂಟನ್, "ನನ್ನ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ಇರುವ ವೈಯಕ್ತಿಕ ದ್ವೇಷವೇ ಕಾರಣ ಎಂದು ಹಿಲರಿ ಕ್ಲಿಂಟನ್ ಆರೋಪ ಮಾಡಿದ್ದಾರೆ. 
ಕೊನೆಯ ಕ್ಷಣದಲ್ಲಿ ಅಮೆರಿಕಾದ ಜನತೆ ಮತ ಬದಲಾವಣೆ ಮಾಡಲು ರಷ್ಯಾದ ಸೈಬರ್ ದಾಳಿಯೇ ಕಾರಣ ಎಂದು ಹಿಲರಿ ಕ್ಲಿಂಟನ್ ಆರೋಪ ಮಾಡಿದ್ದಾರೆ. ಇದಕ್ಕೂ ಮುನ್ನ ರಷ್ಯಾದ ಸೈಬರ್ ದಾಳಿ ಬಗ್ಗೆ ಹೇಳಿಕೆ ನೀಡಿದ್ದ ಅಧ್ಯಕ್ಷ ಒಬಾಮ, ಅಮೆರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com