"ನಾವೆಲ್ಲರೂ ಒಸಾಮರೇ": ಸೇಡು ತೀರಿಸಿಕೊಳ್ಳುವ ಸುಳಿವು ನೀಡಿದ ಲಾಡೆನ್ ಪುತ್ರ!

ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದುರುಳಿಸಿದ ಅಮೆರಿಕ ವಿರುದ್ಧ ಆತನ ಪುತ್ರ ಹಮ್ಜಾ ಬಿನ್ ಲಾಡೆನ್ ಸೇಡು ತೀರಿಸಿಕೊಳ್ಳುವ ಕುರಿತು ಮಾತನಾಡುತ್ತಿದ್ದು, ಆತನ ಮಾತುಗಳನ್ನು ಗುಪ್ತಚರ ಇಲಾಖೆ ಶೇಖರಿಸಿವೆ.
ಬಿನ್ ಲಾಡೆನ್ ಮತ್ತು ಆತನ ಪುತ್ರ ಹಮ್ಜಾ ಬಿನ್ ಲಾಡೆನ್ (ಸಂಗ್ರಹ ಚಿತ್ರ)
ಬಿನ್ ಲಾಡೆನ್ ಮತ್ತು ಆತನ ಪುತ್ರ ಹಮ್ಜಾ ಬಿನ್ ಲಾಡೆನ್ (ಸಂಗ್ರಹ ಚಿತ್ರ)

ದುಬೈ: ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ತಲೆ ಮರೆಸಿಕೊಂಡಿದ್ದ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದುರುಳಿಸಿದ ಅಮೆರಿಕ ವಿರುದ್ಧ ಆತನ ಪುತ್ರ ಹಮ್ಜಾ ಬಿನ್  ಲಾಡೆನ್ ಸೇಡು ತೀರಿಸಿಕೊಳ್ಳುವ ಕುರಿತು ಮಾತನಾಡುತ್ತಿದ್ದು, ಆತನ ಮಾತುಗಳನ್ನು ಗುಪ್ತಚರ ಇಲಾಖೆ ಶೇಖರಿಸಿವೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಹಮ್ಜಾ ಬಿನ್ ಲಾಡೆನ್, ಅಲ್ ಖೈದಾ ಉಗ್ರರಿಗೆ ಅಮೆರಿಕ ವಿರುದ್ಧ ತಾವು ಸೇಡು ತೀರಿಸಿಕೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ. ಸುಮಾರು 21  ನಿಮಿಷಗಳ ಕಾಲ ಹಮ್ಜಾ ಬಿನ್ ಲಾಡೆನ್ ಮಾಡಿರುವ ಭಾಷಣದ ಸಂಪೂರ್ಣ ವಿವರಗಳನ್ನೊಳಗೊಂಡ ಆಡಿಯೋ ಟೇಪ್ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಲಭ್ಯವಾಗಿದ್ದು, ಅದರಲ್ಲಿ ಹಮ್ಜಾ ಬಿನ್  ಲಾಡೆನ್ ಅಮೆರಿಕ ವಿರುದ್ಧ ದಾಳಿ ಮಾಡುವ ಮೂಲಕ ಅಲ್ ಖೈದಾ ಸಂಘಟನೆ ಗತಕಾಲದ ವೈಭವವನ್ನು ಮರಳಿಸುವುದಾಗಿ ಹೇಳಿದ್ದಾನೆ. ಆನ್ ಲೈನ್ ನಲ್ಲಿ ಈ ಹೇಳಿಕೆ ಬಿಡುಗಡೆಯಾಗಿದ್ದು,  ಅಮೆರಕ ಗುಪ್ತಚರ ಇಲಾಖೆ ಇದರ ಪರಿಶೀಲನೆಯಲ್ಲಿ ತೊಡಗಿದೆ.

