ಬ್ರಿಟನ್ ನಲ್ಲಿ ಸ್ಕೈಪ್ ಮೂಲಕ ಅಪ್ರಾಪ್ತ ಮುಸ್ಲಿಂ ಯುವತಿಯರಿಗೆ ಒತ್ತಾಯಪೂರ್ವಕ ವಿವಾಹ!

ಗಂಧರ್ವ ವಿವಾಹ, ಪ್ರೇಮ ವಿವಾಹ, ಹೀಗೆ ವಿವಿಧ ರೀತಿಯ ವಿವಾಹಗಳ ಬಗ್ಗೆ ಕೇಳಿರುತ್ತೀರಿ, ಆದರೆ ಸ್ಕೈಪ್ ವಿವಾಹದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಇಲ್ಲ ಅಲ್ವಾ? ಇಂಥದ್ದೊಂದು ವಿವಾಹ ಬ್ರಿಟನ್ ನಲ್ಲಿ ನಡೆಯುತ್ತಿದೆ!.
ಬ್ರಿಟನ್ ನಲ್ಲಿ ಸ್ಕೈಪ್ ಮೂಲಕ ಅಪ್ರಾಪ್ತ ಮುಸ್ಲಿಂ ಯುವತಿಯರಿಗೆ ಒತ್ತಾಯಪೂರ್ವಕ ವಿವಾಹ!
ಬ್ರಿಟನ್ ನಲ್ಲಿ ಸ್ಕೈಪ್ ಮೂಲಕ ಅಪ್ರಾಪ್ತ ಮುಸ್ಲಿಂ ಯುವತಿಯರಿಗೆ ಒತ್ತಾಯಪೂರ್ವಕ ವಿವಾಹ!

ಲಂಡನ್: ಗಂಧರ್ವ ವಿವಾಹ, ಪ್ರೇಮ ವಿವಾಹ, ಹೀಗೆ ವಿವಿಧ ರೀತಿಯ ವಿವಾಹಗಳ ಬಗ್ಗೆ ಕೇಳಿರುತ್ತೀರಿ, ಆದರೆ ಸ್ಕೈಪ್ ವಿವಾಹದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಇಲ್ಲ ಅಲ್ವಾ? ಇಂಥದ್ದೊಂದು ವಿವಾಹ ಬ್ರಿಟನ್ ನಲ್ಲಿ ನಡೆಯುತ್ತಿದೆ!.
ಅಪ್ರಾಪ್ತ ಮುಸ್ಲಿಂ ಯುವತಿಯರಿಗೆ ಧರ್ಮ ಗುರುಗಳಾಗಿರುವ ಇಮಾಮ್ ಗಳು ಸ್ಕೈಪ್ ಮೂಲಕ ಮಾಡುವೆ ಮಾಡಿಸುತ್ತಿದ್ದಾರೆ ಎಂಬ ವರದಿ ಬಹಿರಂಗವಾಗಿದೆ. ಬ್ರಿಟನ್ ನಲ್ಲಿ ಒತ್ತಾಯ ಪೂರ್ವಕ ಮದುವೆಗೆ ನಿಷೇಧ ವಿಧಿಸಿದ್ದರೂ ಮುಸ್ಲಿಂ ಯುವತಿಯರು ತೀರಾ ಪಾಶ್ಚಿಮಾತ್ಯ ಸಂಸ್ಕೃತಿಗೆ ಹೊಂದಿಕೊಳ್ಳುವುದನ್ನು ತಡೆಗಟ್ಟಲು ಸ್ಕೈಪ್ ಮೂಲಕ ವಿವಾಹ ನಿಶ್ಚಯ ಮಾಡಲಾಗುತ್ತಿದೆ ಎಂದು ಫ್ರೀಡಂ ಚಾರಿಟಿಯ ಸಂಸ್ಥಾಪಕ ಅನಿತಾ ಪ್ರೇಮ್ ಹೇಳಿದ್ದಾರೆ.
