ಲಾಸ್ ಏಂಜಲೀಸ್: ವಿಶ್ವ ದಾಖಲೆಯ ಅಮೆರಿಕದ ಪವರ್‍ಬಾಲ್ ಲಾಟರಿ ಜಾಕ್‍ಪಾಟ್ ಅನ್ನು ಕೊನೆಗೂ ಹಲವರು ಹಂಚಿಕೊಂಡಿದ್ದಾರೆ.
1.6 ಶತಕೋಟಿ ಡಾಲರ್(ರು.10,700 ಕೋಟಿ) ಜಾಕ್‍ಪಾಟ್ ಯಾರಿಗೆ ಅದೃಷ್ಟ ತಂದುಕೊಡಲಿದೆ ಎಂದು ಕಾಯುತ್ತಿದ್ದ ಅಮೆರಿಕನ್ನರ ಲಾಟರಿ ಜ್ವರ ಗುರುವಾರ ಇಳಿಮುಖವಾಯಿತು. ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಟೆನ್ನೆಸ್ಸೆ ಸೇರಿ ಹಲವು ಕಡೆ ವಿನ್ನಿಂಗ್ ಸಂಖ್ಯೆ ಕಂಡುಬಂದಿದ್ದು, ಲಾಟರಿಯನ್ನು ಹಲವರು ಹಂಚಿಕೊಳ್ಳಬೇಕಾಗಿ ಬಂದಿದೆ. ಅಂತಿಮವಾಗಿ ಎಷ್ಟು ಮಂದಿ ವಿಜೇತರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಕ್ಯಾಲಿಫೋರ್ನಿಯಾ ಲಾಟರಿ ವಕ್ತಾರ ರುಸ್ ಲೊಪೆಝ್ ತಿಳಿಸಿದ್ದಾರೆ.
ವಿಶ್ವದಾಖಲೆಯ ಜಾಕ್ ಪಾಟ್‍ಗಾಗಿ ಅಮೆರಿಕನ್ನರು ಹಗಲಿರುಳೆನ್ನದೇ ತಮ್ಮ 2 ಡಾಲರ್‍ನ ಟಿಕೆಟ್ ಹಿಡಿದುಕೊಂಡು, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದರು.
Advertisement