ಪ್ರೇಮಿಗಳ ದಿನವನ್ನು ನಿರ್ಲಕ್ಷಿಸಿ: ಪಾಕಿಸ್ತಾನ ರಾಷ್ಟ್ರಪತಿ

ಪಾಕಿಸ್ತಾನಿಗಳು ಪ್ರೇಮಿಗಳ ದಿನವನ್ನು ಆಚರಿಸಬಾರದೂ, ನಿರ್ಲಕ್ಷಿಸಬೇಕು ಎಂದು ಪಾಕಿಸ್ತಾನ ರಾಷ್ಟ್ರಪತಿ ಮಮ್ನೂನ್ ಹುಸೇನ್ ಅವರು ಶನಿವಾರ ಹೇಳಿದ್ದಾರೆ...
ಪ್ರೇಮಿಗಳ ದಿನವನ್ನು ನಿರ್ಲಕ್ಷಿಸಿ: ಪಾಕಿಸ್ತಾನ ರಾಷ್ಟ್ರಪತಿ
ಪ್ರೇಮಿಗಳ ದಿನವನ್ನು ನಿರ್ಲಕ್ಷಿಸಿ: ಪಾಕಿಸ್ತಾನ ರಾಷ್ಟ್ರಪತಿ
ಇಸ್ಲಾಮಾಬಾದ್: ಪಾಕಿಸ್ತಾನಿಗಳು ಪ್ರೇಮಿಗಳ ದಿನವನ್ನು ಆಚರಿಸಬಾರದೂ, ನಿರ್ಲಕ್ಷಿಸಬೇಕು ಎಂದು ಪಾಕಿಸ್ತಾನ ರಾಷ್ಟ್ರಪತಿ ಮಮ್ನೂನ್ ಹುಸೇನ್ ಅವರು ಶನಿವಾರ ಹೇಳಿದ್ದಾರೆ. 
ಪ್ರೇಮಿಗಳ ದಿನಾಚರಣೆ ಕುರಿತಂತೆ ವಿದ್ಯಾರಥಿ ಸಮೂಹದ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು. ಪ್ರೇಮಿಗಳ ದಿನ ಪಾಶ್ಚಿಮಾತ್ಯ ದೇಶಗಳ ಸಂಸ್ಕತಿಯಿಂದ ಬಂದಿದ್ದು, ದೇಶದ ಸಂಸ್ಕೃತಿಗೆ ವಿರುದ್ಧವಾದ ಪ್ರೇಮಿಗಳ ದಿನವನ್ನು ಆಚರಿಸಬಾರದು ಎಂದು ಹೇಳಿದ್ದಾರೆ. 
ಪ್ರೇಮಿಗಳ ದಿನವೊಂದು ಸಂಸ್ಕೃತಿಯ ಅಂಧಾನುಕರಣೆಯಾಗಿದ್ದು ಇದು ನಮ್ಮ ದೇಶದ ಇಸ್ಲಾಂ ಧರ್ಮದ ಮೌಲ್ಯಗಳು ನಾಶವಾಗುವಂತೆ ದಾರಿ ಮಾಡಿಕೊಡುತ್ತದೆ. ಅಲ್ಲದೆ ಪ್ರೇಮಿಗಳ ದಿನಾಚರಣೆ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 
ಸೌದಿ ಅರೇಬಿಯಾ, ಇರಾನ್, ಮಲೇಷಿಯಾ, ಇಂಡೋನೇಷಿಯಾ ಹಾಗೂ ರಷ್ಯಾ ದೇಶಗಳಲ್ಲಿರುವ ಮುಸ್ಲಿಮರು ಪ್ರೇಮಿಗಳ ದಿನವನ್ನು ಆಚರಿಸದಂತೆ ನಿಷೇಧ ಹೇರಲಾಗಿದೆ. ಇದರಂತೆ ಪಾಕಿಸ್ತಾನ ಮಾಧ್ಯಮವೊಂದು ಪ್ರೇಮಿಗಳ ದಿನವನ್ನು ಇಸ್ಲಾಮಾಬಾದ್ ನಲ್ಲಿ ನಿಷೇಧಿಸಲಾಗಿದ್ದು, ಒಂದು ವೇಳೆ ಆಚರಿಸಿದ್ದೇ ಆದರೆ ಇದೊಂದು ಇಸ್ಲಾಂ ಧರ್ಮಕ್ಕೆ ಅವಮಾನಿಸಿದ್ದಂತೆ. ಶೀಘ್ರದಲ್ಲೇ ನಿಯಮವನ್ನು ಜಾರಿಗೊಳಿಸಲಾಗುತ್ತದೆ ಎಂದು ವರದಿ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com