ಈ ಮೀನಿನ ಬೆಲೆ ಕೇವಲ 78ಲಕ್ಷವಂತೆ..!

ಕೆಜಿ ಮೀನಿಗೆ 80 ರು. ನೀಡಲು ಹಿಂದೆ ಮುಂದೆ ನೋಡುವ ಜನರಿರುವಾಗ ಜಪಾನ್ ದೇಶದ ಓರ್ವ ಬಾಣಸಿಗ ಒಂದೇ ಮೀನಿಗೆ ಬರೋಬ್ಬರಿ 78 ಲಕ್ಷ ರು. ಹಣ ನೀಡಿ ಖರೀದಿಸಿದ್ದಾನೆ...
78 ಲಕ್ಷ ನೀಡಿ ಮೀನು ಖರೀದಿಸಿದ ಬಾಣಸಿಗ ಕಿಯೋಷಿ ಕಿಮುರಾ (ಚಿತ್ರಕೃಪೆ: ಸಿಬಿಸಿ ನ್ಯೂಸ್)
78 ಲಕ್ಷ ನೀಡಿ ಮೀನು ಖರೀದಿಸಿದ ಬಾಣಸಿಗ ಕಿಯೋಷಿ ಕಿಮುರಾ (ಚಿತ್ರಕೃಪೆ: ಸಿಬಿಸಿ ನ್ಯೂಸ್)

ಟೋಕಿಯೋ: ಕೆಜಿ ಮೀನಿಗೆ 80 ರು. ನೀಡಲು ಹಿಂದೆ ಮುಂದೆ ನೋಡುವ ಜನರಿರುವಾಗ ಜಪಾನ್ ದೇಶದ ಓರ್ವ ಬಾಣಸಿಗ ಒಂದೇ ಮೀನಿಗೆ ಬರೋಬ್ಬರಿ 78 ಲಕ್ಷ ರು. ಹಣ ನೀಡಿ  ಖರೀದಿಸಿದ್ದಾನೆ.

ಜಪಾನ್ ನಲ್ಲಿ ಹೊಸ ವರ್ಷದ ಆಚರಣೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಹೀಗಾಗಿ ಹೊಸ ವರ್ಷದ ಕಾರ್ಯಕ್ರಮಕ್ಕಾಗಿ ಅಲ್ಲಿನ ಸಾಂಪ್ರದಾಯ ತಿನಿಸುಗಳಲ್ಲಿ ಮೀನು ಕೂಡ ಒಂದು.  ಅದರಲ್ಲೂ ಪ್ರಮುಖವಾಗಿ ಟ್ಯೂನಾ ಫಿಶ್ ಗಳೆಂದರೆ ಜಪಾನಿಗರಿಗೆ ಪ್ರಾಣ. ಇದೇ ಕಾರಣಕ್ಕಾಗಿ ಜಪಾನ್ ನಲ್ಲಿ ಟ್ಯೂನಾ ಫಿಶ್ ಗೆ ಬೇಡಿಕೆ ಹೆಚ್ಚು. ಸಾಮಾನ್ಯವಾಗಿ ಸಣ್ಣ ಗಾತ್ರದಲ್ಲಿ ಕಾಣಸಿಗುವ  ಟ್ಯೂನಾ ಫಿಶ್ ಗಳಿಗೆ ಬೇಡಿಕೆ ಇರುವಾಗ, ಇದೇ ಮೀನು ಸುಮಾರು 200 ಕೆಜಿ ತೂಕದ್ದಾಗಿದ್ದರೆ ಯಾರಾದರೂ ಬಿಡುವುದುಂಟೆ..!

ಹೌದು. ಹೊಸ ವರ್ಷದ ಆಚರಣೆಗಾಗಿ ಇತ್ತೀಚೆಗೆ ಜಪಾನ್ ನ ಟ್ಸುಕಿಜಿ ಮಾರುಕಟ್ಟೆಯಲ್ಲಿ ಮೀನು ಹರಾಜು ಪ್ರಕ್ರಿಯೆ ನಡೆದಿತ್ತು, ಈ ಹರಾಜಿನಲ್ಲಿ ಸುಮಾರು 200 ಕೆಜಿ ತೂಗುವ ಟ್ಯೂನಾ ಫಿಶ್  ಬರೊಬ್ಬರಿ 78 ಲಕ್ಷ ರುಗಳಿಗೆ ಖರೀದಿಯಾಗಿದೆ. ಈ ಭರ್ಜರಿ ಮೀನನ್ನು ಖರೀದಿಸಿದ್ದು ಕೂಡ ಓರ್ವ ಬಾಣಸಿಗನೇ ಎಂಬುದು ಕುತೂಹಲಕಾರಿ ಅಂಶ. ಜಪಾನ್ ನಲ್ಲಿ ಸುಶಿ ಎಂಬ ರೆಸ್ಟೋರೆಂಟ್  ನಡೆಸುವ ಕಿಯೋಷಿ ಕಿಮುರಾ ಎಂಬ ಖ್ಯಾತ ಬಾಣಸಿಗ ಹೊಸ ವರ್ಷದ ಮೊದಲ ಮೀನು ಹರಾಜು ಪ್ರಕ್ರಿಯೆಯಲ್ಲಿ ಮೊದಲ ಮೀನನ್ನು ಖರೀದಿಸಿದ್ದಾನೆ. ಅದೂ ಕೂಡ ಬರೊಬ್ಬರಿ 78 ಲಕ್ಷ  ರು.ಗಳಿಗೆ.

ಇದು ಜಪಾನ್ ನಲ್ಲಿ ನಡೆದ ಮೀನು ಹರಾಜು ಪ್ರಕ್ರಿಯೆಯಲ್ಲಿಯೇ ಅತಿ ಹೆಚ್ಚು ಮೊತ್ತದ ಮೀನು ಖರೀದಿಯಾಗಿದೆ ಎಂದು ತಿಳಿದುಬಂದಿದೆ. ಸುಮಾರು 200 ಕೆಜಿ ತೂಗುವ ಬ್ಲೂಫಿನ್ ಟ್ಯೂನಾ ಫಿಶ್  ಅನ್ನು ಕಿಯೋಷಿ ಕಿಮುರಾ ಬರೋಬ್ಬರಿ 11, 7000 ಡಾಲರ್(ಅಂದಾಜು 78 ಲಕ್ಷ ರು.) ನೀಡಿ ಖರೀದಿಸಿದ್ದಾರೆ. ತಮ್ಮ ಸುಶಿ ರೆಸ್ಟೋರೆಂಟ್ ಗೆ ಬರುವ ಗ್ರಾಹಕರಿಗೆ ತಾವು ಇದೇ ಟ್ಯೂನಾ ಫಿಶ್ ಅನ್ನು  ನೀಡುವುದಾಗಿ ಕಿಮುರಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com