ಪಾಕ್ ಗೆ ಎಫ್-16 ಯುದ್ಧ ವಿಮಾನ ಪೂರೈಕೆ ಬೇಡ: ಮುಂಬೈ ಮೂಲದ ಗೇಟ್ ವೇ ಹೌಸ್

ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನಗಳನ್ನು ಪೂರೈಕೆ ಮಾಡಬಾರದು ಎಂದು ಮುಂಬೈ ಮೂಲದ ಪ್ರಮುಖ ವಿದೇಶಾಂಗ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನಗಳನ್ನು ಪೂರೈಕೆ ಮಾಡಬಾರದು ಎಂದು ಮುಂಬೈ ಮೂಲದ ಪ್ರಮುಖ ವಿದೇಶಾಂಗ ನೀತಿ ಸಂಸ್ಥೆ ಗೇಟ್ ವೇ ಹೌಸ್ ಹೇಳಿದೆ. 
ಅಮೆರಿಕ ಪಾಕಿಸ್ತಾನಕ್ಕೆ ಎಫ್ 16 ಯುದ್ಧ ವಿಮಾನಗಳನ್ನು ಪೂರೈಕೆ ಮಾಡಬಾರದು ಹಾಗೂ ಮತ್ತಷ್ಟು ಯುದ್ಧ ವಿಮಾನಗಳನ್ನು ಪೂರೈಕೆ ಮಾಡಲು ಸಿದ್ಧವಿರುವ ಅಮೆರಿಕ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಗೇಟ್ ವೇ ತನ್ನ ವರದಿಯಲ್ಲಿ ತಿಳಿಸಿದೆ. 
ಪಾಕಿಸ್ತಾನ ಅನರ್ಹ ಮಿತ್ರನಾಗಿದ್ದು, ಯುದ್ಧ ವಿಮಾನಗಳನ್ನು ಪೂರೈಕೆ ಮಾಡಿದಷ್ಟು ತೊಂದರೆ ಹೆಚ್ಚಾಗುತ್ತದೆ. ಪಾಕಿಸ್ತಾನದಿಂದಲೇ ಜಿಹಾದಿಗಳು ಹೆಚ್ಚಾಗುತ್ತಿದ್ದು, ಅಮೆರಿಕ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಗೇಟ್ ವೇ ವರದಿ ಮಾಡಿದೆ. 
ಅಮೆರಿಕ ಪಾಕಿಸ್ತಾನಕ್ಕೆ ಪೂರೈಕೆ ಮಾಡಲಿರುವ ಎಫ್-16 ಯುದ್ಧ ವಿಮಾನಗಳು ಭಯೋತ್ಪಾದಕ ವಿರುದ್ಧ ನಡೆಯುವ ಕಾರ್ಯಾಚರಣೆಗೆ ನೆರವಾಗಲಿದೆ, ಆದ್ದರಿಂದ ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನಗಳನ್ನು ಪೂರೈಕೆ ಮಾಡಲು ಅಮೆರಿಕ ಸಿದ್ಧವಿದೆ ಎಂದು ಅಮೆರಿಕ ವಕ್ತಾರೆ ಹೆಲೇನಾ ವೈಟ್ ಸ್ಪಷ್ಟಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com