ಪೀಸ್ ಟಿವಿ ಚಾನಲ್ ನಂತರ ಬಾಂಗ್ಲಾದಲ್ಲಿ ಪೀಸ್ ಮೊಬೈಲ್ ಗೂ ನಿಷೇಧ

ಪೀಸ್ ಟಿವಿ ಚಾನಲ್ ನ್ನು ನಿಷೇಧಿಸಿದ ನಂತರ ಬಾಂಗ್ಲಾದೇಶದ ಸರ್ಕಾರ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನ ಪೀಸ್ ಮೊಬೈಲ್ ಫೋನ್ ನ್ನು ನಿಷೇಧಿಸಿದೆ.
ಪೀಸ್ ಟಿವಿ ಚಾನಲ್ ನಂತರ ಬಾಂಗ್ಲಾದಲ್ಲಿ ಪೀಸ್ ಮೊಬೈಲ್ ಗೂ ನಿಷೇಧ
ಪೀಸ್ ಟಿವಿ ಚಾನಲ್ ನಂತರ ಬಾಂಗ್ಲಾದಲ್ಲಿ ಪೀಸ್ ಮೊಬೈಲ್ ಗೂ ನಿಷೇಧ

ಢಾಕಾ: ಪೀಸ್ ಟಿವಿ ಚಾನಲ್ ನ್ನು ನಿಷೇಧಿಸಿದ ನಂತರ ಬಾಂಗ್ಲಾದೇಶದ ಸರ್ಕಾರ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನ ಪೀಸ್ ಮೊಬೈಲ್ ಫೋನ್ ನ್ನು ನಿಷೇಧಿಸಿದೆ.

ಜಾಕಿರ್ ನಾಯಕ್ ಗೆ ಸಂಬಂಧಿಸಿದ ಎಲ್ಲಾ ಪ್ರಚಾರಗಳನ್ನು ನಿಷೇಧಿಸಲು ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ ಬಂದಿದ್ದು, ಪೀಸ್ ಮೊಬೈಲ್ ಗಳಿಗೆ ಇನ್ನು ಮುಂದೆ ಬಾಂಗ್ಲಾ ದೇಶದಲ್ಲಿ ಅನುಮತಿ ಇರುವುದಿಲ್ಲ ಎಂದು ಬಾಂಗ್ಲಾ ದೇಶದ ದೂರಸಂಪರ್ಕ ನಿಯಂತ್ರಣ ಸಂಸ್ಥೆಯ ಅಧ್ಯಕ್ಷ ಷಹಜಹಾನ್ ಮಹಮೂದ್ ಸ್ಪಷ್ಟಪಡಿಸಿದ್ದಾರೆ.

ಢಾಕಾದಲ್ಲಿ ಭಯೋತ್ಪಾದಕ ದಾಳಿ ನಡೆಸಿ 20 ಜನರ ಹತ್ಯೆಗೆ ಕಾರಣರಾದ ಉಗ್ರರಿಗೆ ಜಾಕಿರ್ ನಾಯಕ್ ಹಾಗೂ ಆತನ ಭಾಷಣಗಳು ಸ್ಫೂರ್ತಿಯಾಗಿದ್ದವು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಜಾಕಿರ್ ನಾಯಕ್ ನ ಇಸ್ಲಾಮ್ ಸಂಪರ್ಕ, ಆತನ ಭಾಷಣ ಹಾಗೂ ವ್ಯವಹಾರ, ಟಿವಿ ಚಾನಲ್ ಗಳಿಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ಮೂಲಕ ತನಿಖೆ ನಡೆಸಿದ್ದ ಬಾಂಗ್ಲಾ ದೇಶ ಸರ್ಕಾರ ಇತ್ತೀಚೆಗಷ್ಟೇ ಪೀಸ್ ಟಿವಿಯನ್ನು ನಿಷೇಧಿಸಿತ್ತು.

ಇಸ್ಲಾಮಿಕ್ ಮೊಬೈಲ್ ಹ್ಯಾಂಡ್ ಸೆಟ್ ಗಳೆಂದು ಮಾರ್ಕೆಟಿಂಗ್ ಮಾಡಲಾಗುವ ಜಾಕಿರ್ ನಾಯಕ್ ನ ಪೀಸ್ ಮೊಬೈಲ್ ಗಳನ್ನು ಬೆಕ್ಸಿಂಕೋ ಕಂಪನಿ ಆಮದು ಮಾಡಿಕೊಳ್ಳುತ್ತಿತ್ತು. ಜಾಕಿರ್ ನಾಯಕ್ ನ ಪೀಸ್ ಮೊಬೈಲ್ ಫೋನ್ ಗಳಲ್ಲಿ ಇಸ್ಲಾಮ್ ನ ವಾಲ್ ಪೇಪರ್, ಕುರಾನ್ ನ ಆಯ್ಕೆಗಳನ್ನು ನೀಡಲಾಗುತ್ತಿತ್ತು. 2014 ರಲ್ಲಿ ಬೆಕ್ಸಿಂಕೋ ಕಂಪನಿ ಜಾಕಿರ್ ನಾಯಕ್ ನ ನೇತೃತ್ವದ ಸಂಸ್ಥೆಯ 500 ಪೀಸ್ ಮೊಬೈಲ್ ಗಳನ್ನು ಖರೀದಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com