ಎನ್ ಎಸ್ ಜಿ ಸೇರ್ಪಡೆಗೆ ಅಮೆರಿಕ ಬೆಂಬಲ ಕೋರಿದ ಪಾಕ್

ಪರಮಾಣು ಪೂರೈಕೆದಾರರ ಸಮೂಹಕ್ಕೆ ಭಾರತವನ್ನು ಸೇರ್ಪಡೆಗೊಳಿಸಲು ಇಡೀ ವಿಶ್ವವೇ ಬೆಂಬಲ ನೀಡಿದ ಬೆನ್ನಲ್ಲೇ ಅತ್ತ ಪಾಕಿಸ್ತಾನ ಕೂಡ ಎನ್ ಎಸ್ ಜಿ ಸೇರ್ಪಡೆಗೆ ತಮಗೂ ಬೆಂಬಲ ನೀಡುವಂತೆ ಅಮೆರಿಕಕ್ಕೆ ಮನವಿ ಮಾಡಿದೆ.
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತು ಒಬಾಮ (ಸಂಗ್ರಹ ಚಿತ್ರ)
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತು ಒಬಾಮ (ಸಂಗ್ರಹ ಚಿತ್ರ)

ಲಾಹೋರ್: ಪರಮಾಣು ಪೂರೈಕೆದಾರರ ಸಮೂಹಕ್ಕೆ ಭಾರತವನ್ನು ಸೇರ್ಪಡೆಗೊಳಿಸಲು ಇಡೀ ವಿಶ್ವವೇ ಬೆಂಬಲ ನೀಡಿದ ಬೆನ್ನಲ್ಲೇ ಅತ್ತ ಪಾಕಿಸ್ತಾನ ಕೂಡ ಎನ್ ಎಸ್ ಜಿ ಸೇರ್ಪಡೆಗೆ ತಮಗೂ ಬೆಂಬಲ ನೀಡುವಂತೆ ಅಮೆರಿಕಕ್ಕೆ ಮನವಿ ಮಾಡಿದೆ.

ಭಾರತದ ದಶಕಗಳ ಕನಸಾಗಿದ್ದ ಪರಮಾಣು ಪೂರೈಕೆದಾರರ ಒಕ್ಕೂಟ (ಎನ್ ಎಸ್ ಜಿ) ಸೇರ್ಪಡೆ ನನಸಾಗುತ್ತಿರುವ ಬೆನ್ನಲ್ಲೇ ಇದಕ್ಕೆ ಕೊಕ್ಕೆ ಹಾಕಲು ಪಾಕಿಸ್ತಾನ ಮುಂದಾಗಿದ್ದು, ಪರಮಾಣು ಪೂರೈಕೆದಾರರ ಒಕ್ಕೂಟ ಸೇರಲು ತಾನೂ ಕೂಡ ಶಕ್ತನಾಗಿದ್ದು, ತನಗೂ ಬೆಂಬಲ ನೀಡುವಂತೆ ಅಮೆರಿಕ ಸರ್ಕಾರದ ಬಳಿ ಮನವಿ ಮಾಡಿದೆ.

ಭಾರತದ ಎನ್ ಎಸ್ ಜಿ ಸೇರ್ಪಡೆಯನ್ನು ಪರೋಕ್ಷವಾಗಿ ತಡೆಯಲೆತ್ನಿಸಿರುವ ಪಾಕಿಸ್ತಾನ ತಾನೂ ಕೂಡ ಎನ್ ಎಸ್ ಜಿ ಸೇರ್ಪಡೆಗೆ ಶಕ್ತನಾಗಿದ್ದು, ತನಗೂ ಬೆಂಬಲ ನೀಡುವಂತೆ ಅಮೆರಿಕದ  ಬಳಿ ಮನವಿ ಮಾಡಿದೆ ಈ ಸಂಬಂಧ ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಗೆ ಪತ್ರವೊಂದನ್ನು ಬರೆದಿರುವ ಪಾಕಿಸ್ತಾನದ ರಾಯಭಾರಿ ಜಲೀಲ್ ಅಬ್ಬಾಸ್ ಜಿಲಾನಿ  ಅವರು, ಪಾಕಿಸ್ತಾನವನ್ನು ಎನ್ ಎಸ್ ಜಿ ಸಮೂಹಕ್ಕೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪರಮಾಣು ಪೂರೈಕೆದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಪಾಕಿಸ್ತಾನ ಉತ್ಸುಕವಾಗಿದ್ದು, ಎನ್ ಎಸ್ ಜಿ ಸೇರ್ಪಡೆ ಅರ್ಹತೆಯು ತಾಂತ್ರಿಕ ಅನುಭವ, ಪರಮಾಣು ಸುರಕ್ಷತೆ ಮತ್ತು ಪರಮಾಣು  ಘಟಕಗಳ ಸುರಕ್ಷಿತ ಸಂಬಂಧ ಸುಸ್ಥಾಪಿತ ಬದ್ಧತೆಯ ಆಧಾರದ ಮೇಲೆ ಪಾಕಿಸ್ತಾನ ನಿಂತಿದೆ. ಪಾಕಿಸ್ತಾನ ತನ್ನ ನೆಲದಲ್ಲಿರುವ ಪರಮಾಣು ಘಟಕಗಳನ್ನು 42ವರ್ಷಗಳಿಂದ ಸುರಕ್ಷಿತವಾಗಿ ಕಾಯ್ದುಕೊಂಡು ಬಂದಿದೆ. ಪಾಕಿಸ್ತಾನದ ಭವಿಷ್ಯದ ಇಂಧನ ಭದ್ರತೆಗಾಗಿ ಸುರಕ್ಷಿತ ಹಾಗೂ ಸುಸ್ಥಿರ ನಾಗರೀಕ ಪರಮಾಣು ಯೋಜನೆ ಅತ್ಯಗತ್ಯ. ಹೀಗಾಗಿ ಪಾಕಿಸ್ತಾನಕ್ಕೆ ಎನ್ ಎಸ್ ಜಿ ಸೇರ್ಪಡೆ ಅನಿವಾರ್ಯ ಎಂದು ಜಿಲಾನಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com