ಚೈನಾದಲ್ಲಿ ಝಿಕಾ ವೈರಸ್ ಸೋಂಕಿನ ಮೊದಲ ಪ್ರಕರಣ ಪತ್ತೆ

ವೆನಿಜ್ಯುಯೇಲಾದಿಂದ ಚೈನಾಗೆ ಆಗಮಿಸಿದ ವ್ಯಕ್ತಿಗೆ ಝೀಕಾ ವೈರಸ್ ಸೋಂಕು ತಗುಲಿದ್ದು, ಇದು ಚೈನಾದಲ್ಲಿ ಪತ್ತೆಯಾದ ಮೊದಲ ಪ್ರಕರಣವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ವೆನಿಜ್ಯುಯೇಲಾದಿಂದ ಚೈನಾಗೆ ಆಗಮಿಸಿದ ವ್ಯಕ್ತಿಗೆ ಝೀಕಾ ವೈರಸ್ ಸೋಂಕು ತಗುಲಿದ್ದು, ಇದು ಚೈನಾದಲ್ಲಿ ಪತ್ತೆಯಾದ ಮೊದಲ ಪ್ರಕರಣವಾಗಿದೆ.

ಚೈನಾದ ದಕ್ಷಿಣ ಭಾಗದ ಗಂಜೌ ನಗರದ ೩೪ ವರ್ಷದ ಈ ವ್ಯಕ್ತಿಗೆ ವೆನಿಜ್ಯುಯೇಲಾದಲ್ಲಿ ಜನವರಿ ೨೮ ರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಇವರು ಫೆಬ್ರವರಿ ೫ ರಂದು ಹಾಂಕಾಂಗ್ ಮೂಲಕ ಚೈನಾಗೆ ಬಂದಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ನಿಯಂತ್ರಣ ಆಯೋಗ ತಿಳಿಸಿದೆ.

ಈ ವ್ಯಕ್ತಿಗೆ ಝಿಕಾ ವೈರಸ್ ಸೋಂಕು ತಗುಲಿರುವುದು ಧೃಢಪಟ್ಟಿದೆ, ಆದರೆ ಜ್ವರ ಇಳಿಯುತ್ತಿದ್ದು, ಚರ್ಮದ ಮೇಲಿನ ಗುಳ್ಳೆಗಳು ಇಳಿಯುತ್ತಿವೆ ಎಂದು ಆಯೋಗ ತಿಳಿಸಿದೆ.

ಚೈನಾದಲ್ಲಿ ಅತಿ ಕಡಿಮೆ ಉಷ್ಣಾಂಶ ಮತ್ತು ಸೊಳ್ಳೆಗಳ ಚಟುವಟಿಕೆಯೂ ಕಡಿಮೆಯಿರುವುದರಿಂದ ಈ ರೋಗ ಹರಡುವು ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಗರ್ಭಿಣಿ ಸ್ತ್ರೀಯರಿಗೆ ಝೀಕಾ ವೈರಾಣು ಸೋಂಕು ತಗುಲಿದಾಗ ಹುಟ್ಟುವ ಮಕ್ಕಳಲ್ಲಿ ಅಪರೂಪದ ದೋಷಗಳು ಪತ್ತೆಯಾಗುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com