ಚೀನಾದ ‘ಡಂಪ್ ವಿತ್ ಟ್ರಂಪ್' ಟಾಯ್ಲೆಟ್ ಪೇಪರ್ ’ಗೆ ಅಮೆರಿಕಾದಲ್ಲಿ ಭಾರಿ ಬೇಡಿಕೆ

ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುತ್ತಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು...
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುತ್ತಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಈ ಬಾರಿ ‘ಡಂಪ್ ವಿತ್ ಟ್ರಂಪ್' ಟಾಯ್ಲೆಟ್ ಪೇಪರ್ ನಿಂದ ಸುದ್ದಿಯಾಗಿದ್ದಾರೆ. 
ಸದಾ ಚೀನಾ ವಿರುದ್ಧ ಹರಿಹಾಯುತ್ತಿದ್ದ ಟ್ರಂಪ್ ಗೆ ಬುದ್ದಿಕಲಿಸಬೇಕೆಂದು ನಿರ್ಧರಿಸಿದ ಚೀನಾ ಮೂಲದ ಕಂಪೆನಿಗಳು ಟ್ರಂಪ್ ಹೆಸರಿನ ಟಾಯ್ಲಟ್ ಪೇಪರ್ ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. 
ಕಳೆದ ಫೆಬ್ರವರಿಯಿಂದ ಚೀನಾ ಕಂಪನಿಗಳು ಈ ಟಾಯ್ಲೆಟ್ ಪೇಪರ್ ತಯಾರು ಮಾಡುತ್ತಿದ್ದು, ಯೂಸ್ ಆ್ಯಂಡ್ ಥ್ರೋ ಪೆಪರ್ ನಲ್ಲಿ ಟ್ರಂಪ್ ಅವರ ಮುಖದ ವಿವಿಧ ಭಾವಾಚಿತ್ರಗಳನ್ನು ಮುದ್ರಿಸಿದ್ದಾರೆ. ಅಲ್ಲದೆ ಅದರ ಮೇಲೆ ಡಂಪ್ ವಿತ್ ಟ್ರಂಪ್ ಎಂಬ ಘೋಷಣೆಯನ್ನು ಮುದ್ರಿಸಲಾಗಿದೆ. ಈಗ ಅಮೆರಿಕದಲ್ಲಿ ಈ ಟಾಯ್ಲಟ್ ಪೇಪರ್ ಗೆ ಅತಿ ಹೆಚ್ಚಿನ ಬೇಡಿಕೆ ಇದೆ.
ಟಾಯ್ಲೆಟ್ ಪೇಪರ್ ಗಳನ್ನು ತಯಾರಿಸುವ ಕಂಪೆನಿಗಳಲ್ಲೊಂದಾದ ಕಿಂಗ್ಡೋ ಎಂಬ ಕಂಪೆನಿಯ ಸುಮಾರು 5000 ಸಾವಿರ ಪೇಪರ್ ಗಳಿಗೆ ಜನ ಕಾಯ್ದಿರಿಸಿದ್ದಾರೆ. ಚೀನಾದ ಈ-ಕಾಮರ್ಸ್ ವ್ಯವಹಾರದಲ್ಲೂ ಜನ  ಇದನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ ಎಂದು ಸೋಮವಾರ ವರದಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com