
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್, ಜರ್ಮನಿ ಹಾಗೂ ಫ್ರಾನ್ಸ್ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಸ್ವಯಂಕೃತ ಅಪರಾಧ ಎಂದು ದೂರಿದ್ದಾರೆ.
ಇತ್ತೀಚಿನ ದಾಳಿಗಳಿಗೆ ಜರ್ಮನಿ ಹಾಗೂ ಫ್ರಾನ್ಸ್ ಅವರನ್ನು ಅವರೇ ದೂಷಿಸಿಕೊಳ್ಳಬೇಕು ಏಕೆಂದರೆ, ತಮ್ಮ ಪ್ರದೇಶಕ್ಕೆ ಅನ್ಯರು ವಲಸೆ ಬರುವುದಕ್ಕೆ ಅವಕಾಶ ನೀಡಿದರು ಎಂದು ಟ್ರಂಪ್ ಹೇಳಿದ್ದಾರೆ. ಭಯೋತ್ಪಾದನೆ ತಡೆಗೆ ಸರಿಯಾದ ಸೂತ್ರ ಜಾರಿಗೆ ಬರುವವರೆಗೂ ಭಯೋತ್ಪಾದನೆಯನ್ನು ಉತ್ತೇಜಿಸುವ ರಾಷ್ಟ್ರಗಳಿಂದ ವಲಸೆ ಬರುವವರನ್ನು ನಿಷೇಧಿಸಬೇಕೆಂಬ ಅಭಿಪ್ರಾಯವನ್ನು ಹೊಂದಿರುವ ಟ್ರಂಪ್, ಜರ್ಮನಿ ಹಾಗೂ ಫ್ರಾನ್ಸ್ ತಮ್ಮ ದೇಶದೊಳಗೆ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶದ ವಲಸಿಗರನ್ನು ಬಿಟ್ಟಿದ್ದೆ ಪದೇ ಪದೇ ಸಂಭವಿಸುತ್ತಿರುವ ಉಗ್ರ ದಾಳಿಗೆ ಕಾರಣ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಜರ್ಮನಿ ಹಾಗೂ ಫ್ರಾನ್ಸ್ ಭಯೋತ್ಪಾದನೆ ವಿಷಯದಲ್ಲಿ ಸಂಪೂರ್ಣವಾಗಿ ರಾಜಿಮಾಡಿಕೊಂಡಿದ್ದಾರೆ. ಇದು ಅವರದ್ದೇ ಸ್ವಯಂಕೃತ ಅಪರಾಧದ ಪರಿಣಾಮ ಟ್ರಂಪ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಟ್ರಂಪ್ ಚುನಾವಣಾ ಆಖಾಡಕ್ಕೆ ಇಳಿದಾಗಿನಿಂದಲೂ ಭಯೋತ್ಪಾದನೆಯನ್ನು ಉತ್ತೇಜಿಸುವ ರಾಷ್ಟ್ರಗಳ ವಲಸಿಗರಿಗೆ ಅಮೆರಿಕಾದಲ್ಲಿ ಪ್ರವೇಶ ನಿರ್ಬಂಧಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Advertisement