ಅಮೆರಿಕ ಪೂರ್ವ ಕರಾವಳಿಗೆ ಅಪ್ಪಳಿಸಿದ ಸ್ನೋಝಿಲ್ಲಾ

ಅತ್ಯಂತ ಅಪಾಯಕಾರಿ ಹಿಮಗಾಳಿಯ ಶನಿವಾರ ಅಮೆರಿಕದ ಪೂರ್ವ ಕರಾವಳಿಗೆ ಅಪ್ಪಳಿಸಿದ್ದು, 10 ಮಂದಿಯನ್ನು ಬಲಿತೆಗೆದುಕೊಂಡಿದೆ...
ಹಿಮಗಾಳಿ
ಹಿಮಗಾಳಿ

ವಾಷಿಂಗ್ಟನ್: ಅತ್ಯಂತ ಅಪಾಯಕಾರಿ ಹಿಮಗಾಳಿಯ ಶನಿವಾರ ಅಮೆರಿಕದ ಪೂರ್ವ ಕರಾವಳಿಗೆ ಅಪ್ಪಳಿಸಿದ್ದು, 10 ಮಂದಿಯನ್ನು ಬಲಿತೆಗೆದುಕೊಂಡಿದೆ.

90 ವರ್ಷಗಳಲ್ಲೇ ಭಾರಿ ಹಿಮಗಾಳಿ ಇದಾಗಿದ್ದು, ದಾಖಲೆಯ 30 ಇಂಚುಗಳಷ್ಟು ಹಿಮ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಡಿಸಿ, ಜಾರ್ಜಿಯಾ, ನಾರ್ತ್ ಕೆರೋಲಿನಾ, ನ್ಯೂಯಾರ್ಕ್ ಸೇರಿದಂತೆ 10 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಈ ಹಿಮಗಾಳಿಗೆ ಸ್ನೋಝಿಲ್ಲಾ ಎಂದು ನಾಮಕರಣ ಮಾಡಲಾಗಿದ್ದು, ಇದರ ತೀವ್ರತೆಗೆ 1,20,000ಕ್ಕೂ ಹೆಚ್ಚು ಮನೆಗಳಲ್ಲಿ ಕತ್ತಲು ಆವರಿಸಿದೆ. ಯಾರೂ ಮನೆಗಳಿಂದ ಹೊರಗೆ ಬರದಂತೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಶನಿವಾರ 7.600ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬವಾಗಿದೆ. ವಾಷಿಂಗ್ಟನ್ ಡಿಸಿಯಲ್ಲಿ ಸಾರ್ವಜನಿಕ ಸಾರಿಗೆಯನ್ನೇ ಸಂಪೂರ್ಣ ಬಂದ್ ಮಾಡಲಾಗಿದೆ. ಸುಮಾರು 36 ಗಂಟೆಗಳ ಕಾಲ ಹಿಮಗಾಳಿಯು ಪ್ರಭಾವ ಬೀರಲಿದ್ದು, 1 ಶತಕೋಟಿ ಡಾಲರ್ ನಷ್ಟು ನಷ್ಟ ಉಂಟಾಗುವ ಸಾಧ್ಯತೆಯಿಂದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com