
ವಾಷಿಂಗ್ಟನ್: ಪಂಜಾಬ್ ನ ಪಠಾಣ್ ಕೋಟ್ ನಲ್ಲಿರುವ ವಾಯು ಸೇನಾ ನೆಲೆ ಮೇಲೆ ನಡೆದಿರುವ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಅಮೆರಿಕ ಭಯೋತ್ಪಾದನೆ ನಿಗ್ರಹ ಮಾಡಲು ಭಾರತಕ್ಕೆ ಬೆಂಬಲ ನೀಡುವುದಕ್ಕೆ ಬದ್ಧವಾಗಿದೆ ಎಂದು ಹೇಳಿದೆ.
ಭಯೋತ್ಪಾದಕ ಜಾಲವನ್ನು ನಾಶಮಾಡುವುದು ಹಾಗೂ ಭಯೋತ್ಪಾದಕರಿಗೆ ಶಿಕ್ಷೆ ವಿಧಿಸಲು ಎಲ್ಲಾ ರಾಷ್ಟ್ರಗಳಿಗೂ ಅಮೆರಿಕ ಕರೆ ನೀಡಿದೆ. ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿರುವ ಅಮೆರಿಕ, ದಾಳಿಯಲ್ಲಿ ಮೃತರಾದ ಕುಟುಂಬಗಳಿಗೆ ಸಂತಾಪ ಸೂಚಿಸುತ್ತದೆ, ಭಯೋತ್ಪಾದನೆ ನಿಗ್ರಹಕ್ಕೆ ಭಾರತದೊಂದಿಗೆ ಕೆಲಸ ಮಾಡಲು ಅಮೆರಿಕ ಬದ್ಧವಾಗಿದೆ ಎಂದು ಯುಎಸ್ ನ ಜಾನ್ ಕಿರ್ಬಿ ಹೇಳಿದ್ದಾರೆ.
ಪಠಾಣ್ ಕೋಟ್ ನ ವಾಯುನೆಲೆ ಮೇಲೆ ದಾಳಿ ನಡೆಸಿದ್ದ ಪಾಕಿಸ್ತಾನದ ಮೂಲದ ನಾಲ್ವರು ಭಯೋತ್ಪಾದಕರು ಯೋಧರ ಗುಂಡಿಗೆ ಬಲಿಯಾಗಿದ್ದರು.
Advertisement