ಒರ್ಲಾಂಡೋ ಶೂಟೌಟ್ ಘಟನೆಗೆ ಕ್ಷಮೆ ಕೋರಿದ ದಾಳಿಕೋರನ ತಂದೆ

ಭಾನುವಾರ ಅಮೆರಿಕಾದ ಫ್ಲೋರಿಡಾದ ಒರ್ಲಾಂಡೋದ ಗೇ ನೈಟ್ ಕ್ಲಬ್ ನಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ೫೦ ಜನ ಮೃತಪಟ್ಟು, ೫೩ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈಗ ಈ ಘಟನೆಗೆ
ಒರ್ಲಾಂಡೋ ಶೂಟೌಟ್ ದಾಳಿಕೋರ ಒಮರ್ ಮಟೀನ್
ಒರ್ಲಾಂಡೋ ಶೂಟೌಟ್ ದಾಳಿಕೋರ ಒಮರ್ ಮಟೀನ್

ನ್ಯೂಯಾರ್ಕ್: ಭಾನುವಾರ ಅಮೆರಿಕಾದ ಫ್ಲೋರಿಡಾದ ಒರ್ಲಾಂಡೋದ ಗೇ ನೈಟ್ ಕ್ಲಬ್ ನಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ೫೦ ಜನ ಮೃತಪಟ್ಟು, ೫೩ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈಗ ಈ ಘಟನೆಗೆ ದಾಳಿಕೋರನ ತಂದೆ ಕ್ಷಮೆ ಕೋರಿದ್ದಾರೆ.

"ಇಡಿ ಘಟನೆಗೆ ನಾವು ಕ್ಷಮೆ ಕೋರುತ್ತೇವೆ. ಅವನು ಯೋಜಿಸಿದ್ದ ಈ ಕೃತ್ಯದ ಅರಿವಿರಲಿಲ್ಲ ನಮಗೆ. ಇಡೀ ದೇಶ ಬೆಚ್ಚಿದಂತೆ ನಮಗೂ ಆಘಾತವಾಗಿದೆ. ಇದು ಮತಧರ್ಮಕ್ಕೆ ಸಂಬಂಧಿಸಿದ್ದಲ್ಲ" ಎಂದು ಗುಂಡು ಹಾರಿಸಿದ ವ್ಯಕ್ತಿಯ ತಂದೆ ಮೀರ್ ಸೆದ್ದಿಖ್ ಹೇಳಿರುವುದಾಗಿ ಎಂ ಎಸ್ ಏನ್ ಬಿ ಸಿ ವರದಿ ಮಾಡಿದೆ.

ಇತ್ತೀಚೆಗೆ ಡೌನ್ ಟೌನ್ ಮಯಾಮಿಯಲ್ಲಿ ಇಬ್ಬರು ಪುರುಷರು ಚುಂಬಿಸುತ್ತಿದ್ದಾಗ ಅವರ ಮಗ ಕುಪಿತಗೊಂಡಿದ್ದ ಎಂದು ತಿಳಿಸಿರುವ ತಂದೆ "ಬೇಸೈಡ್ ನ ಡೌನ್ ಟೌನ್ ಮಯಾಮಿಗೆ ಇತ್ತೀಚೆಗೆ ಬಂದಿದ್ದೆವು. ಅಲ್ಲಿ ಜನ ಸಂಗೀತ ನುಡಿಸುತ್ತಿದ್ದರು.

"ತನ್ನ ಪತ್ನಿ ಮತ್ತು ಮಗುವಿನ ಎದುರು ಇಬ್ಬರು ಪುರುಷರು ಪರಸ್ಪರ ಚುಂಬಿಸುತ್ತಿದ್ದವರನ್ನು ನೋಡಿ ಅವನು ಕುಪಿತಗೊಂಡಿದ್ದ" ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುಂಚಿತವಾಗಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾನುವಾರ ನಡೆದ ಘಟನೆ 'ಭಯೋತ್ಪಕ ಮತ್ತು ದ್ವೇಷದ ಕೃತ್ಯ' ಎಂದಿದ್ದರು.

ಈ ಘಟನೆಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹೊತ್ತಿದೆ. ಸಂಘಟನೆಯ ಸುದ್ದಿ ಏಜೆನ್ಸಿ ಅಮಕ್ ನಲ್ಲಿ ಹೇಳಿಕೊಂಡಿರುವಂತೆ ದಾಳಿಕೋರ ಒಮರ್ ಮಟೀನ್ "ಕ್ಲ್ಯಾಲಿಫತ್ ನ ಸೈನಿಕ" ಎಂದಿದೆ ಎಂದು ದ ಟೆಲಿಗ್ರಾಫ್ ವರದಿ ಮಾಡಿದೆ.

ಆದರೆ ಮಟೀನ್ ಮತ್ತು ಸಂಘಟನೆಯ ಸಂಬಂಧವನ್ನು ಸ್ಪಷ್ಟೀಕರಿಸದ ಈ ಸಂದೇಶದ ಭಾಷೆಯ ಪ್ರಕಾರ ಒಮರ್ ಒಂಟಿ ದಾಳಿಕೋರ ಎಂದು ಸೂಚಿಸುವಂತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com