ಕ್ಲಿಂಟನ್ ಹಾಗೂ ನಾನು, ಹಿಲರಿಯಷ್ಟು ಅರ್ಹತೆ ಹೊಂದಿಲ್ಲ: ಬರಾಕ್ ಒಬಾಮ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಹಿಲರಿ ಅವರನ್ನು ಹೊಗಳುವ ಮೂಲಕ ಅವರಿಗೆ ಬೆಂಬಲ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಹಿಲರಿ ಕ್ಲಿಂಟನ್ (ಸಂಗ್ರಹ ಚಿತ್ರ)
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಹಿಲರಿ ಕ್ಲಿಂಟನ್ (ಸಂಗ್ರಹ ಚಿತ್ರ)

ಫಿಲಡೆಲ್ಫಿಯಾ: ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ಆಯ್ಕೆಯಾದ ಬೆನ್ನಲ್ಲೇ ಅವರನ್ನು ಬೆಂಬಲಿಸುವಂತೆ ಆ ಪಕ್ಷದ ಮುಖಂಡರು ಜನರನ್ನು ಕೇಳುತ್ತಿದ್ದು, ಸ್ವತಃ ಅಮೆರಿಕ  ಅಧ್ಯಕ್ಷ ಬರಾಕ್ ಒಬಾಮಾ ಅವರು ಹಿಲರಿ ಅವರನ್ನು ಹೊಗಳುವ ಮೂಲಕ ಅವರಿಗೆ ಬೆಂಬಲ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ತಮ್ಮ ಒಂದು ಕಾಲದ ರಾಜಕೀಯ ಶತ್ರು ಹಾಗೂ ಪ್ರಸ್ತುತ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಹಿಲರಿ ಕ್ಲಿಂಟನ್ ಪರ ಬ್ಯಾಟಿಂಗ್ ಮಾಡಿರುವ ಬರಾಕ್ ಒಬಾಮ ಅವರು, ಅಮೆರಿಕ  ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಸೇರಿದಂತೆ ತಾವೂ ಕೂಡ ಅಮೆರಿಕ ಅಧ್ಯಕ್ಷೀಯ ಪದವಿಗೆ ಹಿಲರಿ ಕ್ಲಿಂಟನ್ ರಷ್ಟು ಅರ್ಹತೆ ಪಡೆದಿಲ್ಲ ಎಂದು ಹೇಳಿದ್ದಾರೆ. ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದ  ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬರಾಕ್ ಒಬಾಮಾ ಅವರು, "ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಸೇರಿದಂತೆ ನಾನು ಕೂಡ  ಅಮೆರಿಕ ಅಧ್ಯಕ್ಷ ಪದವಿಗೆ ಹಿಲರಿ ಹೊಂದಿರುವಷ್ಟು ಅರ್ಹತೆ ಹೊಂದಿಲ್ಲ ಎಂದು ನಾನು ತುಂಬಾ ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ ಎಂದು ಹೇಳಿದರು.

"ಭವಿಷ್ಯದ ಅಮೆರಿಕ ಬಗ್ಗೆ ನಾನು ತುಂಬಾ ಆಶಾವಾದಿಯಾಗಿದ್ದು, ಅಮೆರಿಕ ಜನರ ಆಗು-ಹೋಗುಗಳ ಬಗ್ಗೆ ಚಿಂತಿಸುವ ವ್ಯಕ್ತಿಯನ್ನು ನಾವು ಅರಿಸುವ ಗುರಿ ನಮ್ಮ ಮುಂದಿದೆ. ದೇಶದ ಆರ್ಥಿಕ  ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ, ಪ್ರತಿಯೊಬ್ಬರಿಗೂ ಹೆಚ್ಚೆಚ್ಚು ಔದ್ಯೋಗಿಕ ಅವಕಾಶಗಳನ್ನು ಸೃಷ್ಟಿಸಬಲ್ಲ ಸಮರ್ಥವ್ಯಕ್ತಿಯನ್ನು ಆರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು  ಒಬಾಮಾ ಹೇಳಿದರು.

ಟಾರ್ಗೆಟ್ ಟ್ರಂಪ್
ಇದೇ ವೇಳೆ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ ಒಬಾಮ, ತಮ್ಮ ವೈಯುಕ್ತಿಕ ಲಾಭಕ್ಕಾಗಿ 70 ವರ್ಷ ಕಳೆದ, ತಮ್ಮದೇ  ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳ ಬಗ್ಗೆ ಕಾಳಜಿ ಇಲ್ಲ ಮತ್ತು ಸದಾಕಾಲ ಬೇರೊಬ್ಬರನ್ನು ಟೀಕಿಸುವ ವ್ಯಕ್ತಿ ಇಂದು ದೇಶದ ಜನರ ಧ್ವನಿಯಾಗಲು ಹೊರಟಿದ್ದಾರೆ. ಅವರ ಪ್ರತೀ  ಭಾಷಣದಲ್ಲೂ ಧ್ವೇಷ, ಉದ್ವೇಗಗಳೇ ಕಾಣುತ್ತಿವೆಯೇ ಹೊರತು ಅಮೆರಿಕದ ಪ್ರಜೆಗಳಿಗಾಗಿ ಕೈಗೊಳ್ಳಬಹುದಾದ ಹೊಸ ಯೋಜನೆಗಳು, ಹೊಸ ಉದ್ಯೋಗ ಸೃಷ್ಟಿ ಕುರಿತ ಯಾವುದೇ  ಮಾತುಗಳು ಇಲ್ಲ. ಇಂತಹ ವ್ಯಕ್ತಿಯನ್ನು ನಮ್ಮ ಪ್ರತಿನಿಧಿಯಾಗಿ ಆರಿಸಬೇಕೆ? ಎಂದು ಒಬಾಮ ಪ್ರಶ್ನಿಸಿದರು.

ಅಮೆರಿಕದ ಅಧ್ಯಕ್ಷೀಯ ಪದವಿ ಕೇವಲ ಅಮೆರಿಕದ ಪ್ರಜೆಗಳಿಗೆ ಮಾತ್ರವಲ್ಲದೇ ಇಡೀ ಪ್ರಪಂಚದ ಪ್ರಜೆಗಳ ದೃಷ್ಟಿಯಲ್ಲಿ ಪ್ರಮುಖವಾಗಿದ್ದು, ಡೆಮಾಕ್ರಟಿಕ್ ಪಕ್ಷ ಉತ್ತಮ ವ್ಯಕ್ತಿಗಳ ಕೈಯಲ್ಲಿದೆ.  ಇದೇ ಕಾರಣಕ್ಕಾಗಿ ನಾವು ನಮ್ಮ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ರಂತಹ ಸಮರ್ಥ ಹಾಗೂ ದಕ್ಷ ವ್ಯಕ್ತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ ಎಂದು ಒಬಾಮ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com