ಚಿಲಿಯಲ್ಲಿ ಪ್ರಬಲ ಭೂಕಂಪ: 6.3ರಷ್ಟು ತೀವ್ರತೆ ದಾಖಲು
ವಿದೇಶ
ಚಿಲಿಯಲ್ಲಿ ಪ್ರಬಲ ಭೂಕಂಪ: 6.3ರಷ್ಟು ತೀವ್ರತೆ ದಾಖಲು
ಮಧ್ಯ ಚಿಲಿಯಲ್ಲಿ ಮಂಗಳವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3 ರಷ್ಟು ತೀವ್ರತೆ ದಾಖಲಾಗಿದೆ...
ಚಿಲಿ: ಮಧ್ಯ ಚಿಲಿಯಲ್ಲಿ ಮಂಗಳವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3 ರಷ್ಟು ತೀವ್ರತೆ ದಾಖಲಾಗಿದೆ.
ಭೂಕಂಪನದ ಕೇಂದ್ರ ಬಿಂದು ಕಾಕ್ವಿಂಬೊದಿಂದ 79 ಕಿ.ಮೀ. ಆಗ್ರೇಯದ ಸಾಗರ ತಳದ 32 ಕಿ.ಮೀ.ಆಳದಲ್ಲಿ ಕಂಡುಬಂದಿದೆ ಎಂದು ಅಮೆರಿಕ ಭೂಗರ್ಭ ಪರಿವೀಕ್ಷಣಾ ಇಲಾಖೆ ತಿಳಿಸಿದೆ. ನಿನ್ನೆ ರಾತ್ರಿ 10ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಭೂಮಿ ಕಂಪಿಸುತ್ತಿದ್ದಂತೆ ಜನರು ಭಯಭೀತರಾಗಿ ಮನೆಗಳನ್ನು ಬಿಟ್ಟು ಬೀದಿಗೆ ಓಡಿ ಬಂದಿದ್ದಾರೆ.
ಭೂಕಂಪದ ಪರಿಣಾಮ ಈ ವರೆಗೂ ಯಾವುದೇ ಸಾವು ನೋವುಗಳು ಸಂಭವಿಸಿರುವುದಾಗಿ ವರದಿಗಳು ತಿಳಿದುಬಂದಿಲ್ಲ. ಆದರೆ, ಭೂಕಂಪದಿಂದಾಗಿ ಅಲ್ಲಿನ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದಾಗಿ ಹೇಳಲಾಗುತ್ತಿದೆ. ಇದರಂತೆ ಅರ್ಜೆಂಟೈನಾದಲ್ಲೂ ಭೂಮಿ ಕಂಪಿಸಿದ್ದು, ಹೆದ್ದಾರಿಯಲ್ಲಿನ ಕಲ್ಲು ಬಂಡೆಗಳು ಉರುಳಿ ಬಿದ್ದಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