ಬ್ರಿಟನ್ ನಲ್ಲಿರುವ ಮುಸ್ಲಿಂ ಯುವತಿಯನ್ನು ವಿವಾಹವಾಗುವ ಯುವಕನಿಗೆ ವೀಸಾ ಕೊಡಿಸುವ ಭರವಸೆಯೊಂದಿಗೆ ಸ್ಕೈಪ್ ನಲ್ಲಿ ವಿವಾಹ ನಿಶ್ಚಯವಾಗುತ್ತದೆ. ಸ್ಕೈಪ್ ಮೂಲಕ ವಿವಾಹವಾಗುತ್ತಿದ್ದಂತೆಯೇ ಸಂಗಾತಿಯ ದೇಶದ ವೀಸಾ ಪಡೆಯುವುದಕ್ಕೆ ಒತ್ತಡ ಹೆಚ್ಚುತ್ತದೆ. ಇದರಿಂದಾಗಿ ವಿವಾಹವಾದ ಯುವತಿ ಪತಿಯ ದೇಶಕ್ಕೆ ಭೇಟಿ ನೀಡಿ ಗರ್ಭಧರಿಸುವಂತೆ ಒತ್ತಾಯಿಸಲಾಗುತ್ತದೆ.  ಬ್ರಿಟನ್ ಯುವತಿ ವಿವಾಹವಾದ ಯುವಕನನ್ನು ವಾಪಸ್ ಕರೆತರುವುದನ್ನು ಕಾನೂನುಬದ್ಧಗೊಳಿಸಲು ಈ ಕ್ರಮ ಅನುಸರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇಂಥದ್ದೇ ಒಂದು ಪ್ರಕರಣಾದಲ್ಲಿ 11 ವರ್ಷದ ಬ್ರಿಟನ್ ಯುವತಿಗೆ ಬಾಂಗ್ಲಾದೇಶದ 25 ವರ್ಷದ ಯುವಕನೊಂದಿಗೆ ಸ್ಕೈಪ್ ಮೂಲಕ ವಿವಾಹ ಮಾಡಿಸಲಾಗಿದೆ. ಸ್ಕೈಪ್ ಮೂಲಕ ವಿವಾಹವಾದ ಸಂದರ್ಭದಲ್ಲಿ ಯುವತಿಗೆ ಅದರ ಬಗ್ಗೆ ಸ್ಪಷ್ಟ ಅರಿವಿರುವುದಿಲ್ಲ. ಸ್ಕೈಪ್ ಮೂಲಕ ವಿವಾಹವಾದ ನಂತರ ಯುವತಿ ಪತಿಯನ್ನು ಭೇಟಿ ಮಾಡಬೇಕಿರುತ್ತದೆ. ಇದಕ್ಕೂ ಮುನ್ನ ತನ್ನ ಹಿರಿಯ ಸಹೋದರನಿಗೆ ಶಾಲೆಯಲ್ಲಿ ನೀಡಲಾಗಿದ್ದ ಪುಸ್ತಕದಲ್ಲಿ ಒತ್ತಾಯ ಪೂರ್ವಕ ವಿವಾಹದ ಬಗ್ಗೆ ತಿಳಿದು ಫ್ರೀಡಂ ಚಾರಿಟಿಯನ್ನು ಸಂಪರ್ಕಿಸಿದ್ದಾಳೆ. ಈ ಪ್ರಕರಣದಿಂದ ಸ್ಕೈಪ್ ವಿವಾಹ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. 
ಯಾವುದೇ ಧರ್ಮದಲ್ಲಿ ಒತ್ತಾಯಪೂರ್ವಕ ವಿವಾಹವನ್ನು ಒಪ್ಪುವುದಿಲ್ಲ. ಯುವತಿಯರನ್ನು ನಿಯಂತ್ರಿಸಲು ಕೆಲವು ಪೋಷಕರು ಇಂತಹ ಕ್ರಮ ಅನುಸರಿಸುತ್ತಿದ್ದಾರೆ ಎಂದು ಅನಿತಾ ಪ್ರೇಮ್ ಹೇಳಿದ್ದಾರೆ.  ಕಳೆದ ವರ್ಷ  14 ಶಾಲೆಗಳಿಂದ ಇಂಥದ್ದೇ 38 ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com