4 ವರ್ಷದ ಬಾಲಕ ಕಾರನ್ನು ಸ್ಫೋಟಿಸುತ್ತಿರುವ ವಿಡಿಯೋ ಬಿಡುಗಡೆ ಮಾಡಿದ ಇಸಿಸ್

ನಾಲ್ಕು ವರ್ಷದ ಬ್ರಿಟನ್ ನ ಬಾಲಕನೊಬ್ಬ ಕಾರನ್ನು ಸ್ಫೋಟಿಸಿ ಮೂವರನ್ನು ಸಾಯಿಸುವ ದೃಶ್ಯ ಇಸಿಸ್ ಉಗ್ರಗಾಮಿ ಸಂಘಟನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ನಾಲ್ಕು ವರ್ಷದ ಬ್ರಿಟನ್ ನ ಬಾಲಕನೊಬ್ಬ ಕಾರನ್ನು ಸ್ಫೋಟಿಸಿ ಮೂವರನ್ನು ಸಾಯಿಸುವ ದೃಶ್ಯ ಇಸಿಸ್ ಉಗ್ರಗಾಮಿ ಸಂಘಟನೆ ಬಿಡುಗಡೆ ಮಾಡಿರುವ ಹೊಸ ಗ್ರಾಫಿಕ್ ವಿಡಿಯೋದಲ್ಲಿ ದಾಖಲಾಗಿದೆ. ಈತ ಸಿರಿಯಾಕ್ಕೆ ಬೇಹುಗಾರಿಕೆ ನಡೆಸುತ್ತಿದ್ದ ಎಂಬ ಆರೋಪವಿದೆ.

ಕ್ರಿಸ್ತಿಯನ್ ಆಗಿದ್ದು ಮುಸಲ್ಮಾನಳಾಗಿ ಮತಾಂತರಗೊಂಡ ಗ್ರೇಸ್ ಖಾದಿಜಾ ದರೆ ಎಂಬಾಕೆಯ ಪುತ್ರನು ಈ ಬಾಲಕನಾಗಿದ್ದು, ಆಗ್ನೇಯ ಲಂಡನ್ ನಲ್ಲಿದ್ದ ಈಕೆ 2012ರಲ್ಲಿ ಸಿರಿಯಾಗೆ ಓಡಿಹೋಗಿ ಸ್ವೀಡನ್ ನ ಭಯೋತ್ಪಾದಕ ಹೋರಾಟಗಾರ ಅಬು ಬಕ್ರ್ ಎಂಬಾತನನ್ನು ಮದುವೆಯಾಗಿದ್ದಳು. ನಂತರ ಆಕೆ ಹತ್ಯೆಗೀಡಾಗಿದ್ದಳು.

ಇಸಾ ದರೆ ಎಂಬ ಹೆಸರಿನ ಬಾಲಕನು ಒಂದು ತಿಂಗಳ ಹಿಂದೆ ಇಸಿಸ್ ಸಂಘಟನೆಯ ಪ್ರಚಾರ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದನು. ಇತ್ತೀಚೆಗೆ ಬಿಡುಗಡೆಗೊಂಡ ವಿಡಿಯೋದಲ್ಲಿ ಬಾಲಕ ಇಸಿಸ್ ನ ಟ್ರೇಡ್ ಮಾರ್ಕ್ ಇರುವ ಬಟ್ಟೆಯನ್ನು ಧರಿಸಿದ್ದು, ಕಪ್ಪು ತಲೆಪಟ್ಟಿ ಧರಿಸಿದ್ದಾನೆ. ತನ್ನ ಕೈಯನ್ನು ಡಿಟೊನೇಟರ್ ಕಡೆ ತೋರಿಸುತ್ತಿದ್ದಾನೆ. ಮೂವರು ಕೈದಿಗಳು ಕೇಸರಿ ಬಣ್ಣದ ಬಟ್ಟೆ ಧರಿಸಿದ್ದು, ಕಾರಿನಲ್ಲಿ ಕುಳಿತಿದ್ದು, ಬಾಲಕ ಅಸ್ಫೋಟಕದಿಂದ ಸ್ಪೋಟಿಸುತ್ತಿದ್ದಾನೆ.

ಮುಸುಕುಧಾರಿಯೊಬ್ಬ ಬ್ರಿಟನ್ ಉಚ್ಛಾರದಲ್ಲಿ ಮಾತನಾಡುತ್ತಾ ಬಾಲಕನ ಬಳಿಯಲ್ಲಿ ನಿಂತಿದ್ದು, ಇಂಗ್ಲೆಂಡಿನ ಪ್ರಧಾನಿ ಡೇವಿಡ್ ಕಾಮರಾನ್ ಗೆ ಬೆದರಿಕೆಯೊಡ್ಡುವ ಭಾಷಣವಿದೆ.
'' ನೀನು ಸಿರಿಯಾಗೆ ಬೇಹುಗಾರಿಕೆಯವರನ್ನು ಕಳುಹಿಸಿ ಸಾವಿರಾರು ಜನರನ್ನು ಸಾಯಿಸಲು ಆದೇಶ ನೀಡುತ್ತಿರುವಾಗ ನಾವು ನಮ್ಮ ಸಂಘಟನೆಯವರನ್ನು ಸನ್ನದ್ದು ಮಾಡುತ್ತೇವೆ.ನಮ್ಮ ಸಹೋದರ-ಸಹೋದರಿಯರು ಸಿರಿಯಾದಲ್ಲಿ ಸಾವಿರಾರು ಮಂದಿ ಸಾಯುತ್ತಿದ್ದಾರೆ. ಯುದ್ಧ ಮಾಡೋಣ ಎಂದು ಕಾರನ್ನು ಸ್ಫೋಟಿಸುವ ದೃಶ್ಯ ವಿಡಿಯೋದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com