ತಿರುಗಾಡಲು ಹೋದ ನಾಯಿಗೆ ಮ್ಯಾರಥಾನ್ ಮೆಡಲ್..!

ಶ್ವಾನಗಳನ್ನು ಬೈದುಕೊಳ್ಳುವವವರು ಈ ಸುದ್ದಿ ಓದಲೇ ಬೇಕು. ಸೂಸೂ ಮಾಡಿಕೊಂಡು ಬಾ ಎಂದು ಬೆಲ್ಟ್ ಬಿಚ್ಚಿದ್ದೇ ತಡ, ಕಾಲುಕಿತ್ತ ನಾಯಿ ಬಳಿಕ ಮ್ಯಾರಥಾನ್ ಸ್ಪರ್ಧೆಯಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಸ್ಪರ್ಧೆ ಗೆದ್ದು ಮೆಡಲ್ ಪಡೆದಿದೆ...
ಮ್ಯಾರಥಾನ್ ನಲ್ಲಿ ಪಾಲ್ಗೊಂಡ ಲುಡಿವೈನ್ ನಾಯಿ (ಸಂಗ್ರಹ ಚಿತ್ರ)
ಮ್ಯಾರಥಾನ್ ನಲ್ಲಿ ಪಾಲ್ಗೊಂಡ ಲುಡಿವೈನ್ ನಾಯಿ (ಸಂಗ್ರಹ ಚಿತ್ರ)

ಹ್ಯೂಸ್ಟನ್: ಶ್ವಾನಗಳನ್ನು ಬೈದುಕೊಳ್ಳುವವವರು ಈ ಸುದ್ದಿ ಓದಲೇ ಬೇಕು. ಸೂಸೂ ಮಾಡಿಕೊಂಡು ಬಾ ಎಂದು ಬೆಲ್ಟ್ ಬಿಚ್ಚಿದ್ದೇ ತಡ, ಕಾಲುಕಿತ್ತ ನಾಯಿ ಬಳಿಕ ಮ್ಯಾರಥಾನ್ ಸ್ಪರ್ಧೆಯಲ್ಲಿ 7ನೇ  ಸ್ಥಾನ ಪಡೆಯುವ ಮೂಲಕ ಸ್ಪರ್ಧೆ ಗೆದ್ದು ಮೆಡಲ್ ಪಡೆದಿದೆ.

ಅಮೆರಿಕದ ಅಲಬಾಮಾದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಎರಡೂವರೆ ವರ್ಷದ ಹಾಂಡ್ ಮರಿ ಲುಡಿವೈನ್ ಎಂಬ ಶ್ವಾನ ಮ್ಯಾರಥಾನ್ ನಲ್ಲಿ ಮೆಡಲ್ ಗೆದ್ದು ಇದೀಗ ಸಾಮಾಜಿಕ  ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಈಡಾಗಿದೆ. ಸೂಸೂ ಮಾಡಲು ತನ್ನ ಮಾಲೀಕ ಬೆಲ್ಟ್ ಬಿಚ್ಚುತ್ತಿದ್ದಂತೆಯೇ ಕಾಲುಕಿತ್ತ ನಾಯಿ ಅಲ್ಲೇ ಪಕ್ಕದಲ್ಲಿ ನಡೆಯುತ್ತಿದ್ದ ಹಾಫ್ ಮ್ಯಾರಥಾನ್ ಸ್ಪರ್ಧೆಯನ್ನು  ಸೇರಿಕೊಂಡಿದೆ. ಅಲ್ಲದೆ ಅಲ್ಲಿ ಓಡುತ್ತಿದ್ದ ಮ್ಯಾರಥಾನ್ ಸ್ಪರ್ಧಿಗಳೊಂದಿಗೆ ತಾನೂ ಸೇರಿಕೊಂಡು ಓಡಿದ್ದು, 165 ಸ್ಪರ್ಧಿಗಳ ಪೈಕಿ 7ನೆಯದಾಗಿ ಗುರಿ ಮುಟ್ಟಿದೆ.

