ಪಠಾಣ್ ಕೋಟ್ ದಾಳಿ: ಜೆಇಎಂ ಸಂಘಟನೆ ಮುಖ್ಯಸ್ಥನ ಕೈವಾಡ ತಳ್ಳಿಹಾಕಿದ ಪಾಕ್ ತನಿಖಾ ತಂಡ

ಪಠಾಣ್ ಕೋಟ್ ವಾಯುನೆಲೆದಾಳಿಯ ಹಿಂದೆ ಜೈಶ್- ಇ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನ ಪಾತ್ರವಿರುವುದಾನ್ನು ಸಬೀತುಪಡಿಸಲು ಸಾಕ್ಷ್ಯಾಧಾರವಿಲ್ಲ ಎಂದಿದೆ.
ಪಠಾಣ್ ಕೋಟ್  (ಸಂಗ್ರಹ ಚಿತ್ರ)
ಪಠಾಣ್ ಕೋಟ್ (ಸಂಗ್ರಹ ಚಿತ್ರ)

ಕರಾಚಿ: ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆದ ಪ್ರಕರಣವನ್ನು ತನಿಖೆ ನಡೆಸಲು ಪಾಕಿಸ್ತಾನ ರಚಿಸಿದ್ದ ತನಿಖಾ ತಂಡ, ದಾಳಿಯ ಹಿಂದೆ ಜೈಶ್- ಇ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನ ಪಾತ್ರವಿರುವುದಾನ್ನು ಸಬೀತುಪಡಿಸಲು ಸ್ಪಷ್ಟ ಸಾಕ್ಷ್ಯಾಧಾರವಿಲ್ಲ ಎಂದಿದೆ.   
ಪಠಾಣ್ ಕೋಟ್ ದಾಳಿಗೆ ಪಾಕ್ ಉಗ್ರ ಮೌಲಾನಾ ಮಸೂದ್ ರೂವಾರಿ ಎಂಬುದಕ್ಕೆ ಭಾರತ ಸರ್ಕಾರ ಸೂಕ್ತ ಸಾಕ್ಷ್ಯ ನೀಡಿದ್ದರೂ ಸಹ ಎಕ್ಸ್ ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಪ್ರಕಾರ ಪಾಕಿಸ್ತಾನ ತನಿಖಾ ತಂಡ ಮೌಲಾನಾ ಮಸೂದ್ ವಿರುದ್ಧ ಸ್ಪಷ್ಟ ಸಾಕ್ಷ್ಯಾಧಾರ ಇಲ್ಲ, ಆದ್ದರಿಂದ ಆತನನ್ನು ದಾಳಿಯಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಜ.2 ರಂದು ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಪಾಕ್ ನ ಜೆಇಎಂ ಸಂಘಟನೆಯ ಉಗ್ರರು ಭಾಗಿಯಾಗಿದ್ದಾರೆ ಎಂದಿದ್ದ ಭಾರತ ಸರ್ಕಾರ, ಉಗ್ರರ ಕುರಿತು ಸಾಕ್ಷ್ಯಗಳನ್ನು ಪಾಕಿಸ್ತಾನ ಸರ್ಕಾರಕ್ಕೆ ಒದಗಿಸಿತ್ತು. ಭಾರತ ಸರ್ಕಾರ ಒದಗಿಸಿದ್ದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ್ದ ಪಾಕಿಸ್ತಾನ ಸರ್ಕಾರ ಜೆಇಎಂ ಉಗ್ರ ಸಂಘಟನೆ ವಿರುದ್ಧ ದಾಳಿ ನಡೆಸಿ ಹಲವು ಸದಸ್ಯರನ್ನು ಬಂಧಿಸಿತ್ತು. ಆದರೆ ಈಗ ಮಾತ್ರ ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದು ಜೆಇಎಂ ಸಂಘಟನೆಗೂ ದಾಳಿಗೂ ಸಂಬಂಧ ಕಲ್ಪಿಸಲು ಸಾಕ್ಷಿಗಳಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com