ಭಯೋತ್ಪಾದಕರ ದಮನಕ್ಕೆ ಪಾಕ್ ಗೆ 860 ದಶಲಕ್ಷ ಡಾಲರ್ ನೆರವು ನೀಡಿದ ಅಮೆರಿಕ

ಪಾಕಿಸ್ತಾನದಲ್ಲಿ ಉಗ್ರ ನಿಗ್ರಹಕ್ಕಾಗಿ ,ಪರಮಾಣು ಶಸ್ತ್ರಗಳನ್ನು ಸುರಕ್ಷಿತವಾಗಿಡಲು ಮತ್ತು ಭಾರತದೊಂದಿಗೆ ಸಂಬಂಧ ಸುಧಾರಿಸಿಕೊಳ್ಳಲು ಬರಾಕ್ ...
ಒಬಾಮಾ
ಒಬಾಮಾ

ವಾಷಿಂಗ್ಟನ್‌ : ಪಾಕಿಸ್ತಾನದಲ್ಲಿ ಉಗ್ರ ನಿಗ್ರಹಕ್ಕಾಗಿ ,ಪರಮಾಣು ಶಸ್ತ್ರಗಳನ್ನು ಸುರಕ್ಷಿತವಾಗಿಡಲು ಮತ್ತು ಭಾರತದೊಂದಿಗೆ ಸಂಬಂಧ ಸುಧಾರಿಸಿಕೊಳ್ಳಲು  ಬರಾಕ್ ಒಬಾಮಾ ಬರೋಬ್ಬರಿ 860 ದಶಲಕ್ಷ ಡಾಲರ್‌ ಆರ್ಥಿಕ ನೆರವನ್ನು ಘೋಷಿಸಿದ್ದಾರೆ.

ಮಂಗಳವಾರ ಬರಾಕ್ ಒಬಾಮಾ ತಮ್ಮ ಕೊನೆಯ ಬಜೆಟ್‌ ಮಂಡಿಸಿದ್ದಾರೆ. ಬರಾಕ್ ಒಬಾಮಾ ತಮ್ಮ ಬಜೆಟ್‌ನಲ್ಲಿ ಉಗ್ರರ ನಾಶಕ್ಕಾಗಿ  859.9 ದಶಲಕ್ಷ ಡಾಲರ್‌ ಹಣವನ್ನು ತೆಗೆದಿರಿಸಿದ್ದಾರೆ ಎಂದು ಅಮೆರಿಕಾ ಸರ್ಕಾರದ ಕಾರ್ಯದರ್ಶಿ ಜಾನ್‌ ಕೆರಿ ತಿಳಿಸಿದ್ದಾರೆ.

ಒಮಾಮಾ ಅವರು 4.15 ಟ್ರಿಲಿಯನ್‌ ಡಾಲರ್‌ ಮೊತ್ತದ ಭಾರೀ ಬಜೆಟ್‌ ಮಂಡಿಸಿದ್ದು,170 ಪುಟಗಳ ಬಜೆಟ್‌ನಲ್ಲಿ ಎಷ್ಯಾ ಫೆಸಿಫಿಕ್‌ ಮರು ನಿಯಂತ್ರಣ ನೀತಿಯ ಅಂಗವಾಗಿ ಭಾರತದೊಂದಿಗೆ ರಕ್ಷಣಾ ಸಂಬಂಧ ಬಲಪಡಿಸುವುದಾಗಿ ಹೇಳಿದ್ದಾರೆ.

'ರಕ್ಷಣಾ ತಂತ್ರಜ್ಞಾನ,ವ್ಯಾಪಾರ, ವಿಮಾನ ತಂತ್ರಜ್ಞಾನ ಸಹಕಾರದಲ್ಲಿ ಜಂಟಿ ಕಾರ್ಯಪಡೆ ಮತ್ತಿತರ ನಿಟ್ಟಿನಲ್ಲಿ ಭಾರತದೊಂದಿಗೆ ಅಮೆರಿಕಾ ರಕ್ಷಣಾ ಇಲಾಖೆ ಬಾಂಧವ್ಯ ಮುಂದುವರಿಸಲಿದೆ' ಎಂದು ಒಮಾಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com