ಮುಂಬೈ ದಾಳಿ: ಶಂಕಿತರ ಧ್ವನಿ ಮಾದರಿ ನೀಡಲು ಪಾಕ್ ಕೋರ್ಟ್ ನಕಾರ

ಮುಂಬೈ ದಾಳಿ ಪ್ರಕರಣದ ವಿಚಾರಣೆಗೆ ಮತ್ತೆ ಹಿನ್ನಡೆಯಾಗಿದೆ. ಪಾಕಿಸ್ತಾನ ಕೋರ್ಟ್‌ವೊಂದು 26/11 ದಾಳಿಯ ರೂವಾರಿ ಝಕಿಉರ್ ರೆಹಮಾನ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಮುಂಬೈ ದಾಳಿ ಪ್ರಕರಣದ ವಿಚಾರಣೆಗೆ ಮತ್ತೆ ಹಿನ್ನಡೆಯಾಗಿದೆ. ಪಾಕಿಸ್ತಾನ ಕೋರ್ಟ್‌ವೊಂದು 26/11 ದಾಳಿಯ ರೂವಾರಿ ಝಕಿಉರ್ ರೆಹಮಾನ್ ಲಖ್ವಿ ಮತ್ತು ಇತರೆ ಆರು ಶಂಕಿತ ಉಗ್ರರ ಧ್ವನಿ ಮಾದರಿ ನೀಡುವಂತೆ ಕೋರಿ ಪಾಕ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಶಂಕಿತರು ಮುಂಬೈ ದಾಳಿ ಕೋರರೊಂದಿಗೆ ಸಂಭಾಷಣೆ ನಡೆಸಿದ್ದು, ಅದನ್ನು ಪರಿಶೀಲಿಸಲು ಏಳು ಶಂಕಿತರ ಧ್ವನಿ ಮಾದರಿ ನೀಡಿ ಎಂದು ಪಾಕ್ ಸರ್ಕಾರ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೆ ಈ ಧ್ವನಿ ಮಾದರಿಯನ್ನು ಆರೋಪಿಗಳ ವಿರುದ್ಧ ಸಾಕ್ಷ್ಯವಾಗಿ ಮುಂಬೈ ಉಗ್ರ ನಿಗ್ರಹ ಕೋರ್ಟ್‌ಗೆ ಹಾಜರುಪಡಿಸಲು ಭಾರತೀಯ ಗುಪ್ತಚಲ ಇಲಾಖೆ ಸಿದ್ಧತೆ ನಡಸಿತ್ತು. ಆದರೆ ಇಸ್ಲಾಮಾಬಾದ್ ಹೈಕೋರ್ಟ್ ಧ್ವನಿ ಮಾದರಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಜಾಗೊಳಿಸಿದೆ.
ಆರೋಪಿಯ ಧ್ವನಿ ಮಾದರಿ ನೀಡಲು ಅವಕಾಶ ನೀಡುವಂತಹ ಕಾನೂನು ಇಲ್ಲ ಎಂದು ಹೇಳಿ 2011 ಮತ್ತು 2015ರಲ್ಲೂ ವಿಚಾರಣ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.
ಭಾರತೀಯ ಗುಪ್ತಚಲ ಇಲಾಖೆ ಅಧಿಕಾರಿಗಳು 2008ರಲ್ಲಿ ನಡೆದ ಮುಂಬೈ ದಾಳಿಯ ಉಗ್ರರೊಂದಿಗೆ ಶಂಕಿತರು ಸಂಭಾಷಣೆ ನಡೆಸಿರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಅಲ್ಲದೆ ಪ್ರಕರಣದ ತನಿಖೆ ಮುಕ್ತಾಯಗೊಳಿಸಲು ಶಂಕಿತರ ಧ್ವನಿ ಮಾದರಿಯ ಅಗತ್ಯ ಇದೆ ಎಂದು ಪ್ಯಾಸಿಕ್ಯೂಷನ್ ಪರ ವಕೀಲರು ವಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com