ಬರ್ಲಿನ್ ಕ್ರಿಸ್'ಮಸ್ ಮಾರುಕಟ್ಟೆಯಲ್ಲಿ ಶಂಕಿತ ಉಗ್ರರ ದಾಳಿ: 9 ಮಂದಿ ದುರ್ಮರಣ

ಬರ್ಲಿನ್ ಕ್ರಿಸ್ ಮಸ್ ಮಾರುಕಟ್ಟೆಯಲ್ಲಿ ಶಂಕಿತರ ಉಗ್ರರು ದಾಳಿ ಮಾಡಿದ್ದು, ಜನನಿ ಬಿಡ ಪ್ರದೇಶದ ಮೇಲೆ ಟ್ರಕ್ ನುಗ್ಗಿಸಿದ ಪರಿಣಾಮ 9 ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆ ನಡೆದಿದೆ...
ಘಟನಾ ಸ್ಥಳಕ್ಕೆ ದೌಡಾಯಿಸುವ ಅಗ್ಮಿಶಾಮಕ ದಳದ ಸಿಬ್ಬಂದಿಗಳು
ಘಟನಾ ಸ್ಥಳಕ್ಕೆ ದೌಡಾಯಿಸುವ ಅಗ್ಮಿಶಾಮಕ ದಳದ ಸಿಬ್ಬಂದಿಗಳು

ಬರ್ಲಿನ್: ಬರ್ಲಿನ್ ಕ್ರಿಸ್ ಮಸ್ ಮಾರುಕಟ್ಟೆಯಲ್ಲಿ ಶಂಕಿತರ ಉಗ್ರರು ದಾಳಿ ಮಾಡಿದ್ದು, ಜನನಿ ಬಿಡ ಪ್ರದೇಶದ ಮೇಲೆ ಟ್ರಕ್ ನುಗ್ಗಿಸಿದ ಪರಿಣಾಮ 9 ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆ ನಡೆದಿದೆ.

ಕ್ರಿಸ್ ಮಸ್ ಹಬ್ಬ ಹತ್ತಿರ ಬರುತ್ತಿದ್ದು, ಐಕೋನಿಕ್ ಕೈಸರ್ ವಿಲ್ಹೆಲ್ಮ್ ಮೆಮೋರಿಯಲ್ ಚರ್ಚ್ ಬಳಿರುವ ಕ್ರಿಸ್'ಮಸ್ ಮಾರುಕಟ್ಟೆ ರಸ್ತೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಸಂದರ್ಭವನ್ನೇ ಎದುರು ನೋಡುತ್ತಿದ್ದ ಶಂಕಿತ ಉಗ್ರರು ಜನನಿಬಿಡ ಪ್ರದೇಶದ ಮೇಲೆ ಟ್ರಕ್ ನುಗ್ಗಿಸಿದ್ದಾರೆ. ಪರಿಣಾಮ ಸ್ಥಳದಲ್ಲಿ 9 ಮಂದಿ ಸಾವನ್ನಪ್ಪಿ, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.

ಬ್ರೈಟ್ಸಚೀಡ್ ಪ್ಲಾಟ್ಜಾ ನಗರದ ಬಳಿ ಘಟನೆ ನಡೆಸಿದ್ದು, ಈಗಾಗಲೇ ಶಂಕಿತರನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಕಪ್ಪುಬಣ್ಣದ ಟ್ರಕ್ ವೊಂದು ವೇಗಗತಿಯಲ್ಲಿ ಬಂದು ಇದ್ದಕ್ಕಿದ್ದಂತೆ ಜನರ ಮೇಲೆ ಹೋಗಿತ್ತು. ಈ ವೇಳೆ ಜನರು ಜೋರಾಗಿ ಕಿರುಚಾಡಲು ಆರಂಭಿಸಿದ್ದರು. ನಂತರ ಅಪಾಯದಲ್ಲಿ ಸಿಲುಕಿದ್ದ ಕೆಲವರನ್ನು ರಕ್ಷಣೆ ಮಾಡಿದೆ. ಸ್ಥಳದಲ್ಲಿ ಎಲ್ಲಿ ನೋಡಿದರೂ ರಕ್ತವೇ ಕಾಣಿಸುತ್ತಿತ್ತು ಎಂದು ಸ್ಥಳೀಯ ಒ'ನೀಲ್ ಎಂಬುವವರು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.

ಟ್ರಕ್ ನಲ್ಲಿದ್ದ ಎಲ್ಲಾ ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಂಕಿತ ಉಗ್ರರು ದಾಳಿ ನಡೆಸಿದ್ದಾರೆಂದು ಶಂಕೆಗಳು ವ್ಯಕ್ತವಾಗುತ್ತಿದ್ದು, ಘಟನೆ ಕುರಿತಂತೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com