ವಿಚ್ಚೇದನಕ್ಕಾಗಿ ಪತ್ನಿ ಗಲಾಟೆ; ಬರೊಬ್ಬರಿ 7 ಗಂಟೆ ವಿಮಾನ ಹಾರಾಟ ಸ್ಥಗಿತ!

ಪತಿಯೊಂದಿಗಿನ ಜಗಳ ತಾರಕಕ್ಕೇರಿ ಮಹಿಳೆಯೊಬ್ಬಳು ತತ್ ಕ್ಷಣ ವಿಚ್ಛೇಧನಕ್ಕೆ ಆಗ್ರಹಿಸಿದ ಕಾರಣ ಟೇಕ್ ಆಫ್ ಗೆ ಸಿದ್ದವಿದ್ದ ವಿಮಾನವೊಂದು ಬರೊಬ್ಬರಿ 7 ಗಂಟೆ ತಡವಾಗಿ ಹಾರಾಟ ನಡೆಸಿದ ಘಟನೆ ರಷ್ಯಾದಲ್ಲಿ ನಡೆದಿದೆ.
ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ (ಇನ್ಸ್ ಟಾಗ್ರಾಮ್ ಚಿತ್ರ)
ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ (ಇನ್ಸ್ ಟಾಗ್ರಾಮ್ ಚಿತ್ರ)

ಮಾಸ್ಕೋ: ಪತಿಯೊಂದಿಗಿನ ಜಗಳ ತಾರಕಕ್ಕೇರಿ ಮಹಿಳೆಯೊಬ್ಬಳು ತತ್ ಕ್ಷಣ ವಿಚ್ಛೇಧನಕ್ಕೆ ಆಗ್ರಹಿಸಿದ ಕಾರಣ ಟೇಕ್ ಆಫ್ ಗೆ ಸಿದ್ದವಿದ್ದ ವಿಮಾನವೊಂದು ಬರೊಬ್ಬರಿ 7 ಗಂಟೆ ತಡವಾಗಿ  ಹಾರಾಟ ನಡೆಸಿದ ಘಟನೆ ರಷ್ಯಾದಲ್ಲಿ ನಡೆದಿದೆ.

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ನಡೆಸಿದ ಗಲಾಟೆಯಿಂದಾಗಿ ವಿಮಾನದ ಭದ್ರತಾ ಸಿಬ್ಬಂದಿಗಳೇ ಪರದಾಡುವ ಪರಿಸ್ಥಿತಿ ಎದುರಾಗಿತ್ತು.  ರಷ್ಯಾದ  ಮಾಸ್ಕೋದಿ೦ದ ವ್ಲಾಡಿವೋಸ್ಕೋಕ್‍ಗೆ ಪ್ರಯಾಣಿಸುತ್ತಿದ್ದ ರೋಸ್ಸಿಯಾ ಏರ್ ಲೈನ್ಸ್ ವಿಮಾನದಲ್ಲಿದ್ದ ಸುಮಾರು 40 ವರ್ಷ ವಯಸ್ಸಿನ ಮಹಿಳೆ ವಿಮಾನ ಇನ್ನೇನು ಟೇಕ್ ಆಫ್ ಆಗಬೇಕು  ಎನ್ನುವ ವೇಳೆ ಪೈಲಟ್ ಕ್ಯಾಬಿನ್ ಬಂದು ಗಲಾಟೆ ಎಬ್ಬಿಸಿದ್ದಾಳೆ. ತಾನು ತನ್ನ ಗಂಡನೊಂದಿಗೆ ವಿಚ್ಚೇದನ ಪಡೆಯಬೇಕು. ಪ್ರಸ್ತುತ ನಾನು ವಿಮಾನದಲ್ಲಿ ಪ್ರಯಾಣಿಸುವ ಮನಸ್ಥಿತಿಯಲ್ಲಿ ಇಲ್ಲ.  ಹೀಗಾಗಿ ನನ್ನನು ಕೂಡಲೇ ಕೆಳಗಿಳಿಸಿ ಎಂದು ಗಲಾಟೆ ಮಾಡಿದ್ದಾಳೆ.

ವಿಮಾನದ ಭದ್ರತಾ ಸಿಬ್ಬಂದಿಗಳು ಮತ್ತು ಗಗನ ಸಖಿಯರು ಆಕೆಯನ್ನು ಸಮಾಧಾನಗೊಳಿಸಲು ಎಷ್ಟೇ ಪ್ರಯತ್ನಿಸಿದರೂ ಸುಮ್ಮುನಾಗದೇ ತಾನು ಕೆಳಗಿಳಿಯಲೇ ಬೇಕು ಎಂದು ಹಠ  ಮಾಡಿದ್ದಾಳೆ. ಈ ವೇಳೆ ವಿಮಾನದಲ್ಲಿ ಇತರೆ ಪ್ರಯಾಣಿಕರು ಆಕೆ ವಿರುದ್ಧ ಗಲಾಟೆ ಮಾಡಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತಾಗಿತ್ತು. ವಿಮಾನದಲ್ಲಿ ಸುಮಾರು 500  ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಎಲ್ಲ ಪ್ರಯಾಣಿಕರು ಮಹಿಳೆಯನ್ನು ಕೆಳಗಿಳಿಸುವಂತೆ ಒತ್ತಾಯಿಸಿದ್ದರು.

ಹೀಗಾಗಿ ವಿಮಾನ ಹಾರಾಟವನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಲಾಯಿತು. ಬಳಿಕ ಸುಮಾರು 7 ಗಂಟೆ ತಡವಾಗಿ ಮತ್ತೆ ವಿಮಾನ ವ್ಲಾಡಿವೋಸ್ಕೋಕ್‍ಗೆ ಪ್ರಯಾಣ ಬೆಳೆಸಿದೆ. ಈ  ವಿಚಾರವನ್ನು ವಿಮಾನದ ಮತ್ತೋರ್ವ ಮಹಿಳಾ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲೇ ಶೇರ್ ಮಾಡಿದ್ದು, ಮಹಿಳೆ ಕ್ರಮವನ್ನು ವಿರೋಧಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್  ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com