ನಾಳೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಸಾಲದ ದೊರೆ ವಿಜಯ್ ಮಲ್ಯ

ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು ಇದೇ ಮೊದಲ ಬಾರಿಗೆ...
ವಿಜಯ್ ಮಲ್ಯ
ವಿಜಯ್ ಮಲ್ಯ
ಲಂಡನ್: ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, ಭಾರತಕ್ಕೆ ಬೇಕಾಗಿರುವ ಘೋಷಿತ ಅಪರಾಧಿ ವಿಜಯ್ ಮಲ್ಯ ಅವರು ಫಾರ್ಮುಲಾ-1 ಬ್ರಿಟಿಷ್ ಗ್ರಾಂಡ್ ಪ್ರಿಕ್ಸ್ ಬೃಹತ್ ಕಾರ್ಯರ್ಯಕ್ರಮಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಂಡಗಳ ಮಾಲೀಕರೊಂದಿಗೆ ಲಂಡನ್ ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಕಳೆದ ಮಾರ್ಚ್ ನಿಂದ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮಲ್ಯ ನಾಳೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ರಾಂಡ್ ಪ್ರಿಕ್ಸ್ ಕಾರ್ಯಕ್ರಮ ತಂಡದ ಮುಖ್ಯಸ್ಥರಾದ ಮೌರಿಝಿಯೋ ಅರಿವಾಬೆನೆ, ಎರಿಕ್ ಬೌಲಿಯರ್, ಡೇವ್ ರಾಯನ್ ಮತ್ತಿತರರ ಜೊತೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ವಿಜಯ್ ಮಲ್ಯ ಅವರು 17 ವಿವಿಧ ಬ್ಯಾಂಕ್ ಗಳಿಂದ 9 ಸಾವಿರ ಕೋಟಿ ರುಪಾಯಿ ಸಾಲ ಪಡೆದಿದ್ದು, ಕಳೆದ ಮಾರ್ಚ್ 2ರಂದು ದೇಶ ತೊರೆದು, ಲಂಡನ್ ನಲ್ಲಿ ನೆಲೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com