
ದಲೋರಿ: ನೈಜೀರಿಯಾದಲ್ಲಿ ಬೊಕೊ ಉಗ್ರರು ಮತ್ತೆ ತಮ್ಮ ಅಟ್ಟಹಾಸವನ್ನು ಮುಂದುವರೆಸಿದ್ದು, ಉಗ್ರರ ನರ್ತನಕ್ಕೆ 86 ಕ್ಕೂ ಹೆಚ್ಚು ಮಂದಿ ಬಲಿಯಾಗಿರುವುದಾಗಿ ಸೋಮವಾರ ತಿಳಿದುಬಂದಿದೆ.
ನೈಜೀರಿಯಾದ ದಲೋರಿ ಹಳ್ಳಿಯ ಮೇಲೆ ದಾಳಿ ಮಾಡಿರುವ ಉಗ್ರರು ಮನೆಯಲ್ಲಿದ್ದ ಮಕ್ಕಳನ್ನು ಸಜೀವವಾಗಿ ದಹಿಸಿದ್ದಾರೆ. ಉಗ್ರರ ದಾಳಿಗೆ ಈಗಾಗಲೇ ಗ್ರಾಮದಲ್ಲಿದ್ದ 84 ಮಂದಿ ಸಾವನ್ನಪ್ಪಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ದಾಳಿ ಕುರಿತಂತೆ ಮಾಹಿತಿ ನೀಡಿರುವ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ ಅಲಾಮಿನ್ ಬರುಕಾ ಅವರು, ಗ್ರಾಮಕ್ಕೆ ಮೂವರು ಆತ್ಮಾಹುತಿ ದಾಳಿಕೋರರು ಬಂದಿದ್ದರು. ಗ್ರಾಮಕ್ಕೆ ಬರುತ್ತಿದ್ದಂತೆ ಮೂವರು ವ್ಯಕ್ತಿಗಳು ತಮ್ಮ ಕೈಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿದರು. ಅಲ್ಲದೆ, ಇದ್ದಕ್ಕಿದ್ದಂತೆ ಆತ್ಮಾಹುತಿ ಬಾಂಬ್ ಗಳನ್ನು ಸ್ಪೋಟಿಸಿಕೊಂಡರು. ದಾಳಿ ವೇಳೆ ನಮ್ಮ ಕುಟುಂಬದವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಈಗಾಗಲೇ ದೌಡಾಯಿಸಿರುವ ಭದ್ರತಾ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.
Advertisement