ಪಾಕಿಸ್ತಾನ ಹೊಸ ಉಗ್ರ ಜಾಲಗಳ ಸ್ವರ್ಗ: ಬರಾಕ್ ಒಬಾಮಾ

ಹೊಸ ಭಯೋತ್ಪಾದಕ ಜಾಲಗಳಿಗೆ ಪಾಕಿಸ್ಥಾನ ಆಸರೆಯ ತಾಣವಾಗುವ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಎಚ್ಚರಿಸಿದ್ದಾರೆ....
ಬರಾಕ್ ಒಬಾಮಾ
ಬರಾಕ್ ಒಬಾಮಾ
Updated on: 

ವಾಷಿಂಗ್ಟನ್‌: ಹೊಸ ಭಯೋತ್ಪಾದಕ ಜಾಲಗಳಿಗೆ ಪಾಕಿಸ್ಥಾನ ಆಸರೆಯ ತಾಣವಾಗುವ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಎಚ್ಚರಿಸಿದ್ದಾರೆ.

ಅಮೆರಿಕ ರಾಜ್ಯಗಳ ಒಕ್ಕೂಟವನ್ನು ಉದ್ದೇಶಿಸಿ ಮಾಡಿದ ಅಂತಿಮ ಭಾಷಣದಲ್ಲಿ ಒಬಾಮಾ ಅವರು, ಮುಂದಿನ ಕೆಲವು ದಶಕಗಳ ಕಾಲ ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನದಲ್ಲಿ ಅಸ್ಥಿರತೆ ಮುಂದುವರಿಯಬಹುದು. ಅಲ್‌ ಕಾಯಿದಾ ಮತ್ತು ಐಸಿಸ್‌ ಉಗ್ರ ಸಂಘಟನೆಗಳು ವಿಶ್ವಕ್ಕೆ ನೇರವಾದ ಬೆದರಿಕೆ ಒಡ್ಡಬಹುದು ಎಂದು ಎಚ್ಚರಿಸಿದ್ದಾರೆ.

ಅಮೆರಿಕವನ್ನು ಕೆಣಕುವ ಯಾವುದೇ ಭಯೋತ್ಪಾದಕ ಸಂಘಟನೆಯನ್ನು ನಾಮಾವಶೇಷ ಮಾಡುವ ಶಕ್ತಿ ಮತ್ತು ಸಂಕಲ್ಪ ಅಮೆರಿಕಾಗೆ ಇದೆ.  ಅಮೆರಿಕಾದ ಅಧ್ಯಕ್ಷನಾಗಿರುವ ನನಗೆ ಈ ಬಗ್ಗೆ ದೃಢವಾದ ನಂಬಿಕೆ ಇದೆ ಎಂದ ಅವರು ಅಮೆರಿಕ ತನ್ನನ್ನು ಕೆಣಕಿರುವ ಅಲ್‌ ಕಾಯಿದಾ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ಗೆ ಏನು ಮಾಡಿದೆ ಎಂಬುದನ್ನು ಗಮನಿಸಿ, ಹಾಗೆಯೇ ಯೆಮೆನ್‌ನಲ್ಲಿನ ಅಲ್‌ ಕಾಯಿದಾ ನಾಯಕನಿಗೆ, ಬೆಂಗಾಝಿ ಮೇಲಿನ ದಾಳಿಕೋರರಿಗೆ ನಾವು ಏನು ಮಾಡಿದ್ದೇವೆ ಎಂಬುದನ್ನು ತಿಳಿದುಕೊಳ್ಳಿ ಎಂದು ಒಬಾಮಾ ನೆನಪಿಸಿಕೊಟ್ಟರು.

ಐಸಿಸ್‌ ವಿರುದ್ಧ ಹೋರಾಟವನ್ನು ಮೂರನೇ ಜಾಗತಿಕ ಸಮರವೆಂದು ಯಾರೂ ತಿಳಿಯಬೇಕಾಗಿಲ್ಲ. ಐಸಿಸ್‌ ಉಗ್ರರನ್ನು ನಾವು ರಕ್ಕಸರು, ಧರ್ಮಾಂಧರು ಎನ್ನಬೇಕೇ ಹೊರತು ಅವರನ್ನು ಯಾವುದೇ ಧರ್ಮದ ಪ್ರತಿನಿಧಿಗಳೆಂದು ಕಾಣುವ ಅಗತ್ಯವಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com