ಜಾನ್ ಕೆರಿ
ವಿದೇಶ
ಉತ್ತರ ಕೊರಿಯಾ ಜಗತ್ತಿಗೆ ಬೆದರಿಕೆ ಒಡ್ಡಿದೆ: ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ
ಜಲಜನಕ ಬಾಂಬ್ ಸ್ಫೋಟ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ ಜಗತ್ತಿಗೆ ಪ್ರತ್ಯಕ್ಷ್ಯ ಬೆದರಿಕೆಯೊಡ್ಡಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರು...
ಬೀಜಿಂಗ್: ಜಲಜನಕ ಬಾಂಬ್ ಸ್ಫೋಟ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ ಜಗತ್ತಿಗೆ ಪ್ರತ್ಯಕ್ಷ್ಯ ಬೆದರಿಕೆಯೊಡ್ಡಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರು ತಿಳಿಸಿದ್ದಾರೆ.
ಉತ್ತರ ಕೊರಿಯಾ ನಡೆಸಿದ ನಾಲ್ಕನೇ ಅಣ್ವಸ್ತ್ರ ಪರೀಕ್ಷೆಯ ಕುರಿತು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾನ್ ಕೆರಿ ಅವರು, ‘ಸ್ವದೇಶ ಹಾಗೂ ಸ್ನೇಹಿತರನ್ನು ಮತ್ತು ಮೈತ್ರಿ ರಾಷ್ಟ್ರಗಳ ರಕ್ಷಣೆಗಾಗಿ ಅಮೆರಿಕವು ಅಗತ್ಯ ಇರುವ ಎಲ್ಲವನ್ನೂ ಮಾಡಲಿದೆ’ ಎಂದು ವಾಂಗ್ ಜತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆರಿ ನುಡಿದರು.
ಜನವರಿ 6 ರಂದು ಉತ್ತರ ಕೊರಿಯಾ ‘ಜಲಜನಕ ಬಾಂಬ್’ ಸ್ಪೋಟ ಪರೀಕ್ಷೆ ನಡೆಸಿ ವಿಶ್ವದ ಕೆಂಗಣ್ಣಿಗೆ ಗುರಿಯಾಗಿತ್ತು.

