ಟರ್ಕಿ: ಅಂಗರಕ್ಷಕನಿಂದಲೇ ರಷ್ಯಾ ರಾಯಭಾರಿಯ ಬರ್ಬರ ಹತ್ಯೆ

ಟರ್ಕಿ ಹಾಗೂ ರಷ್ಯಾ ನಡುವೆ ಸಂಬಂಧ ಹದಗೆಡುತ್ತಿರುವ ಬೆನ್ನಲ್ಲೇ ಟರ್ಕಿ ರಾಜಧಾನಿ ಅಂಕಾರಾದಲ್ಲಿ ರಷ್ಯಾ ರಾಯಭಾರಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ...
ಟರ್ಕಿ: ಅಂಗರಕ್ಷಕನಿಂದಲೇ ರಷ್ಯಾ ರಾಯಭಾರಿಯ ಬರ್ಬರ ಹತ್ಯೆ
ಟರ್ಕಿ: ಅಂಗರಕ್ಷಕನಿಂದಲೇ ರಷ್ಯಾ ರಾಯಭಾರಿಯ ಬರ್ಬರ ಹತ್ಯೆ

ನ್ಯೂಯಾರ್ಕ್: ಟರ್ಕಿ ಹಾಗೂ ರಷ್ಯಾ ನಡುವೆ ಸಂಬಂಧ ಹದಗೆಡುತ್ತಿರುವ ಬೆನ್ನಲ್ಲೇ ಟರ್ಕಿ ರಾಜಧಾನಿ ಅಂಕಾರಾದಲ್ಲಿ ರಷ್ಯಾ ರಾಯಭಾರಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಅಂಕಾರಕ್ಕೆ ರಷ್ಯಾ ರಾಯಭಾರಿಯಾಗಿರುವ ಅಂಡ್ರ್ಯೂ ಕರ್ಲೋವ್  ಅವರನ್ನು ಅವರ ಅಂಗರಕ್ಷನೇ ಗುಂಡಿಟ್ಟು ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ.

ಅಂಕಾರಾದ ಕಲಾ ಗ್ಯಾಲರಿಯಲ್ಲಿ ಅಂಡ್ರ್ಯೂ ಕರ್ಲೋವ್ ಅವ್ ಅವರು ಭಾಷಣ ಮಾಡುತ್ತ ವೇಳೆ ಗುಂಡಿನ ದಾಳಿ ಮಾಡಲಾಗಿದೆ.

ಹತ್ಯೆ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಕರ್ಲೋವ್ ಅವರ ಮೇಲೆ ದಾಳಿ ಮಾಡಿದ ನಂತರ ಶಂಕಿತ ವ್ಯಕ್ತಿ ಅಲ್ಲಾಹು ಅಕ್ಬರ್ ಎಂದು ಹೇಳಿದ್ದಾನೆ. ಗುಂಡು ಹಾರಿ ಕೆಳಗೆ ಬಿದ್ದ ಕರ್ಲೋವ್ ಅವರು, ಅಲೆಪ್ಪೊ ಮರೆಯಬೇಡಿ, ಸಿರಿಯಾ ಮರೆಯಬೇಡಿ ಎಂದು ಕೂಗಿದ್ದಾರೆ.

ದಾಳಿಯನ್ನು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಝಖರೋವಾ ಅವರು ಖಂಡಿಸಿದ್ದು, ದಾಳಿಯನ್ನು ಉಗ್ರರ ದಾಳಿಯೆಂದೇ ನಾವು ಪರಿಗಣಿಸಿದ್ದೇವೆ. ಟರ್ಕಿ ಅಧಿಕಾರಿಗಳೊಂದಿಗೆ ನಿರಂತವಾಗಿ ಸಂಪರ್ಕದಲ್ಲಿದ್ದೇವೆ. ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಅಲ್ಲಿನ ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದ್ದಾರೆ.

ದಾಳಿಕೋರರಿಗೆ ಶಿಕ್ಷೆ ಖಚಿತವಾಗಿದ್ದು, ಭಯೋತ್ಪಾದನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಭಯೋತ್ಪಾದನೆ ವಿರುದ್ಧ ಹೋರಾಡುತ್ತೇವೆ. ಕರ್ಲೋವ್ ಅವರು ನಮ್ಮ ಹೃದಯದಲ್ಲಿ ಎಂದಿಗೂ ಇರುತ್ತಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com