ಪಾಕಿಸ್ತಾನ ಸಂಸತ್
ಪಾಕಿಸ್ತಾನ ಸಂಸತ್

ಪಾಕಿಸ್ತಾನ ಸಂಸತ್ ನಲ್ಲಿ ಸಂಪೂರ್ಣ ಸೋಲಾರ್ ವಿದ್ಯುತ್ ಬಳಕೆ

ಪಾಕಿಸ್ತಾನದ ಸಂಸತ್ ನಲ್ಲಿ ಸಂಪೂರ್ಣವಾಗಿ ಸೋಲಾರ್ ವಿದ್ಯುತ್ ಬಳಕೆಯಾಗಲಿದ್ದು, ಸಂಪೂರ್ಣವಾಗಿ ಸೋಲಾರ್ ಬಳಕೆ ಮಾಡುವ ವಿಶ್ವದ ಮೊದಲ ಸಂಸತ್ ಎಂಬ ಹೆಗ್ಗಳಿಕೆಗೆ ಪಾಕ್ ಸಂಸತ್ ಪಾತ್ರವಾಗಿದೆ.

ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ ನಲ್ಲಿ ಸಂಪೂರ್ಣವಾಗಿ ಸೋಲಾರ್ ವಿದ್ಯುತ್ ಬಳಕೆಯಾಗಲಿದ್ದು, ಸಂಪೂರ್ಣವಾಗಿ ಸೋಲಾರ್ ಬಳಕೆ ಮಾಡುವ ವಿಶ್ವದ ಮೊದಲ ಸಂಸತ್ ಎಂಬ ಹೆಗ್ಗಳಿಕೆಗೆ ಪಾಕ್ ಸಂಸತ್ ಪಾತ್ರವಾಗಿದೆ.
ಸಂಸತ್ ಭವನದಲ್ಲಿ 1.8 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಫೆ.23 ರಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಉದ್ಘಾಟನೆ ಮಾಡಿದ್ದಾರೆ. ಈ ಮೂಲಕ ಇಡಿ ಸಂಸತ್ ಗೆ ಅಗತ್ಯವಿರುವ ವಿದ್ಯುತ್ ಸೋಲಾರ್ ಮೂಲಕವೇ ಉತ್ಪಾದನೆಯಾಗಲಿದೆ. 
ಸಂಸತ್ ಭವನದ ಮೇಲೆ ಹಾಕಲಾಗಿರುವ ಸೋಲಾರ್ ಪ್ಯಾನಲ್ ಗಳಿಂದ ವರ್ಷಕ್ಕೆ ಕನಿಷ್ಠ 28 ಮಿಲಿಯನ್ ಪಾಕಿಸ್ತಾನಿ ರೂಪಾಯಿ( 267,265 ಡಾಲರ್) ನಷ್ಟು ಹಣ ಉಳಿತಾಯವಾಗಲಿದೆಯಂತೆ. ಸೋಲಾರ್ ಘಟಕ ಉದ್ಘಾಟನೆ ಮಾಡಿ ಮಾತನಾಡಿದ ನವಾಜ್ ಷರೀಫ್, 2018 ರ ವೇಳೆಗೆ ಪಾಕಿಸ್ತಾನದಲ್ಲಿ ವಿದ್ಯುತ್ ಕೊರತೆ ಅಂತ್ಯಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಪಾಕಿಸ್ತಾನ ಸಂಸತ್ ನಲ್ಲಿ ಸೌರ ವಿದ್ಯುತ್ ಉತ್ಪಾದನೆಗಾಗಿ ಕಳೆದ ವರ್ಷ ಚೀನಾ ಪಾಕಿಸ್ತಾನಕ್ಕೆ ನೆರವು ನೀಡಿತ್ತು.

Related Stories

No stories found.

Advertisement

X
Kannada Prabha
www.kannadaprabha.com