ಅಮೆರಿಕ ಮಿಲಿಟರಿ ವಿರುದ್ಧ ಸಿಖ್ ಯೋಧ ದೂರು

ಧಾರ್ಮಿಕ ನಂಬಿಕೆಗಳಿಂದಾಗಿ ಅಮೆರಿಕದ ಬೇರಾವ ಸೈನಿಕರನ್ನು ಒಳಪಡಿಸದಂತಹ ಪರೀಕ್ಷೆಗಳಿಗೆ ತಮ್ಮನ್ನು ಗುರಿಪಡಿಸಲಾಗುತ್ತಿದೆ...
ಕ್ಯಾಪ್ಟನ್ ಸಿಮ್ರತ್ ಪಾಲ್ ಸಿಂಗ್(ಚಿತ್ರ ಕೃಪೆ: sikhfoundation.org)
ಕ್ಯಾಪ್ಟನ್ ಸಿಮ್ರತ್ ಪಾಲ್ ಸಿಂಗ್(ಚಿತ್ರ ಕೃಪೆ: sikhfoundation.org)
ನವದೆಹಲಿ: ಧಾರ್ಮಿಕ ನಂಬಿಕೆಗಳಿಂದಾಗಿ ಅಮೆರಿಕದ ಬೇರೆ ಯಾವ ಸೈನಿಕರನ್ನು ಒಳಪಡಿಸದಂತಹ ಪರೀಕ್ಷೆಗಳಿಗೆ ತಮ್ಮನ್ನು ಗುರಿಪಡಿಸಲಾಗುತ್ತಿದೆ ಎಂದು ಅಮೆರಿಕದ ಸಿಖ್ ಯೋಧ ಸಿಮ್ರತ್ ಪಾಲ್ ಸಿಂಗ್ ಅಮೆರಿಕ ಮಿಲಿಟರಿ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. 
ಅಮೆರಿಕದ ಯೋಧನಾಗಿ ಹಲವಾರು ಮೆಚ್ಚುಗೆ ಹಾಗೂ ಶ್ಲಾಘನೆಯ ಪದಕಗಳನ್ನು ಪಡೆದಿರುವ 28 ವರ್ಷದ ಕ್ಯಾಪ್ಟನ್ ಸಿಮ್ರತ್ ಪಾಲ್ ಸಿಂಗ್ ಅಮೆರಿಕ ಮಿಲಿಟರಿ ವಿರುದ್ಧ ದೂರು ನೀಡಿದ್ದು, ಅಲ್ಲಿನ ಸೇನಾ ಇತಿಹಾಸದಲ್ಲೇ ಇಂಥ ಮೊಕದ್ದಮೆ ಇದೇ ಮೊದಲನೆಯದಾಗಿದೆ. 
ಸಿಮ್ರತ್ ಪಾಲ್ ಸಿಂಗ್ ಅವರಿಗೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅವರ ಪೇಟ ಧರಿಸಲು, ತಲೆಗೂದಲು ತೆಗೆಯದಿರಲು ಮತ್ತು ಗಡ್ಡ ಬೋಳಿಸದಿರಲು ಅನುಮತಿ ನೀಡಿ ತಾತ್ಕಾಲಿಕ ಧಾರ್ಮಿಕ ಅನುಮತಿಯನ್ನು ಸೇನೆಯಲ್ಲಿ ನೀಡಲಾಗಿತ್ತು. ಈ ಅನುಮತಿ ಮಾ.31ರ ವರೆಗೆ ಇದ್ದು ಇದೊಂದು ಅಪರೂಪದ ವಿಷಯವಾಗಿದ್ದು, ಈಗ ಅವರಿಗೆ ಸೇನೆಯಲ್ಲಿ ಉಳಿಯ ಬಯಸುವುದಾದರೆ ಸಿಂಗ್ ಹೆಚ್ಚುವರಿ ಪರೀಕ್ಷೆಗಳಿಗೆ ಒಳಪಡಬೇಕು ಎಂದು ಹೇಳಲಾಗುತ್ತಿದೆ ಎಂದು ಸಿಂಗ್ ಅವರ ಪರ ವಕೀಲರು ದೂರಿದ್ದಾರೆ. 
ಸೇನೆಯಲ್ಲಿ ಧರಿಸುವ ಹೆಲ್ಮೆಟ್ ಸಿಂಗ್ ಅವರ ಪೇಟದ ಮೇಲೆ ಕೂರುವುದೇ ಹಾಗೂ ಮುಖದ ಮೇಲಿನ ಗಾಜಿನ ಮುಸುಕು ಗಡ್ಡವನ್ನು ಮುಚ್ಚುವುದೇ ಎಂಬುದನ್ನು ಪರಿಶೀಲಿಸಿಬೇಕಾಗಿದೆ ಎಂದು ಸೇನೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com