ಬಾಲಕಾರ್ಮಿಕ ಪದ್ಧತಿ ನಿಷೇಧ: ವಿಶ್ವಸಂಸ್ಥೆಯ ಬಗ್ಗೆ ಶಿಕ್ಷಣ ತಜ್ಞರ ಆಕ್ಷೇಪ!

ಬಾಲಕಾರ್ಮಿಕ ಪದ್ಧತಿ ನಿಷೇಧಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಕೆಲವು ಅಂಶಗಳು ಪಾಶ್ಚಿಮಾತ್ಯ ಪೂರ್ವಾಗ್ರಹಕ್ಕೆ ಹಿಡಿದ ಕೈಗನ್ನಡಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಾಲಕಾರ್ಮಿಕ ಪದ್ಧತಿ ನಿಷೇಧ( ಸಾಂದರ್ಭಿಕ ಚಿತ್ರ)
ಬಾಲಕಾರ್ಮಿಕ ಪದ್ಧತಿ ನಿಷೇಧ( ಸಾಂದರ್ಭಿಕ ಚಿತ್ರ)
ಲಂಡನ್: ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸುವ ವಿಶ್ವಸಂಸ್ಥೆಯ ಸಮಾವೇಶಕ್ಕೆ ಜಾಗತಿಕ ಸಮುದಾಯದ ಶಿಕ್ಷಣ ತಜ್ಞರಿಂದ ಆಕ್ಷೇಪ ವ್ಯಕ್ತವಾಗಿದ್ದು,  ಬಾಲಕಾರ್ಮಿಕ ಪದ್ಧತಿ ನಿಷೇಧಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಕೆಲವು ಅಂಶಗಳು ಪಾಶ್ಚಿಮಾತ್ಯ ಪೂರ್ವಾಗ್ರಹಕ್ಕೆ ಹಿಡಿದ ಕೈಗನ್ನಡಿ ಎಂದು ಅಭಿಪ್ರಾಯಪಟ್ಟಿದ್ದಾರೆ. 
ದಿ ಅಬ್ಸರ್ವರ್ ಎಂಬ ಪತ್ರಿಕೆಗೆ ಪತ್ರ ಬರೆದಿರುವ ಕೆಲವು ಶಿಕ್ಷಣ ತಜ್ಞರು, ಅಪ್ರಾಪ್ತರು ಕೆಲಸ ಮಾಡುವುದರಿಂದ ಸಕಾರಾತ್ಮಕ ಪರಿಣಾಮಗಳೂ ಉಂಟಾಗುತ್ತವೆ ಎಂಬ ಅಂಶವನ್ನು ವಿಶ್ವಸಂಸ್ಥೆ ಪರಿಗಣಿಸಿಯೇ ಇಲ್ಲ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ವಿಶ್ವಸಂಸ್ಥೆಯ ಸಮಿತಿ ಮಕ್ಕಳು ಕೆಲಸ ಮಾಡುವುದರಿಂದ ಸಕಾರಾತ್ಮಕ ಪರಿಣಾಮಗಳೂ ಉಂಟಾಗುತ್ತವೆ ಎಂಬ ಅಂಶವನ್ನು ಬದಿಗಿರಿಸಿ ಪಾಶ್ಚಿಮಾತ್ಯ ಪೂರ್ವಾಗ್ರಹಕ್ಕೀಡಾಗಿ ಲಭ್ಯವಿರುವ ಸಾಕ್ಷ್ಯಗಳನ್ನು ನಿರ್ಲಕ್ಷಿಸಿದೆ ಎಂದು  
ಮಕ್ಕಳ ಕಲ್ಯಾಣ ಹಾಗೂ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂಶೋಧನೆ ಮಾಡುತ್ತಿರುವವರು ಆರೋಪಿಸಿದ್ದಾರೆ. 
ಬಾಲಕಾರ್ಮಿಕ ಪದ್ಧತಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಕೆಲವು ಅಂಶಗಳು ಬೇರು ಮಟ್ಟದಲ್ಲಿ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೆಲವು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಸೆಕ್ಸ್ ವಿಶ್ವವಿದ್ಯಾನಿಲಯದ ಗ್ಲೋಬಲ್ ಸ್ಟಡೀಸ್ ವಿಭಾಗದ ಡೊರ್ಟೆ ಥಾರ್ಸನ್ ಈ ಬಗ್ಗೆ ಮಾತನಾಡಿದ್ದು, ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧ ಮಾಡಿದರೆ ಕೆಲಸ ಮಾಡುತ್ತಿರುವ ಮಕ್ಕಳು ಶಾಲೆಗೆ ವಾಪಸ್ಸಾಗುವುದಿಲ್ಲ. ಒಂದು ವೇಳೆ ಶಾಲೆಗೆ ಹೋಗುವುದಕ್ಕಾಗಿಯೇ ಅವರು ಕೆಲಸ ಮಾಡುತ್ತಿದ್ದರೆ ವಿಶ್ವಸಂಸ್ಥೆಯ ನಿರ್ಧಾರ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
2025 ರ ವೇಳೆಗೆ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂದು 193 ರಾಷ್ಟ್ರಗಳು ಈಗಾಗಲೆ ನಿರ್ಧರಿಸಿವೆ. ಆದರೆ ಕೆಲಸಕ್ಕೆ ಸೆರಲು ಇರುವ ಕನಿಷ್ಠ ವಯೋಮಾನ (ಕೆಲವು ರಾಷ್ಟ್ರಗಳಲ್ಲಿ 15, ಮತ್ತೆ ಕೆಲವು ರಾಷ್ಟ್ರಗಳಲ್ಲಿ 18) ನ್ನು ಕೈಬಿಡಬೇಕೆಂದು ಕೆಲವು ಶಿಕ್ಷಣ ತಜ್ಞರು ಹೇಳಿದ್ದು ವಯಸ್ಸಿಗೆ ತಕ್ಕಂತಹ ಕೆಲಸ ಮಾಡುವುದು ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com