ತಾಲೀಬಾನ್ ವಿಷಯವಾಗಿ ಭಾರತವನ್ನು ಬದಿಗಿರಿಸಿ ರಷ್ಯಾ, ಚೀನಾ ಪಾಕಿಸ್ತಾನ ಸಭೆ!

ಉಗ್ರ ಸಂಘಟನೆ ತಾಲೀಬಾನ್ ನೊಂದಿಗೆ ರಾಜಕೀಯವಾಗಿ ಮಾತುಕತೆ ನಡೆಸುವ ವಿಚಾರವಾಗಿ ಭಾರತವನ್ನು ಬದಿಗಿರಿಸಿ ರಷ್ಯಾ ಚೀನಾ ಪಾಕಿಸ್ತಾನ ಸಭೆ ನಡೆಸಿವೆ.
ತಾಲೀಬಾನ್
ತಾಲೀಬಾನ್
Updated on: 
ನವದೆಹಲಿ: ಉಗ್ರ ಸಂಘಟನೆ ತಾಲೀಬಾನ್ ನೊಂದಿಗೆ ರಾಜಕೀಯವಾಗಿ ಮಾತುಕತೆ ನಡೆಸುವ ವಿಚಾರವಾಗಿ ಭಾರತವನ್ನು ಬದಿಗಿರಿಸಿ ರಷ್ಯಾ ಚೀನಾ ಪಾಕಿಸ್ತಾನ ಸಭೆ ನಡೆಸಿವೆ. 
ತಾಲೀಬಾನ್ ಉಗ್ರ ಸಂಘಟನೆಯನ್ನು ಇಸೀಸ್ ಉಗ್ರ ಸಂಘಟನೆ ವಿರುದ್ಧ ಬಳಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಉದ್ದೇಶದಿಂದ ತಾಲೀಬಾನ್ ನೊಂದಿಗೆ ರಾಜಕೀಯವಾಗಿ ಮಾತುಕತೆ ನಡೆಸಲು ರಷ್ಯಾ ಚೀನಾ ಪಾಕಿಸ್ತಾನ ಸಭೆ ನಡೆಸಿವೆ. ಅಫ್ಘಾನಿಸ್ತಾನದ ವಿರೋಧದ ನಡುವೆಯೂ ಸಹ ಮಾಸ್ಕೋದಲ್ಲಿ ರಷ್ಯಾ ಚೀನಾ ಪಾಕಿಸ್ತಾನ ಸಭೆ ನಡೆಸಿರುವುದು ಅಚ್ಚರಿ ಮೂಡಿಸಿದೆ. 
ಇರಾನ್ ನನ್ನೂ ಸಹ ತಮ್ಮ ಗುಂಪಿಗೆ ಸೇರಿಸಿಕೊಳ್ಳಲು ಮೂರು ರಾಷ್ಟ್ರಗಳು ಉತ್ಸುಕವಾಗಿದ್ದು, ಅಫ್ಘಾನಿಸ್ತಾನವನ್ನು ಮುಂದಿನ ಸಭೆಗೆ ಆಹ್ವಾನಿಸಲು ತೀರ್ಮಾನಿಸಿವೆ. ಮಾಸ್ಕೋದಲ್ಲಿ ನಡೆದ ಸಭೆಯ ಬಗ್ಗೆ ರಷ್ಯಾದ ಅಬ್ಸರ್ವರ್ ರಿಸರ್ಚ್ ಫೌಂಡೇಷನ್ ನ ವಿಶ್ಲೇಷಕ ನಂದನ್ ಉನ್ನಿಕೃಷ್ಣನ್ ವಿಶ್ಲೇಷಿಸಿದ್ದು, ಭಾರತ-ರಷ್ಯಾ ನಡುವಿನ ಸೀಮಿತ ಸಂಪರ್ಕದಿಂದ, ರಷ್ಯಾದ ಈಗಿನ ನಡೆ ದ್ವಿಪಕ್ಷೀಯ ಸಂಬಂಧಕ್ಕೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  
ದಿನಪೂರ್ತಿ ನಡೆದ ಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾ, ಚೀನಾ, ಪಾಕಿಸ್ತಾನ ಇಸೀಸ್ ಉಗ್ರ ಸಂಘಟನೆ ವಿರುದ್ಧ ಹೋರಾಡುವುದಕ್ಕೆ ಹಾಗೂ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವುದಕ್ಕೆ ತಾಲೀಬಾನ್ ನೊಂದಿಗೆ ರಾಜಕೀಯ ಮಾತುಕತೆ ನಡೆಸುವ ಆಯ್ಕೆಯನ್ನು ಪರಿಗಣಿಸಿರುವುದಾಗಿ ತಿಳಿಸಿದೆ. ಅಷ್ಟೇ ಅಲ್ಲದೇ ಇದಕ್ಕೆ ಪೂರಕವಾಗುವಂತೆ, ವಿಶ್ವಸಂಸ್ಥೆಯಲ್ಲಿ ತಾಲೀಬಾನ್ ಉಗ್ರ ಸಂಘಟನೆಯ ಉಗ್ರರಿಗೆ ನಿರ್ಬಂಧ ತೆರವುಗೊಳಿಸುವ ವಿಷಯದ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. 
ಭಾರತ ತಾಲೀಬಾನ್ ಉಗ್ರ ಸಂಘಟನೆಯನ್ನು ಅಫ್ಘಾನಿಸ್ತಾನಕ್ಕೆ ಮಾರಕ ಎಂಬ ಅಭಿಪ್ರಾಯ ಹೊಂದಿದ್ದು ತಾಲೀಬಾನ್ ಉಗ್ರ ಸಂಘಟನೆಯೊಂದಿಗೆ ಮಾತುಕತೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ.  ತಾಲೀಬಾನ್ ಉಗ್ರ ಸಂಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾದ ಕೆಂಪು ರೇಖೆಯನ್ನು ಮಾನ್ಯ ಮಾಡಬೇಕು, ಭಯೋತ್ಪಾದನೆ, ದೌರ್ಜನ್ಯಗಳನ್ನು ಬಿಡಬೇಕು ಹಾಗೂ ಅಲ್-ಖೈದಾ ಉಗ್ರ ಸಂಘಟನೆಯೊಂದಿಗಿನ ನಂಟನ್ನು ಕಳಚಿ ಪ್ರಜಾಸತ್ತಾತ್ಮಕ ನಿಯಮಗಳನ್ನು ಒಪ್ಪಿಕೊಳ್ಳಬೇಕು ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಇತ್ತೀಚೆಗಷ್ಟೇ ಹೇಳಿದ್ದರು. ಅಲ್ಲದೇ ತಾಲೀಬಾನ್ ನೊಂದಿಗೆ ಮಾತುಕತೆ ನಡೆಸದಂತೆ ಭಾರತ ರಷ್ಯಾಗೂ ಸಹಲೆ ನೀಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com