ಇಸಿಸ್ ಉಗ್ರರ ಅತ್ಯಾಚಾರಕ್ಕೆ ಹೆದರಿ ಬೆಂಕಿ ಹಚ್ಚಿಕೊಂಡ ಯುವತಿ

ಯಜಿದಿ ಯುವತಿಯೊಬ್ಬಳು ಇಸಿಸ್ ಉಗ್ರಗಾಮಿಗಳಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು ಮೈಮೇಲೆ ಗ್ಯಾಸೋಲಿನ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ವಿದ್ರಾವಕ ಘಟನೆ ನಡೆದಿದೆ.
ಇಸಿಸ್ ಉಗ್ರಗಾಮಿಗಳಿಂದ ತಪ್ಪಿಸಿಕೊಳ್ಳಲು ಬೆಂಕಿ ಹಚ್ಚಿಕೊಂಡ ಯುವತಿ
ಇಸಿಸ್ ಉಗ್ರಗಾಮಿಗಳಿಂದ ತಪ್ಪಿಸಿಕೊಳ್ಳಲು ಬೆಂಕಿ ಹಚ್ಚಿಕೊಂಡ ಯುವತಿ

ಜಿನೇವಾ: ಯಜಿದಿ ಯುವತಿಯೊಬ್ಬಳು ಇಸಿಸ್ ಉಗ್ರಗಾಮಿಗಳಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು ಮೈಮೇಲೆ ಗ್ಯಾಸೋಲಿನ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ವಿದ್ರಾವಕ ಘಟನೆ  ನಡೆದಿದೆ.

ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ಉಗ್ರರ ಕ್ರೌರ್ಯ ಎಲ್ಲೆ ಮೀರುತ್ತಿದ್ದು, ಮಹಿಳೆ ಮತ್ತು ಯುವತಿಯರ ಮೇಲಿನ ಅವರ ದೌರ್ಜನ್ಯ ದಿನೇ ದಿನೇ ಎಲ್ಲೆ ಮೀರುತ್ತಿದೆ. ಯಾಜಿದಿ ಸಮುದಾಯದ  ಸಾವಿರಾರು ಯುವತಿಯರು ಹಾಗೂ ಮಹಿಳೆಯರನ್ನು ಅಪಹರಿಸುವ ಉಗ್ರರು ಲ್ಯೆ೦ಗಿಕ ಸೇವಕಿಯರನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮನ್ನು ವಿರೋ˜ಸುವ ಅಥವಾ ಆದೇಶ ಪಾಲಿಸದವರನ್ನು  ಹತ್ಯೆಗೈಯಲೂ ಹೇಸದ ಉಗ್ರರು ಅಕ್ಷರಶಃ ನರಕಸದೃಶ ವಾತಾವರಣ ಸೃಷ್ಟಿಸಿದ್ದಾರೆ. ಉಗ್ರರಿ೦ದ ಅತ್ಯಾಚಾರಕ್ಕೊಳಗಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆಘಾತ ಅನುಭವಿಸುತ್ತಿರುವ  ಮಹಿಳೆಯರ ನೆರವಿಗೆ ಜಮ೯ನಿಯ ಬದೆನ್‍-ಉಟ್ಟೆ೦ಬಗ್‍೯ ರಾಜ್ಯಾ ಡಳಿತ ಧಾವಿಸಿದ್ದು, ಸ೦ತ್ರಸ್ತರ ಸಮೂಹವನ್ನು ಕರೆತ೦ದು ಚಿಕಿತ್ಸೆ ಒದಗಿಸುತ್ತಿದೆ. ಇದುವರೆಗೆ 1100 ಮಹಿಳೆಯರನ್ನು  ಜಮ೯ನಿಗೆ ಕರೆತ೦ದು ಚಿಕಿತ್ಸೆ ನೀಡಲಾಗಿದೆ.