ಹಾಗಾಗಿ ತಿರುಗಾಡಲು ಹೋದ ನಾಯಿ ಮಾಲೀಕರಿಗೆ ಮೆಡಲ್ ನೀಡಲಾಗಿದೆ ಎಂಬ ಮಾತು ಚಾಲ್ತಿಗೆ ಬರಲು ಕಾರಣವಾಗಿದೆ. ಅಲಬಾಮಾ ಸಮೀಪದ ಎಲ್ಕ್ ಮಾಂಟ್ ನ ಏಪ್ರಿಲ್ ಹ್ಯಾಮಿಲ್ಟನ್  ಅವರು ಈ ನಾಯಿಯ ಮಾಲೀಕರಾಗಿದ್ದಾರೆ. ಮಲಮೂರ್ತ ವಿಸರ್ಜನೆಗೆಂದು ಚೈನ್ ಕಳಚಿದರೆ, ಲುಡಿವೈನ್ ಹೋಗಿದ್ದು ಪಕ್ಕದಲ್ಲೇ ನಡೆಯುತ್ತಿದ್ದ 21 ಕಿ.ಮೀಗಳ ದೂರದ ಟ್ರ್ಯಾಕ್ ಲೆಸ್ ಟ್ರೈನ್  ಟ್ರೆಕ್ ಹಾಫ್ ಮ್ಯಾರಥಾನ್ ಸ್ಪರ್ಧಾಳುವಾಗಲು. ಮ್ಯಾರಥಾನ್ ನಲ್ಲಿ ಓಡುತ್ತಿದ್ದವರೂ ಸ್ಪರ್ಧಾಳುವಿನ ಶ್ವಾನವಿರಬಹುದು. ಸುಸ್ತಾದಾಗ ನಿಲ್ಲಬಹುದು ಎಂದು ಅಂದುಕೊಂಡು ತಮ್ಮ ಪಾಡಿಗೆ  ಓಡುತ್ತಿದ್ದರು. ಆದರೆ ಲುಡಿವೈನ್ ಅಂತಿಂಥಾ ನಾಯಿಯಲ್ಲ.

ಓಟಗಾರರೊಂದಿಗೆ ಇಡೀ 21 ಕಿ.ಮೀ ಓಟವನ್ನೂ ಪೂರೈಸಿತು. ಅಲ್ಲದೇ 7ನೇ ಸ್ಥಾನವನ್ನೂ ಗಿಟ್ಟಿಸಿಕೊಂಡಿತು. ಇದರ ಸ್ಪರ್ಧಾ ಮನೋಭಾವ ಕಂಡ ಮ್ಯಾರಥಾನ್ ನ ಸ್ಪರ್ಧಾಳುಗಳು ನೇರವಾಗಿ  ಓಡಿ ಗುರಿ ಮುಟ್ಟಲು ಹೆಣಗುತ್ತಿದ್ದರೆ, ಲುಡಿವೈನ್ ಮಧ್ಯೆ-ಮಧ್ಯೆ ಸಿಕ್ಕ ಸತ್ತ ಪ್ರಾಣಿಗಳ ದೇಹ ಮೂಸುತ್ತಾ, ಹೊಳೆಯಲ್ಲಿ ಆಟವಾಡುತ್ತಲೇ ಏಳನೇ ಸ್ಥಾನ ಪೂರ್ಣಗೊಳಿಸಲು ಯಶಸ್ವಿಯಾಗಿದೆ.  ಸಾಮಾಜಿಕ ಜಾಲತಾಣಗಳಲ್ಲಿಯೂ ಈ ನಾಯಿಯ ಸಾಹಸದ ವಿಡಿಯೋ, ಫೋಟೋ ವೈರಲ್ ಆಗಿದೆ.

ರೇಸ್ ಆರಂಭದಲ್ಲಿ ಸೇರಿಕೊಂಡ ಲುಡಿವೈನ್, ಆರಂಭದಲ್ಲಿ ಮುಂಚೂಣಿಯಲ್ಲೇ ಇದ್ದಳು, ಮಧ್ಯೆ-ಮಧ್ಯೆ ಅತಿತ್ತ ಹೋಗಿ ಮತ್ತೆ ಬಂದು ರೇಸ್ ಸೇರಿಕೊಂಡರೂ ಏಳನೇ ಸ್ಥಾನದಲ್ಲಿ ಬಂದಿದ್ದಾಳೆ.  ಅದಕ್ಕಾಗಿಯೇ ಆಕೆಗೆ ಪದಕ ನೀಡಿ ಗೌರವಿಸಲಾಯಿತು.
-ಗ್ರೆಟಾ ಆರ್ಮ್ ಸ್ಟ್ರಾಂಗ್, ಮ್ಯಾರಥಾನ್ ಆಯೋಜಕಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com