ಡೊನಾಲ್ಡ್ ಟ್ರಂಪ್ ವಿರುದ್ಧ 100 ಮಹಿಳೆಯರಿಂದ ಬೆತ್ತಲೆ ಪ್ರತಿಭಟನೆ

ರಿಪಬ್ಲಿಕನ್ ಪಕ್ಷದಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಸೋಮವಾರ...
ಮಹಿಳೆಯರ ಪ್ರತಿಭಟನೆ
ಮಹಿಳೆಯರ ಪ್ರತಿಭಟನೆ
ಕ್ಲೀವ್​ಲ್ಯಾಂಡ್: ರಿಪಬ್ಲಿಕನ್ ಪಕ್ಷದಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಸೋಮವಾರ ಸುಮಾರು 100 ಮಹಿಳೆಯರು ಬೆತ್ತಲೆ ಪ್ರತಿಭಟನೆ ನಡೆಸಿದರು.
ಅಧ್ಯಕ್ಷ ಸ್ಥಾನಕ್ಕೆ ಡೊನಾಲ್ಡ್ ಟ್ರಂಪ್ ಸೂಕ್ತ ವ್ಯಕ್ತಿ ಅಲ್ಲ ಎಂದು ಬಿಂಬಿಸಲು ‘ರಾಜಕೀಯ ಕಲಾ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ’ ಛಾಯಾಚಿತ್ರಗಾರರು ನೀಡಿದ ಕರೆಗೆ ಸ್ಪಂದಿಸಿದ ನೂರಕ್ಕೂ ಅಧಿಕ ಮಹಿಳೆಯರು ಇಂದು ನಗ್ನವಾಗಿ ಕನ್ನಡಿ ಹಿಡಿದುಕೊಂಡು ಪ್ರದರ್ಶನ ನಡೆಸಿದರು.
ಪಕ್ಷದ ಅಧ್ಯಕ್ಷ ಸ್ಥಾನದ ಪ್ರಾಥಮಿಕ ಅಭ್ಯರ್ಥಿಯಾಗಿ ಟ್ರಂಪ್ ಅವರನ್ನು ಆಯ್ಕೆ ಮಾಡಲಾದ ರಿಪಬ್ಲಿಕನ್ ಪಕ್ಷದ ಸಭೆಯಲ್ಲಿಯೇ ಮಹಿಳೆಯರು ಈ ನಗ್ನ ಪ್ರತಿಭಟನೆ ನಡೆಸಿದರು.
ಇನ್ನು ಪ್ರತಿಭಟನೆ ಆಯೋಜಿಸಿದ್ದ ಛಾಯಾಚಿತ್ರಗಾರ ಸ್ಪೆನ್ಸರ್ ಟುನಿಕ್ ಸನ್​ರೈಸ್ ಫೋಟೊ ಶೂಟ್​ನಲ್ಲಿ ‘ಟ್ರಂಪ್ ಒಬ್ಬ ‘ಲೂಸರ್’ ಎಂದು ಕರೆದಿದ್ದಾನೆ. ಅಲ್ಲದೆ 130 ಕ್ಕೂ ಅಧಿಕ ಮಹಿಳೆಯರು ನವೆಂಬರ್ 8 ರ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಟ್ರಂಪ್ ವಿರುದ್ಧ ಪ್ರತಿಭಟನಾ ಫೋಟೊಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಟ್ರಂಪ್ ವಿರುದ್ಧ ರಾಜಕೀಯ ವಿರೋಧಿ ಚಿತ್ರಗಳನ್ನು ಬಿಡುಗಡೆ ಮಾಡುತ್ತಿರುವ ಟುನಿಕ್, ಡೊನಾಲ್ಡ್ ಟ್ರಂಪ್​ಗೆ ಮಹಿಳೆಯರ ಬಗ್ಗೆ ಉತ್ತಮ ಭಾವನೆಯಿಲ್ಲ, ತಮ್ಮ ಭಾಷಣದಲ್ಲೂ ಹಿಡಿತವಿಲ್ಲ. ಆದ್ದರಿಂದ ಅವರ ವಿರುದ್ಧ ಚುನಾವಣೆ ಕ್ಷೇತ್ರದಲ್ಲಿ ಕನ್ನಡಿ ಹಿಡಿದ ನಗ್ನ ಮಹಿಳೆಯರ ಫೋಟೊಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com