ಇದರಲ್ಲಿ ದೇಹದ ಶೇ.80 ಭಾಗ ಸುಟ್ಟಗಾಯಗಳನ್ನು ಹೊ೦ದಿರುವ ಯುವತಿಯಿದ್ದಾಳೆ. ಉಗ್ರರಿ೦ದ ಅಪಹರಿಸಲ್ಪಟ್ಟಿದ್ದ ಈಕೆ ಹಲವು ವಾರಗಳ ಕಾಲ ನಿರ೦ತರವಾಗಿ ಸಾಮೂಹಿಕ ಅತ್ಯಾಚಾರಕ್ಕೆ  ಒಳಗಾಗಿದ್ದಳು. ಇತ್ತೀಚೆಗೆ ಇಸಿಸ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದಿದ್ದ ಈ ಯಜಿದಿ ಯುವತಿ ಮತ್ತೆ ತನ್ನ ಮೇಲೆ ಉಗ್ರಗಾಮಿಗಳು ಅತ್ಯಾಚಾರವೆಸಗುತ್ತಾರೆ ಎಂದು ಭಯಗೊಂಡು ತನ್ನ  ಮೇಲೆ ಗ್ಯಾಸೊಲಿನ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.

ಭದ್ರತಾ ಮೂಲಗಳ ಪ್ರಕಾರ ಈ ಹಿಂದೆ ಯಜಿದಿ ವರ್ಗಕ್ಕೆ ಸೇರಿದ ಈ ಯುವತಿ ಮತ್ತು ಈಕೆಯ ಸಹೋದರಿಯರನ್ನು ಇಸಿಸ್ ಉಗ್ರಗಾಮಿಗಳು ಅಪಹರಿಸಿದ್ದರು. ಸುಮಾರು ಒಂದು ವಾರಗಳ  ಕಾಲ ಉಗ್ರ ಕಪಿ ಮುಷ್ಟಿಯಲ್ಲಿದ್ದ ಯುವತಿಯರು ಉಗ್ರರಿಂದ ತಪ್ಪಿಸಿಕೊಂಡು ಬಂದಿದ್ದರು. ಬಳಿಕ ಸೇನಾ ಕ್ಯಾಂಪ್ ನಲ್ಲಿ ಯುವತಿ ಮಲಗಿದ್ದ ವೇಳೆ ಉಗ್ರಗಾಮಿಯೊಬ್ಬ ತನ್ನನ್ನು ರೇಪ್  ಮಾಡುವಂತೆ ಕನಸು ಕಂಡ ಯುವತಿ ಭಯಗೊಂಡು, ತಾನು ಕುರೂಪಿಯಾದರೆ ಯಾರೂ ತನ್ನನ್ನು ಅತ್ಯಾಚಾರ ಮಾಡುವುದಿಲ್ಲ ಎಂದು ಭಾವಿಸಿ ತನ್ನ ಮೇಲೆ ಗ್ಯಾಸೊಲಿನ್ ಸುರಿದುಕೊಂಡು  ಬೆಂಕಿ ಹಚ್ಚಿಕೊಂಡಿದ್ದಾಳೆ.

ಪ್ರಸ್ತುತ ಯುವತಿ ಇರಾಕ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯುವತಿಯ ದೇಹ ಶೇ.80ರಷ್ಟು ಸುಟ್ಟು ಹೋಗಿದ್ದು, ಮೂಗು ಮತ್ತು ಎಡ ಕಿವಿ ಇಲ್ಲದಂತಾಗಿದೆ. ಯುವತಿಗೆ ಈಗಾಗಲೇ  ಸುಮಾರು 12 ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಇನ್ನೂ 30ಕ್ಕೂ ಹೆಚ್ಚು ಚರ್ಮ ಶಸ್ತ್ರಕ್ರಿಯೆ ಮತ್ತು ಮೂಳೆ ಶಸ್ತ್ರಕ್ರಿಯೆ ನಡೆಸಬೇಕಿದೆ. ಆದರೂ ಆಕೆ ಬದುಕುಳಿಯುವುದು ಕಷ್ಟಕರ ಎಂದು ವೈದ್ಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com