ಸುಡಾನ್ ವಿಶ್ವಸಂಸ್ಥೆ ಕಚೇರಿ ಆವರಣದಲ್ಲಿ ಘರ್ಷಣೆ; 18 ಸಾವು

ದಕ್ಷಿಣ ಸುಡಾನ್ ನಲ್ಲಿರುವ ವಿಶ್ವಸಂಸ್ಥೆ ಕಚೇರಿ ಅವರಣದಲ್ಲಿ ಶುಕ್ರವಾರ ನಡೆದ ಘರ್ಷಣೆಯಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ...
ಸುಡಾನ್ ವಿಶ್ವಸಂಸ್ಥೆ ಕಚೇರಿ ಅವರಣದಲ್ಲಿ ಘರ್ಷಣೆ (ಸಂಗ್ರಹ ಚಿತ್ರ)
ಸುಡಾನ್ ವಿಶ್ವಸಂಸ್ಥೆ ಕಚೇರಿ ಅವರಣದಲ್ಲಿ ಘರ್ಷಣೆ (ಸಂಗ್ರಹ ಚಿತ್ರ)

ಜ್ಯುಬಾ: ದಕ್ಷಿಣ ಸುಡಾನ್ ನಲ್ಲಿರುವ ವಿಶ್ವಸಂಸ್ಥೆ ಕಚೇರಿ ಅವರಣದಲ್ಲಿ ಶುಕ್ರವಾರ ನಡೆದ ಘರ್ಷಣೆಯಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಸುಡಾನ್ ನ ಮಲಕಲ್ ನಲ್ಲಿರುವ ವಿಶ್ವಸಂಸ್ಥೆ ಕಚೇರಿ ಆವರಣದಲ್ಲಿರುವ ನಿರಾಶ್ರಿತ ಶಿಬಿರದಲ್ಲಿ ಈ ಘರ್ಷಣೆ ಸಂಭವಿಸಿದ್ದು, ದಾಳಿ ವೇಳೆ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಇಬ್ಬರು ಅಂತಾರಾಷ್ಟ್ರೀಯ ವೈದ್ಯಕೀಯ ನೆರವು ಸಂಸ್ಥೆಯ ಶುಶ್ರೂಕರು ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 2013ರಿಂದ ಡಿಸೆಂಬರ್ ನಿಂದಲೂ ಸುಡಾನ್ ನಲ್ಲಿ ನಾಗರಿಕ ಘರ್ಷಣೆಗಳು ನಡೆಯುತ್ತಲಿದ್ದು,  2013 ಡಿಸೆಂಬರ್ ನಲ್ಲಿ ಸುಡಾನ್ ಅಧ್ಯಕ್ಷ ಸಲ್ವಾ ಕೀರ್ ಅವರು ಉಪಾಧ್ಯಕ್ಷ ರಿಯಕ್ ಮಚರ್ ಅವರನ್ನು ವಜಾಗೊಳಿಸಿದಾಗಿನಿಂದ ಶುರುವಾದ ನಾಗರಿಕ ಸಂಘರ್ಷ ಈಗಲೂ ಮುಂದುವರೆದಿದ್ದು, ಈ ವರೆಗೂ ಸಾವಿರಾರು ನಾಗರೀಕರು ಸಾವನ್ನಪ್ಪಿದ್ದಾರೆ.

ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರದಲ್ಲಿರುವ ಎರಡು ಸಾಂಪ್ರದಾಯಿಕ ಗುಂಪುಗಳ ನಡುವೆ ಆರಂಭವಾದ ಜಗಳ ಬಳಿಕ ಹಿಂಸಾಚಾರಕ್ಕೆ ತಿರುಗಿದ್ದು, ಗುರುವಾರ ರಾತ್ರಿ 5 ಜನರು ಸಾವಿಗೀಡಾಗಿ, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ವಿಶ್ವಸಂಸ್ಥೆ ವಕ್ತಾರ ಸಾವಿನ ಸಂಖ್ಯೆ 7ಕ್ಕೇರಿದೆ ಎಂದು ಮಾಹಿತಿ ನೀಡಿದ್ದರು. ಇದೀಗ ಶುಕ್ರವಾರ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, 18 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com