ಜರ್ಮನಿಯಲ್ಲಿ ಭೀಕರ ರೈಲು ದುರಂತ; 7 ಸಾವು, ನೂರಾರು ಮಂದಿಗೆ ಗಾಯ

ದಕ್ಷಿಣ ಜರ್ಮನಿಯಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು, ಎರಡು ರೈಲುಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 7 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ..
ಜರ್ಮನಿಯಲ್ಲಿ ರೈಲು ಅಪಘಾತ (ಚಿತ್ರಕೃಪೆ: ಎಕ್ಸ್ ಪ್ರೆಸ್.ಯುಕೆ)
ಜರ್ಮನಿಯಲ್ಲಿ ರೈಲು ಅಪಘಾತ (ಚಿತ್ರಕೃಪೆ: ಎಕ್ಸ್ ಪ್ರೆಸ್.ಯುಕೆ)

ಬರ್ಲಿನ್: ದಕ್ಷಿಣ ಜರ್ಮನಿಯಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು, ಎರಡು ರೈಲುಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 7 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಜರ್ಮನಿಯ ಮ್ಯೂನಿಚ್ ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಬವೇರಿಯನ್ ನಗರದ ಸಮೀಪದಲ್ಲಿರುವ ಬ್ಯಾಡ್ ಏಬ್ಲಿಂಗ್ ಸಮೀಪ ಈ ದುರಂತ ಸಂಭವಿಸಿದ್ದು, ಢಿಕ್ಕಿಯ ರಭಸಕ್ಕೆ  ರೈಲುಗಳ ಹಲವು ಬೋಗಿಗಳು ನೆಲಕ್ಕುರುಳಿದ್ದು, ಮತ್ತೆ ಕೆಲವು ಹಳಿ ತಪ್ಪಿವೆ. ಘಟನೆಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಇನ್ನು ದುರಂತದಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನಾ ಸ್ಥಳಕ್ಕೆ ರಕ್ಷಣಾ ಹೆಲಿಕಾಪ್ಟರ್ ಗಳು ಮತ್ತು ಏರ್ ಆ್ಯಂಬುಲೆನ್ಸ್ ಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚಾರಣೆಯಲ್ಲಿ ತೊಡಗಿವೆ. ಮೇಲ್ನೋಟಕ್ಕೆ ತಾಂತ್ರಿಕ ಕಾರಣದಿಂದಾಗಿ ರೈಲುಗಳು  ಅಪಘಾತಕ್ಕೀಡಾಗಿವೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com