ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿರಿಯಾ ಮೇಲೆ ವಾಯುದಾಳಿ ಮುಂದುವರಿಕೆ: 22 ನಾಗರಿಕರ ಸಾವು!

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಕಪಿಮುಷ್ಠಿಯಲ್ಲಿರುವ ಸಿರಿಯಾದಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ವಾಯುದಾಳಿ ಮುಂದುವರೆಸಿದ್ದು, ಮಂಗಳವಾರ ನಡೆದ ವಾಯುದಾಳಿಯಲ್ಲಿ ಕನಿಷ್ಠ 22 ಮಂದಿ ನಾಗಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬೈರುತ್: ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಕಪಿಮುಷ್ಠಿಯಲ್ಲಿರುವ ಸಿರಿಯಾದಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ವಾಯುದಾಳಿ ಮುಂದುವರೆಸಿದ್ದು, ಮಂಗಳವಾರ ನಡೆದ ವಾಯುದಾಳಿಯಲ್ಲಿ ಕನಿಷ್ಠ 22 ಮಂದಿ ನಾಗಕರು  ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಾಸಿರಿಯಾದ ತೈಲ ಸಂಪದ್ಭರಿತ ನಗರಿ ಡೈಯರ್ ಎಜೋರ್ ಮೇಲೆ ವಾಯುದಾಳಿ ನಡೆಸಲಾಗಿದ್ದು, ವನ್ನಪ್ಪಿದವರ ಪೈಕಿ 10 ಮಕ್ಕಳು, ವೃದ್ಧರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಡೈಯರ್ ಎಜೋರ್ ನಗರದ ಹೊಜ್ನಾ  ಗ್ರಾಮದ ಮೇಲೆ ವಾಯುದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಹಲವಾರು ಮನೆಗಳು ನಾಶವಾಗಿವೆ. ಪ್ರಮುಖ ಗ್ರಾಮದಲ್ಲಿ ಎರಡು ಇಡೀ ಕುಟುಂಬಗಳೇ ನಾಶವಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ವಾಯುದಾಳಿ ಪೀಡಿತ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಾನವಹಕ್ಕು ಸಂಘಟನೆ ಕಾರ್ಯಕರ್ತರು ಸಿರಿಯಾದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ರೆಡ್ ಕ್ರಾಸ್ ಸಂಸ್ಥೆ ಕಾರ್ಯಕರ್ತರೊಂದಿಗೆ ಸೇರಿ ರಕ್ಷಣಾ  ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಸ್ತುತ ವಾಯುದಾಳಿಗೆ ತುತ್ತಾಗಿರುವ ಡೈಯರ್ ಎಜೋರ್ ನಗರ ತೈಲ ಸಂಪದ್ಭರಿತ ನಗರವಾಗಿದ್ದು, ಇಲ್ಲಿನ ಪ್ರಮುಖ ಇಂಧನ ಕಾರ್ಖಾನೆಗಳು ಇಸಿಸ್ ಉಗ್ರಗಾಮಿಗಳ ವಶದಲ್ಲಿದೆ. ಕಾರ್ಖಾನೆಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರ  ಹಿಡಿತದಿಂದ ಬಿಡಿಸಲು ಅಮೆರಿಕ ಮಿತ್ರ ಪಡೆಗಳು ಇಲ್ಲಿ ನಿಯಮಿತವಾಗಿ ದಾಳಿ ನಡೆಸುತ್ತಿರುತ್ತವೆ.

Related Stories

No stories found.

Advertisement

X
Kannada Prabha
www.kannadaprabha.com