ವಿತ್ತ ಸಚಿವಾಲಯದ ಅಧಿಕೃತ ಯೂಟ್ಯೂಬ್ ಚಾನೆಲ್ ಬಿಡುಗಡೆ

ಕೇಂದ್ರ ಹಣಕಾಸು ಸಚಿವಾಲಯದ ಅಧಿಕೃತ ಯೂಟ್ಯೂಬ್ ಚಾನೆಲೊಂದನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಿಡುಗಡೆ ಮಾಡಿದ್ದಾರೆ...
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದ ಅಧಿಕೃತ ಯೂಟ್ಯೂಬ್ ಚಾನೆಲೊಂದನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಿಡುಗಡೆ ಮಾಡಿದ್ದಾರೆ.

ದೇಶದ ಜನತೆಯೊಂದಿಗೆ ನೇರ ಸಂಪರ್ಕ ಸಲುವಾಗಿ ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿತ್ತ ಸಚಿವಾಲಯದ ಮಾಹಿತಿ ಇರುವ ಯೂ ಟ್ಯೂಬ್ ಚಾನಲೊಂದನ್ನು ಆರಂಭಿಸಿದ್ದು, ಈ ಮೂಲಕ ಹಣಕಾಸು ಸಚಿವಾಲಯವು ಅರ್ಥವ್ಯವಸ್ಥೆಗೆ ಸಂಬಂಧಿಸಿ ಕಾಲಕಾಲಕ್ಕೆ ಕ್ರಮ ಹಾಗೂ ಘೊಷಣೆಗಳನ್ನು ಮಾಡುತ್ತದೆ.

ಈ ಕುರಿತಂತೆ ಮಾತನಾಡಿರುವ ಜೇಟ್ಲಿ ಅವರು, ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವಾಲಯವು ಅನೇಕ ಕ್ರಮ ಮತ್ತು ಘೋಷಣೆಗಳನ್ನು ಇದರ ಮೂಲಕ ಮಾಡುತ್ತಿರುತ್ತದೆ. ಇವುಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯ ಅಗತ್ಯವಿರುತ್ತದೆ. ಹಾಗಾಗಿ ಹಣಕಾಸು ಸಚಿವಾಲಯದ ಪ್ರಮುಖ ನಿರ್ಧಾರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ನೀಡಲು ಈ ಚಾನಲ್ ಆರಂಭಿಸಿದ್ದೇವೆ. ಈ ಮೂಲಕ ಸಚಿವಾಲಯದ ಮಾಹಿತಿಗಳು, ಚಟುವಟಿಕೆಗಳನ್ನು ವಿಡಿಯೋಗಳ ಮೂಲಕ ಜನರನ್ನು ತಲುಪಲಿದೆ. ಕೆಲವು ಪ್ರಮುಖ ನಿರ್ಧಾರಗಳನ್ನು ಸಾರ್ವಜನಿಕ ವೇದಿಕೆಯಲ್ಲಿಡಲು ಈ ಉಪಕ್ರಮ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com