
ವಾಷಿಂಗ್ಟನ್: ಅಮೆರಿಕದಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಕಾರಣವಾಗಿರುವ ಇಸ್ಲಾಂ ನಿಗ್ರಹ ಉದ್ದೇಶ ಅಮೆರಿಕಕ್ಕೆ ಇಲ್ಲ. ಅಮೆರಿಕ ನಿಜಕ್ಕೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಬದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಅಮೆರಿಕದ ಮೇರಿಲ್ಯಾಂಡ್‍ನ ಬಾಲ್ಟಿಮೋರ್ ನಲ್ಲಿರುವ ಮಸೀದಿಗೆ ಭೇಟಿ ನೀಡಿದ ಬರಾಕ್ ಒಬಾಮ ಅವರು, ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಮೆರಿಕ ಕಂಕಣಬದ್ಧವಾಗಿದೆ. ಅಮೆರಿಕ ನಿಜವಾಗಿಯೂ ಎಲ್ಲಾ ಧರ್ಮಗಳನ್ನು ರಕ್ಷಿಸುತ್ತದೆ ಎಂಬುದನ್ನು ನಾವು ತೊರಿಸಬೇಕಿದೆ ಎಂದು ಒಬಾಮ ಹೇಳಿದರು.
"ಅಮೆರಿಕದಲ್ಲಿ ನೆಲೆಸಿರುವ ಮುಸ್ಲಿಮರಲ್ಲಿರುವ ಭಯ ಹೋಗಲಾಡಿಸಿ, ಕಾಳಜಿ ವಹಿಸುವ ಸಮಯ ಇದು. ಅಮೆರಿಕ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದೆಯೇ ವಿನಃ ಯಾವುದೇ ಧರ್ಮದ ಮೇಲೆ ಅಲ್ಲ. ಇಸ್ಲಾಂ ಧರ್ಮವನ್ನು ನಿಗ್ರಹಿಸುವ ಉದ್ದೇಶ ಅಮೆರಿಕಕ್ಕಿಲ್ಲ. ಕ್ರಿಶ್ಚಿಯನ್ನರ ಪ್ರಾಬಲ್ಯವಿರುವ ಅಮರಿಕದಲ್ಲಿ ಯಾವುದೇ ಧರ್ಮದ ಧರ್ಮಾಂಧತೆ ಕುರಿತು ಮೌನವಾಗಿರುವುದಿಲ್ಲ. ಅಮೆರಿಕದಲ್ಲಿನ ಮುಸ್ಲಿಮರು ಕೆಲವು ವಿಚಾರಗಳಿಗೆ ಆತಂಕಗೊಂಡಿದ್ದಾರೆ ಎಂದು ತಿಳಿದಿದೆ. ಅಮೆರಿಕನ್ನರು ಭಯೋತ್ಪಾದನೆಯ ಕುರಿತು ಚಿಂತಿತರಾಗಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ನಾವು ದೇಶದಲ್ಲಿನ ಮುಸ್ಲಿಮರ ಕುರಿತಾಗಿ ಕಾಳಜಿ ವಹಿಸಬೇಕಿದೆ. ಯಾವುದೇ ಹಿಂಸಾಚಾರಕ್ಕೆ ಎಡೆಮಾಡಿಕೊಡದೆ ಸೌಹಾರ್ಧವಾಗಿ ಬದುಕಬೇಕಿದೆ" ಎಂದು ಹೇಳಿದರು.
"ಒಂದು ಧರ್ಮದಿಂದ ದಾಳಿ ನಡೆದರೆ, ಎಲ್ಲಾ ಧರ್ಮದ ಮೇಲೆಯೂ ದಾಳಿ ನಡೆದಂತೆ. ಸಿಖ್ಖರ ವಿರುದ್ಧವೂ ದೇಶದಲ್ಲಿ ಇದೇ ಅಸಹನೆಯಿದೆ. ಯಾರೊಬ್ಬರನ್ನು ವಿನಾಕಾರಣ ಗುರಿ ಮಾಡದೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯದಿಂದ ಬದುಕಬೇಕಿದೆ. ನಾವು ಅಮೆರಿಕನ್ನರು ಎಲ್ಲಾ ಧರ್ಮವನ್ನು ಗೌರವಿಸುತ್ತೇವೆ. ನಾವು ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆಯೇ ಹೊರತು ಮುಸ್ಲಿಂ ಧರ್ಮದ ವಿರುದ್ಧವಲ್ಲ ಎಂದು ಒಬಾಮ ಹೇಳಿದರು.
Advertisement