
ವಾಷಿಂಗ್ಟನ್: ಪಾಕಿಸ್ತಾನಕ್ಕೆ ಎಫ್-16 ಫೈಟರ್ ಜೆಟ್ ನ್ನು ನೀಡುವುದನ್ನು ಅಮೆರಿಕದ ಸಂಸದರೊಬ್ಬರು ವಿರೋಧಿಸಿದ್ದರ ನಡುವೆಯೂ ಪಾಕಿಸ್ತಾನಕ್ಕೆ ಸಹಕಾರ ನೀಡಲು ಬದ್ಧವಾಗಿರುವುದಾಗಿ ಅಮೆರಿಕ ತಿಳಿಸಿದೆ.
ಫೆ.9 ರಂದು ಅಮೆರಿಕ ಕಾರ್ಯದರ್ಶಿ ಜಾನ್ ಕೆರ್ರಿಗೆ ಪತ್ರ ಬರೆದಿದ್ದ ಸೆನೆಟ್ ವಿದೇಶಾಂಗ ಸಂಬಂಧಗಳ ಸಮಿತಿಯ ಅಧ್ಯಕ್ಷ ಬಾಬ್ ಕಾರ್ಕೆರ್, ಅಫ್ಘಾನಿಸ್ತಾನವನ್ನು ಅಸ್ಥಿರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಕ್ಕಾನಿ ಉಗ್ರ ಸಂಘಟಾನೆಯೊಂದಿಗೆ ಪಾಕಿಸ್ತಾನದ ಸಂಬಂಧ ಹೊಂದಿರುವುದನ್ನು ವಿವರಿಸಿ ಪಾಕಿಸ್ತಾನಕ್ಕೆ ಎಫ್-16 ಫೈಟರ್ ಜೆಟ್ ಗಳ ಪೂರೈಕೆ ಸ್ಥಗಿತಗೊಳಿಸುವುದು ಉತ್ತಮ ಎಂದು ಸೂಚಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ವಕ್ತಾರ ಮಾರ್ಕ್ ಸಿ ಟೋನರ್, ಪಾಕಿಸ್ತಾನಕ್ಕೆ ಎಫ್-16 ಫೈಟರ್ ಜೆಟ್ ಗಳನ್ನು ಪೂರೈಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೆರ್ರಿಗೆ ಬಾಬ್ ಕಾರ್ಕೆರ್ ಪತ್ರ ಬರೆದಿರುವುದನ್ನು ಸ್ಪಷ್ಟಪಡಿಸಲು ನಿಕಾರಿಸಿದ್ದಾರೆ. ಅಲ್ಲದೇ 'ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ಭಯೋತ್ಪಾದನೆ ಆರೋಪದ ಹೊರತಾಗಿಯೂ ಭದ್ರತಾ ಸಹಾಯ ನೀಡಲು ಅಮೆರಿಕ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಸೆನೆಟ್ ವಿದೇಶಾಂಗ ಸಂಬಂಧಗಳ ಸಮಿತಿಯ ಅಧ್ಯಕ್ಷರ ಆರೋಪದ ಬಗ್ಗೆ ಪ್ರಶ್ನಿಸಿದಾಗ " ಪಾಕಿಸ್ತಾನಕ್ಕೆ ಅಮೆರಿಕ ನೀಡುವ ಭದ್ರತಾ/ ರಕ್ಷಣಾ ಉಪಕರಣಗಳ ಸಹಕಾರ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಹಕಾರಿಯಾಗಲಿದೆ ಎಂದು ಅಮೆರಿಕ ವಕ್ತಾರ ಮಾರ್ಕ್ ಸಿ ಟೋನರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement