ಮ್ಯೂನಿಚ್ ಶೂಟೌಟ್ ಹಂತಕನಿಗೆ ಇಸಿಸ್ ಸಂಪರ್ಕ ಇರಲಿಲ್ಲ; ಸಾಮೂಹಿಕ ಹತ್ಯೆಗಳ ಗೀಳು ಇತ್ತು: ಪೊಲೀಸರು

ಜರ್ಮನಿಯ ಮ್ಯೂನಿಚ್ ನಗರದ ಶಾಪಿಂಗ್ ಮಾಲ್ ಮತ್ತು ಫಾಸ್ಟ್ ಫುಡ್ ರೆಸ್ಟೋರೆಂಟ್​ನಲ್ಲಿ ಕಳೆದ ರಾತ್ರಿ ಗುಂಡಿನ ದಾಳಿ ನಡೆಸಿ...
ಶೂಟೌಟ್ ನಡೆದ ಸ್ಥಳ
ಶೂಟೌಟ್ ನಡೆದ ಸ್ಥಳ
ಮ್ಯೂನಿಚ್: ಜರ್ಮನಿಯ ಮ್ಯೂನಿಚ್ ನಗರದ ಶಾಪಿಂಗ್ ಮಾಲ್ ಮತ್ತು ಫಾಸ್ಟ್ ಫುಡ್ ರೆಸ್ಟೋರೆಂಟ್​ನಲ್ಲಿ ಕಳೆದ ರಾತ್ರಿ ಗುಂಡಿನ ದಾಳಿ ನಡೆಸಿ 9 ಮಂದಿಯನ್ನು ಕೊಂದು 16 ಮಂದಿಯನ್ನು ಗಾಯಗೊಳಿಸಿ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡ 18ರ ಹರೆಯದ ಹಂತಕನಿಗೆ ಇಸಿಸ್ ಜೊತೆ ಸಂಪರ್ಕವಿರಲಿಲ್ಲ. ಸಾಮೂಹಿಕ ಹತ್ಯೆಗಳ ಗೀಳು ಇತ್ತು ಎಂದು ಪೊಲೀಸರು ಹೇಳಿದ್ದಾರೆ.
ಮ್ಯೂನಿಚ್ ಶೂಟೌಟ್ ನಡೆಸಿದ ವ್ಯಕ್ತಿಯ ಮನೆಯಲ್ಲಿ ‘ರ್ಯಾಂಪೇಜ್ ಇನ್ ಹೆಡ್: ವೈ ಸ್ಟೂಡೆಂಟ್ಸ್ ಕಿಲ್’ ಶೀರ್ಷಿಕೆಯ ಪುಸ್ತಕ ಸೇರಿದಂತೆ ಸಾಮೂಹಿಕ ಹತ್ಯೆಗೆ ಸಂಬಂಧಿಸಿದ ಅಸಂಖ್ಯಾತ ಸಾಹಿತ್ಯ ಪತ್ತೆಯಾಗಿದೆ. ಆದರೆ ಇಸಿಎಸ್ ನಂತಹ ಯಾವುದೇ ಉಗ್ರಗಾಮಿ ಸಂಘಟನೆಗಳ ಜೊತೆಗೆ ಸಂಪರ್ಕ ಇದ್ದ ಬಗೆಗಿನ ಯಾವುದೇ ಸಾಕ್ಷ್ಯಾಧಾರವೂ ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹಂತಕನಿಗೆ ಇಸಿಸ್ ಸಂಪರ್ಕ ಖಂಡಿತವಾಗಿಯೂ ಇರಲಿಲ್ಲ’ ಎಂದು ಮ್ಯೂನಿಚ್ ಪೊಲೀಸ್ ಮುಖ್ಯಸ್ಥ ಹಬರ್ಟಸ್ ಆಂಡ್ರೇ ಹೇಳಿದರು. ‘ಆದರೆ ಆತನಿಗೆ ಸಾಮೂಹಿಕ ಹತ್ಯೆಗಳ ಚಾಳಿ ಇತ್ತು’ ಎಂದು ಗೊತ್ತಾಗಿದೆ ಎಂದು ಅವರು ಹೇಳಿದರು.
ಹಂತಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದುದಕ್ಕೆ ಸಾಕ್ಷ್ಯಾಧಾರ ಲಭಿಸಿದೆ. ಆತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ದಾಖಲೆಗಳೂ ಸಿಕ್ಕಿವೆ. ಆದರೆ ಈ ಬಗೆಗಿನ ವಿವರಗಳನ್ನು ಇನ್ನೂ ದೃಢಪಡಿಸಿಕೊಳ್ಳಬೇಕಾಗಿದೆ ಎಂದು ಮ್ಯೂನಿಚ್ ಪ್ರಾಸೆಕ್ಯೂಟರ್ ಸ್ಟೀಕ್ರೌಸ್-ಕೋಚ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com