ಕೊಲಂಬೊ: ವಿಶ್ವದ ಅತಿದೊಡ್ಡ ನೀಲರತ್ನ ಶ್ರೀಲಂಕಾದಲ್ಲಿ ಪತ್ತೆಯಾಗಿದೆ. ಈ ರತ್ನದ ತೂಕ 1404.49 ಕ್ಯಾರೆಟ್ ಇದ್ದು ಇದರ ಮೌಲ್ಯ 10 ಕೋಟಿ ಡಾಲರ್ (ರು.650 ಕೋಟಿ) ಆಗಲಿದೆ ಎಂದು ಅಂದಾಜಿಸಲಾಗಿದೆ.
ಶ್ರೀಲಂಕಾದ ದಕ್ಷಿಣ ಭಾಗ ರತ್ನಪುರದಲ್ಲಿ ಈ ರತ್ನ ಪತ್ತೆಯಾಗಿದೆ. ಈ ಪ್ರದೇಶವನ್ನು ವಜ್ರಗಳ ನಗರ ಎಂತಲೂ ಕರೆಯಲಾಗುವುದು. ಇದುವರೆಗೂ ಸಿಕ್ಕಿರುವ ಅತಿದೊಡ್ಡ ನೀಲಿ ರತ್ನದ ತೂಕ 1,395 ಕ್ಯಾರೆಟ್ ಆಗಿದೆ.
ಈಗ ಸಿಕ್ಕಿರುವುದು ವಿಶ್ವದಲ್ಲೇ ಅತಿದೊಡ್ಡದು ಎಂದು ಇಲ್ಲಿನ ವಜ್ರ ತಜ್ಞ ಅರ್ಮಿಲ್ ಸಮ್ ನೂನ್ ಹೇಳಿದ್ದಾರೆ. ಈ ರತ್ನಕ್ಕೆ ದಿ ಸ್ಟಾರ್ ಅಫ್ ಆಡಂ ಎಂದು ಹೆಸರಿಡಲಾಗಿದೆ.