ಸುಡಾನ್ ನಲ್ಲಿ ಹಿಂಸಾಚಾರ (ಸಂಗ್ರಹ ಚಿತ್ರ)
ಸುಡಾನ್ ನಲ್ಲಿ ಹಿಂಸಾಚಾರ (ಸಂಗ್ರಹ ಚಿತ್ರ)

ಆಂತರಿಕ ಗಲಭೆಯಿಂದಾಗಿ ಹೊತ್ತಿ ಉರಿಯುತ್ತಿರುವ ಸುಡಾನ್; ಹಿಂಸಾಚಾರದಲ್ಲಿ ಬರೊಬ್ಬರಿ 300 ಮಂದಿ ಸಾವು

ದಕ್ಷಿಣ ಸುಡಾನ್ ನ ರಾಜಧಾನಿ ಜುಬಾದಲ್ಲಿ ಸೈನಿಕರು ಮತ್ತು ಪ್ರತಿಭಟನಾಕಾರರ ನಡುವಿನ ಸಂಘರ್ಷ ಭಾನುವಾರ ತೀವ್ರ ಸ್ವರೂಪ ಪಡೆದಿದ್ದು, ಇವರೆಗೂ ಬರೊಬ್ಬರಿ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಜುಬಾ: ದಕ್ಷಿಣ ಸುಡಾನ್ ನ ರಾಜಧಾನಿ ಜುಬಾದಲ್ಲಿ ಕಳೆದ ಶುಕ್ರವಾರದಿಂದ ನಡೆಯುತ್ತಿರುವ ಆಂತರಿಕ ಗಲಭೆ ಅಂತ್ಯಗೊಳ್ಳುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಸೈನಿಕರು ಮತ್ತು  ಪ್ರತಿಭಟನಾಕಾರರ ನಡುವಿನ ಸಂಘರ್ಷ ಭಾನುವಾರ ತೀವ್ರ ಸ್ವರೂಪ ಪಡೆದಿದ್ದು, ಇವರೆಗೂ ಬರೊಬ್ಬರಿ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಸುಡಾನ್ ನ ಐದನೇ ಸ್ವಾತಂತ್ರ್ಯೊತ್ಸವ ಆಚರಣೆಯ ವೇಳೆ ಭುಗಿಲೆದ್ದ ಹಿಂಸಾಚಾರ ಸತತ ಮೂರು ದಿನಗಳೇ ಕಳೆದರೂ ತಣ್ಣಗಾಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಅಧ್ಯಕ್ಷ ಸಲ್ವ ಕೀರ್ ಮತ್ತು   ಪದಚ್ಯುತ ಉಪಾಧ್ಯಕ್ಷ ರಿಯೆಕ್ ಮಚಾರ್ ಅವರ ಬೆಂಬಲಿಗರ ನಡುವಿನ ಅಧಿಕಾರದ ದಾಹಕ್ಕೆ ಇಡೀ ಸುಡಾನ್ ಹೊತ್ತಿ ಉರಿಯುತ್ತಿದ್ದು, ತಮ್ಮ ಪದಚ್ಯುತಿಯನ್ನು ವಿರೋಧಿಸಿರುವ ಉಪಾಧ್ಯಕ್ಷ  ರಿಯೆಕ್ ಮಚಾರ್, "ಸಾವು-ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎನ್ನುವ ಮೂಲಕ ತಮ್ಮ ಹೋರಾಟ ಮುಂದುವರಿಸುವ ಸುಳಿವು ನೀಡಿದ್ದಾರೆ.

ಶುಕ್ರವಾರ ಆರಂಭಗೊಂಡ ದಾಳಿಯಿಂದಾಗಿ ಈ ವರೆಗೂ ಸುಮಾರು 150ಕ್ಕೂ ಹೆಚ್ಚು ಯೋಧರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಓರ್ವ  ಚೀನಾ ಮೂಲದ ವಿಶ್ವಸಂಸ್ಥೆಯ ಶಾಂತಿ ಪರಿಪಾಲನಾ ಪಡೆಯ ಓರ್ವ ಯೋಧ ಕೂಡ ಸೇರಿದ್ದಾನೆ.

ಸ್ವದೇಶಕ್ಕೆ ವಾಪಸಾಗಲು ಸುಡಾನ್ ವಿದೇಶಗರಿಗೆ ನಿರ್ದೇಶನ

ಈ ನಡುವೆ ಸುಡಾನ್​ನಲ್ಲಿರುವ ಲಕ್ಷಾಂತರ ವಿದೇಶಿಗರು ಈಗಾಗಲೇ ತಮ್ಮ ತವರಿನತ್ತ ಮುಖ ಮಾಡಿದ್ದು,  ಆಯಾ ದೇಶಗಳ ಸರ್ಕಾರ ‘ಸುಡಾನ್ ಬಿಟ್ಟು ಬನ್ನಿ ಎಂಬ ಸಂದೇಶ ರವಾನಿಸಿದೆ.  ಬ್ರಿಟನ್, ಫ್ರಾನ್ಸ್ ಮತ್ತು ಭಾರತ ಮತ್ತು ಚೀನಾ ದೇಶಗಳು ಸುಡಾನ್ ನಲ್ಲಿರುವ ತಮ್ಮ ದೇಶಗಳ ಪ್ರಜೆಗಳ ಸುರಕ್ಷತೆಗಾಗಿ ಆಧ್ಯತೆ ನೀಡಿವೆ. ಇನ್ನು  ಬ್ರಿಟಿಷ್ ರಾಯಭಾರ ಕಚೇರಿ ತನ್ನ ಸಿಬ್ಬಂದಿ  ಕಡಿಮೆಗೊಳಿಸಿ, ಅಗತ್ಯ ಸಿಬ್ಬಂದಿಗೆ ಮಾತ್ರ ಅಲ್ಲಿರುವಂತೆ ಹೇಳಿರುವುದಾಗಿ ಬ್ರಿಟನ್​ನ ವಿದೇಶಾಂಗ ಅಧಿಕಾರಿಗಳು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com