ಗೂಢಚಾರಿಕೆ ಆರೋಪ: ಭಾರತೀಯನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕ್ ಮಿಲಿಟರಿ ಕೋರ್ಟ್

ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಭಾರತ ಮೂಲದ ಹಮೀದ್ ನೆಹಾಲ್ ಅನ್ಸಾರಿಗೆ ಪಾಕಿಸ್ತಾನ ಮಿಲಿಟರಿ ಕೋರ್ಟ್ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ...
ಹಮೀದ್ ನೆಹಾಲ್ ಅನ್ಸಾರಿ
ಹಮೀದ್ ನೆಹಾಲ್ ಅನ್ಸಾರಿ

ಪೇಶಾವರ: ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಭಾರತ ಮೂಲದ ಹಮೀದ್ ನೆಹಾಲ್ ಅನ್ಸಾರಿಗೆ ಪಾಕಿಸ್ತಾನ ಮಿಲಿಟರಿ ಕೋರ್ಟ್ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

31 ವರ್ಷದ ಮುಂಬೈ ನಿವಾಸಿಯಾಗಿರುವ ಇಂಜಿನಿಯರ್​ ಹಮೀದ್ ನೆಹಾಲ್ ಅನ್ಸಾರಿಗೆ ಖೈಬರ್ ಫಕ್ತುಕ್ವಾ ಪ್ರಾಂತ್ಯದ ಕೋಹತ್​ನ ಮಿಲಿಟರಿ ಕೋರ್ಟ್ ಭಾನುವಾರ ಶಿಕ್ಷೆ ವಿಧಿಸಿ, ಪೇಶಾವರ ಜೈಲಿಗೆ ವರ್ಗಾಯಿಸಲಾಯಿತು.

ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಯುವತಿಯನ್ನು ಭೇಟಿ ಮಾಡಲು 2012ರ ನವೆಂಬರ್​ನಲ್ಲಿ ಆಫ್ಘಾನಿಸ್ತಾನದ ಮೂಲಕ ಅನ್ಸಾರಿ ಪಾಕಿಸ್ತಾನಕ್ಕೆ ತೆರಳಿದ್ದ. ನಂತರ ಆತ ಕಣ್ಮರೆಯಾಗಿದ್ದು, ಇತ್ತೀಚೆಗೆ ಪಾಕ್ ಮಿಲಿಟರಿ ಆತನನ್ನು ಬಂಧಿಸಿದೆ. ಕೋಹಿತ್​ನಲ್ಲಿ ನವೆಂಬರ್ 2012ರಲ್ಲಿ ಆತನನ್ನು ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪಾಕ್ ಸರ್ಕಾರ ಒಪ್ಪಿಕೊಂಡಿತ್ತು.

ಹಮೀದ್ ಎಂಬಿಎ ಪದವೀಧರನಾಗಿದ್ದು, ಮುಂಬೈನಲ್ಲಿ ವಾಸಿಸುತ್ತಿದ್ದ. ಸಾಮಾಜಿಕ ಜಾಲ ತಾಣಗಳ ಮೂಲಕ ಪಾಕಿಸ್ತಾನದ ಯುವತಿಯ ಸ್ನೇಹ ಬೆಳೆದಿದ್ದು, ಆಕೆಯನ್ನು ಭೇಟಿ ಮಾಡಲು ಅನ್ಸಾರಿ ತೆರಳಿದ್ದ ಎಂದು ಆತನ ತಾಯಿ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com