ಇನ್ನು ಈ ಆಡಿಯೋ ಟೇಪ್ ನಲ್ಲಿ, "ಅಮೆರಿಕ ವಿರುದ್ಧದ ಹೋರಾಟಗಳು ಮತ್ತು ದಾಳಿ ಇನ್ನು ಮುಂದೆಯೂ ಮುಂದುವರೆಯಲಿದೆ. ಪ್ಯಾಲೆಸ್ಚೀನಿಯರು, ಅಫ್ಘನ್ನರು, ಸಿರಿಯಾ ಇರಾಕ್, ಯೆಮನ್  ಮತ್ತು ಸೊಮಾಲಿಯಾ ಮೇಲಿನ ದಬ್ಬಾಳಿಕೆಯನ್ನು ನಾವು ವಿರೋಧಿಸುತ್ತೇವೆ. ಅಮಾಯಕ ಮುಸ್ಲಿಮರ ವಿರುದ್ಧ ನಿಮ್ಮ ದೌರ್ಜನ್ಯವನ್ನು ಕೊನೆಗಾಣಿಸುವುದೇ ನಮ್ಮ ಗುರಿಯಾಗಿದೆ. ಇನ್ನು ಕೆಲವೇ  ದಿನಗಳಲ್ಲಿ ಈ ದೇಶಗಳಲ್ಲಿನ ದಬ್ಬಾಳಿಕೆ ಕೊನೆಯಾಗುತ್ತದೆ ಎಂದು ಹಮ್ಜಾ ಬಿನ್ ಲಾಡೆನ್ ಹೇಳಿದ್ದಾನೆ.

ಅಂತೆಯೇ ಅಮೆರಿಕ ವಿರುದ್ಧ ಹೋರಾಡುತ್ತಿದ್ದ ಶೇಖ್ ಒಸಾಮಾರನ್ನು (ಬಿನ್ ಲಾಡೆನ್)ರನ್ನು ಮೋಸದಿಂದ ಕೊಲ್ಲಲಾಗಿತ್ತು. ನಮ್ಮ ಎಲ್ಲ ಇಸ್ಲಾಂ ರಾಷ್ಟ್ರಗಳು ಒಗ್ಗೂಡಿ ಶೇಖ್ ಒಸಾಮರ ಹತ್ಯೆ  ಸೇಡು ತೀರಿಸಿಕೊಳ್ಳುತ್ತೇವೆ. ಒಸಾಮಾರ ಮೇಲೆ ಅಲ್ಲಾಹುವಿನ ದಯೆಯಿದೆ. ನಮ್ಮ ಹೋರಾಟ ಕೇವಲ ಒಸಾಮರನ್ನು ಕೊಂದವ ವಿರುದ್ಧವೇ ಮಾತ್ರವಲ್ಲ ಇಸ್ಲಾಮ್ ವಿರೋಧಿಸುವವರ ವಿರುದ್ಧ  ಎಂದು ಹಮ್ಜಾ ಹೇಳಿದ್ದಾನೆ.

ಕಳೆದ 2011ರ ಮೇ 2ರಂದು ಅಮೆರಿಕದ ನೇವಿಸೀಲ್ ಪಡೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರ ಆಜ್ಞೆ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಬಿನ್ ಲಾಡೆನ್ ನನ್ನು ಕೊಂದು ಹಾಕಿತ್ತು.  ಪಾರಿಸ್ತಾನದ ಆಬೋಟಾಬಾದ್ ನಲ್ಲಿ ಅವಿತಿದ್ದ ಅಲ್ ಖೈದಾ ಮುಖ್ಯಸ್ಥನ ವಿವರ ಪಡೆದ ನೇವಿ ಸೀಲ್ ಪಡೆಯ ಹೆಲಿಕಾಪ್ಟರ್ ಗಳು ತಡಮಾಡದೇ ಪಾಕಿಸ್ತಾನದ ರಾಡಾರ್ ಗಳ ಕಣ್ತಪ್ಪಿಸಿ ಒಳಗೆ  ನುಗ್ಗಿ ಅಬೋಟಾಬಾದ್ ನಿವಾಸದಲ್ಲಿದ್ದ ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆಗೈದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com